ಸಚಿವ ನಾಗೇಂದ್ರ
ನನ್ನ ಸ್ವಇಚ್ಚೆಯಿಂದ ರಾಜಿನಾಮೆ ಕೊಡ್ತಿನಿ ಅಂತ ನಾಗೇಂದ್ರ ಹೇಳಿದ್ದಾರೆ. ತನಿಖೆ ಆಗ್ತಿದೆ, ತನಿಖೆ ವೇಳೆ ನಾನು ಅಧಿಕಾರದಲ್ಲಿ ಇರಬಾರದು ಅಂತ ನಾನು ರಾಜಿನಾಮೆ ಕೊಡ್ತಿದ್ದೀನಿ ಅಂತ ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.ಬೆಂಗಳೂರು: ಇಂದು ಸಂಜೆ 7.30ಕ್ಕೆ ನಾನು ರಾಜೀನಾಮೆ (Resign) ನೀಡುತ್ತೇನೆ ಅಂತ ಸಚಿವ ಬಿ ನಾಗೇಂದ್ರ (Minister B Nagendra) ಸ್ಪಷ್ಟಪಡಿಸಿದ್ದಾರೆ. ರಾಜೀನಾಮೆ ವದಂತಿ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಸಚಿವರು, ರಾಜ್ಯದ ಜನತೆ ದಿಕ್ಕು ತಪ್ಪಬಾರದು ಅಂತ ನಾನು ನನ್ನ ಸ್ವ ಇಚ್ಛೆಯಿಂದ ಇಂದು ಸಂಜೆ 7.30ಕ್ಕೆ ರಾಜಿನಾಮೆ ನೀಡ್ತೇನೆ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ರಾಜಿನಾಮೆ ಪತ್ರ ಕೊಡ್ತೀನಿ ಅಂತ ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ.ಸ್ವಇಚ್ಛೆಯಿಂದ ರಾಜೀನಾಮೆ ಕೊಡುತ್ತೇನೆನನ್ನ ಸ್ವಇಚ್ಚೆಯಿಂದ ರಾಜಿನಾಮೆ ಕೊಡ್ತಿನಿ ಅಂತ ನಾಗೇಂದ್ರ ಹೇಳಿದ್ದಾರೆ. ತನಿಖೆ ಆಗ್ತಿದೆ, ತನಿಖೆ ವೇಳೆ ನಾನು ಅಧಿಕಾರದಲ್ಲಿ ಇರಬಾರದು ಅಂತ ನಾನು ರಾಜಿನಾಮೆ ಕೊಡ್ತಿದ್ದೀನಿ ಅಂತ ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ. ಡೆತ್‌ನೋಟ್‌ನಲ್ಲಿ ನನ್ನ ಹೆಸರು ಉಲ್ಲೇಖಿಸಿಲ್ಲಈ ಪ್ರಕರಣದಲ್ಲಿ ನಾನು ನಿರ್ದೋಷಿಯಾಗಿ ಬರ್ತಿನಿ ಅಂತ ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆತ್ಮ ಹತ್ಯೆ ಮಾಡಿಕೊಂಡಿರುವ ಅಧಿಕಾರಿ ಎಲ್ಲೂ ನನ್ನ ಹೆಸರನ್ನು ಉಲ್ಲೇಖ ಮಾಡಿಲ್ಲ ಅಂತ ನಾಗೇಂದ್ರ ಹೇಳಿದ್ದಾರೆ.ಇದನ್ನೂ ಓದಿ: Dr Manjunath: ಡಾ ಮಂಜುನಾಥ್ ಗೆಲುವಿಗೆ ಮುಸ್ಲಿಂ ವ್ಯಕ್ತಿ ಹರಕೆ, ಮಾದೇಶ್ವರನ ದೇಗುಲಕ್ಕೆ ತೆರಳಿ ಮುಡಿ ಅರ್ಪಣೆ!ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಡ ಅಂದ್ರುಯಾರಿ ಕೂಡ ಒತ್ತಡದಿಂದ ನನ್ನ ರಾಜಿನಾಮೆ ಕೇಳಿಲ್ಲ. ಮುಖ್ಯಮಂತ್ರಿಗಳು ಕೂಡ ರಾಜಿನಾಮೆ ಕೊಡಬೇಡ ಅಂತ ಹೇಳಿದ್ರು, ಆದ್ರೆ ನಾನೇ ಸ್ವಇಚ್ಛೆಯಿಂದ ರಿಸೈನ್ ಮಾಡ್ತೀನಿ ಅಂತ ನಾಗೇಂದ್ರ ಹೇಳಿದರು. ಇದೆಲ್ಲ ನನ್ನ ಗಮನಕ್ಕೆ ಬರದೆ ಆಗಿರುವಂತದ್ದು ಅಂತ ತಮ್ಮ ಪಾತ್ರ ಈ ಪ್ರಕರಣದಲ್ಲಿಲ್ಲ ಅಂತ ನಾಗೇಂದ್ರ ಹೇಳಿದ್ದಾರೆ.ಪೆನ್ ಡ್ರೈವ್ ಬಗ್ಗೆ ನನಗೆ ಗೊತ್ತಿಲ್ಲಪೆನ್ ಡ್ರೈವ್ ಬಗ್ಗೆ ನನಗೆ ಗೊತ್ತಿಲ್ಲ. ಯಾವ ಪೆನ್ ಡ್ರೈವ್ ಅಂತ ರಾಜ್ಯದ ಜನರಿಗೆ ಗೊತ್ತಿದೆ ಅಂತ ನಾಗೇಂದ್ರ ವ್ಯಂಗ್ಯವಾಡಿದ್ರು. ಯಾರಿಗೂ ಮುಜುಗರ ಆಗದ ರೀತಿ ರಾಜೀನಾಮೆ ಕೊಡ್ತಿನಿ. ಗ್ಯಾರಂಟಿ ಯೋಜನೆಗಳ ಅನುಷ್ಟಾನ ಮಾಡಿ ಆಡಳಿತ ಮಾಡ್ತಿದ್ದೀವಿ ಅಂತ ನಾಗೇಂದ್ರ ಹೇಳಿದ್ದಾರೆ.

Post a Comment