ಕಂಗನಾ ರನೌತ್- ಕುಲ್ವಿಂದರ್ ಕೌರ್
ಗುರುವಾರ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ನಟಿ ಕಂಗನಾ ರನೌತ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಚೆಕಿಂಗ್ ವೇಳೆ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರನೌತ್ ಆರೋಪಿಸಿದ್ದರು.ನವದೆಹಲಿ: ಚಂಡೀಗಢ ವಿಮಾನ ನಿಲ್ದಾಣದಲ್ಲಿ (Chandigarh Airport) ನಟಿ , ಬಿಜೆಪಿ ಸಂಸದೆ ಕಂಗನಾ ರನೌತ್‌ಗೆ (Kangana Ranaut) ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿರುವ ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಕುಲ್ವಿಂದರ್ ಕೌರ್ರನ್ನ (CISF woman constable Kulwinder Kaur) ಅಮಾನತು ಮಾಡಲಾಗಿದೆ. ಜೊತೆಗೆ ಆರೋಪಿ ವಿರುದ್ಧ ಸಿಐಎಸ್‌ಎಫ್ ತನಿಖೆ ಆರಂಭಿಸಿದೆ. ಮಾಹಿತಿ ಪ್ರಕಾರ ತಕ್ಷಣಕ್ಕೆ ಜಾರಿ ಬರುವಂತೆ ಮಹಿಳಾ ಪೇದೆಯನ್ನು ಅಮಾನತು (Suspend) ಮಾಡಲಾಗಿದೆ. ಸಿಐಎಸ್‌ಎಫ್ ಅಧಿಕಾರಿಗಳ ನೀಡಿರುವ ಲಿಖಿತ ದೂರಿನ ಆಧಾರದ ಮೇಲೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಸಿಐಎಸ್‌ಎಫ್‌ನಿಂದ ಸ್ಥಳೀಯ ಪೊಲೀಸರಿಗೂ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.ಪರಿಶೀಲನೆ ವೇಳೆ ಹಲ್ಲೆಸಂಬಂಧಿತ ಸುದ್ದಿKangana Ranaut: ನೀವು ರಾಕ್ ಸ್ಟಾರ್! ಗೆಲುವಿನ ನಂತರ ಕಂಗನಾಗೆ ವಿಶ್ ಮಾಡಿದ ನಟ ಅನುಪಮ್ ಖೇರ್ಇದು ಸನಾತನ ಧರ್ಮಕ್ಕೆ ಸಿಕ್ಕ ಜಯ ಎಂದ ಕಂಗನಾ, ಮೋದಿ ಬಗ್ಗೆ ಬಾಲಿವುಡ್ ಕ್ವೀನ್ ಹೇಳಿದ್ದೇನು?ಸ್ಮೃತಿ ಇರಾನಿಯ ಕೆರಿಯರ್ ಹಾಳು ಮಾಡಿದ್ದು ಕಂಗನಾ! ಶಾಕಿಂಗ್ ಟ್ವೀಟ್ ಮಾಡಿದ್ದು ಯಾರು ಗೊತ್ತಾ?ಕ್ವೀನ್ ಕಂಗನಾಗೆ ಆರಂಭಿಕ ಮುನ್ನಡೆ! ಖ್ಯಾತ ರಾಜಕಾರಣಿ ದಂಪತಿಯ ಸುಪುತ್ರನಿಗೆ ಸೋಲು ಖಚಿತ?ಗುರುವಾರ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ನಟಿ ಕಂಗನಾ ರನೌತ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಚೆಕಿಂಗ್ ವೇಳೆ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರನೌತ್ ಆರೋಪಿಸಿದ್ದರು. ರೈತರ ಆಂದೋಲನದ ವೇಳೆ ಕಂಗನಾ ಹೇಳಿಕೆಯಿಂದ ಕೋಪಗೊಂಡ ಕಾನ್‌ಸ್ಟೆಬಲ್ ಬಿಜೆಪಿ ಸಂಸದೆಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗುತ್ತಿದೆ. Kangana Ranaut: ಸಂಸದೆ ಕಂಗನಾ ರನೌತ್‌ಗೆ ಕಪಾಳಮೋಕ್ಷ? ಗಂಭೀರ ಆರೋಪ ಮಾಡಿದ ಬಾಲಿವುಡ್ ನಟಿ | ಗೃಹಸಚಿವಾಲಯದಲ್ಲಿ ದೂರುಕಂಗನಾ ರನೌತ್ಗೆ ಕಪಾಳಮೋಕ್ಷ ಮಾಡಿದ ನಂತರ ವಿಮಾನ ನಿಲ್ದಾಣದಲ್ಲಿ ಭಾರೀ ಗೊಂದಲ ಉಂಟಾಗಿತ್ತು. ಕಂಗನಾ ತುಂಬಾ ಕೋಪ ಭದ್ರತಾ ಸಿಬ್ಬಂದಿ ವಿರುದ್ಧ ಕೂಗಾಡುತ್ತಿದ್ದರು. ಕಂಗನಾ ರಣಾವತ್ ಅವರ ಸಿಬ್ಬಂದಿ ಕೂಡ ಈ ಘಟನೆಯ ಬಗ್ಗೆ ಸಿಐಎಸ್ಎಫ್ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದದ್ದು ಕಂಡು ಬಂದಿತು.ದೆಹಲಿಗೆ ತೆರಳುವುದಕ್ಕಾಗಿ ಕಂಗನಾ ಚಂಡೀಗಢ ವಿಮಾನ ನಿಲ್ದಾಣಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಚೆಕಿಂಗ್ಗೆ ನಿಂದಿದ್ದರು. ಈ ವೇಳೆ ಕಂಗನಾಗೆ ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಪರಿಶೀಲನೆ ಮಾಡುವ ವೇಳೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಸಂಸದೆ ಆರೋಪಿಸಿದ್ದಾರೆ. ಆಕೆ ವಿರುದ್ಧ ಗೃಹಸಚಿವಾಲಯದಲ್ಲಿ ದೂರು ದಾಖಲಿಸುವುದಾಗಿ ಕಂಗನಾ ತಿಳಿಸಿದ್ದಾರೆರೈತ ಮಹಿಳೆಯರ ಬಗ್ಗೆ ಕೀಳು ಮಾತುಪಂಜಾಬ್‌ನ ಮಹಿಳೆಯರು ಹಣಕ್ಕಾಗಿ ಚಳವಳಿಯಲ್ಲಿ ಭಾಗವಹಿಸುತ್ತಾರೆ ಎಂದು ರೈತರ ಚಳವಳಿಯಲ್ಲಿ ಕುಳಿತಿರುವ ಮಹಿಳೆಯರ ಬಗ್ಗೆ ಕಂಗನಾ ರಣಾವತ್ ಕೀಳಾಗಿ ಮಾತನಾಡಿದ್ದರು. ಇವರೆಲ್ಲಾ 100-200 ರೂಪಾಯಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ಕಪಾಳಮೋಕ್ಷ ಆರೋಪದ ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ತಿಳಿಸಿದ್ದರು. ಆ ಪ್ರತಿಭಟನೆಯಲ್ಲಿ ಆಕೆ ತಾಯಿ ಕೂಡ ಭಾಗವಹಿಸಿದ್ದರು, ಹಾಗಾಗಿ ಕಂಗನಾ ಅವರ ಈ ಹೇಳಿಕೆಯಿಂದ ಕಾನ್‌ಸ್ಟೆಬಲ್ ತುಂಬಾ ಕೋಪಗೊಂಡಿದ್ದರು ಎಂದು ತಿಳಿದುಬಂದಿದೆ.ಕಂಗನಾ ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆಗೆ ಲೋಕ ಜನಶಕ್ತಿ ಪಕ್ಷದ (ರಾಮ್‌ವಿರಾಸ್) ಮುಖ್ಯಸ್ಥ ಮತ್ತು ಸಂಸದ ಚಿರಾಗ್ ಪಾಸ್ವಾನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಂಗನಾಗೆ ಏನಾಗಿದೆಯೋ ಅದು ದುರಂತ ಎಂದು ಹೇಳಿದ್ದಾರೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Post a Comment