Rahul Gandhi: ರಾಯ್‌ಬರೇಲಿ, ವಯನಾಡ್, ಯಾವ ಸ್ಥಾನವನ್ನು ತ್ಯಜಿಸುತ್ತೀರಿ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ಏನು ಗೊತ್ತಾ?


 ರಾಹುಲ್ ಗಾಂಧಿ

 Lok Sabha Election Results 2024: ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಮತ್ತು ವಯನಾಡ್ ಕ್ಷೇತ್ರಗಳಿಂದ ಭಾರಿ ಮತಗಳಿಂದ ಗೆದ್ದಿದ್ದಾರೆ. ಅವರು ರಾಯ್ ಬರೇಲಿಯಿಂದ 4 ಲಕ್ಷ ಮತಗಳಿಂದ ಮತ್ತು ವಯನಾಡಿನಿಂದ 3 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಆದರೆ ಈಗ ಅವರು ಯಾವ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ.ನವದೆಹಲಿ: ಲೋಕಸಭೆ ಚುನಾವಣೆ 2024ರಲ್ಲಿ (Lok Sabha Election 2024) ಕಾಂಗ್ರೆಸ್ ಪಕ್ಷ ಉತ್ತಮ ಮುನ್ನಡೆ ಸಾಧಿಸಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದೆ. ತಮ್ಮ ಮೂಗಿನ ನೇರಕ್ಕೆ ಬಹುತೇಕ ಸಂಸ್ಥೆಗಳು ನಡೆಸಿದ ಎಕ್ಸಿಟ್‌ ಪೋಲ್‌ಗಳ ಭವಿಷ್ಯ ನಿಜವಲ್ಲ, ನಮ್ಮ ಮತವೇ ನಿಜವಾದ ತೀರ್ಪು ಅನ್ನೋದನ್ನು ಮತದಾರರು ಸಾಬೀತುಪಡಿಸಿದ್ದಾರೆ. ಆ ಮೂಲಕ ಎಕ್ಸಿಟ್ ಪೋಲ್‌ಗಳ ವಿಶ್ವಾಸಾರ್ಹತೆ ಮತ್ತೊಮ್ಮೆ ಕುಸಿದಿದೆ.ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸರಳ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದ್ದು, ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ಎನ್‌ಡಿಎ ಗೆದ್ದು ಅಧಿಕಾರಕ್ಕೆ ಮತ್ತೊಮ್ಮೆ ಏರುತ್ತಾದರೂ ಅದು ಬಿಜೆಪಿಯ ನಿಜವಾದ ಗೆಲುವಲ್ಲ, ಅತ್ತ ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಒಕ್ಕೂಟ ಬಹುಮತ ಪಡೆಯದೆ ಸೋತರೂ ಅದು ಸೋಲಲ್ಲ. ಯಾಕೆಂದರೆ ಬಿಜೆಪಿ ನಿರೀಕ್ಷಿಸಿದ್ದಕ್ಕಿಂತ ಅರ್ಧದಷ್ಟು ಸ್ಥಾನಗಳು ಕಮ್ಮಿ ಆಗಿವೆ. ವಿಪಕ್ಷಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸ್ಥಾನ ಬಂದಿವೆ. ಇದು ಸೋಲಿನಲ್ಲೂ ಗೆಲವು ಎಂದು ವಿಶ್ಲೇಷಿಸಲಾಗುತ್ತಿದೆ. ಸಂಬಂಧಿತ ಸುದ್ದಿLoksabha Elections: ಅಯೋಧ್ಯೆಯಲ್ಲೇ ಬಿಜೆಪಿಗೆ ಸೋಲೇಕೆ? ರಾಮ ಮಂದಿರ ಸಿಕ್ಕರೂ ಜನರು ದೂರವಾಗಿದ್ದೇಕೆ?ಬಿಜೆಪಿ 240, ಕಾಂಗ್ರೆಸ್ 99, ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿದೆ ಎಂಬ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿSonu Nigam: ಅಯೋಧ್ಯೆಯಲ್ಲಿ BJP ಸೋಲಿನ ನಂತರ ಸೋನು ನಿಗಮ್ ಟ್ರೋಲ್ ಆಗಿದ್ದೇಕೆ?ಕೊನೆಯ ಕ್ಷಣದಲ್ಲಿ ಸಿಕ್ಕಿತ್ತು ಟಿಕೆಟ್, ಕೇವಲ 13 ದಿನವಷ್ಟೇ ಪ್ರಚಾರ, ಈಗ 48 ಮತಗಳಿಂದ ಅಭ್ಯರ್ಥಿಗೆ ಜಯಇದನ್ನೂ ಓದಿ: Ayodhya: ಅಯೋಧ್ಯೆಯಲ್ಲಿ ಬಿಜೆಪಿಗೆ ಬಿಗ್ ಶಾಕ್! ರಾಮಮಂದಿರ ನಿರ್ಮಿಸಿದ ಬಳಿಕವೂ ರಾಮಜನ್ಮಭೂಮಿಯಲ್ಲಿ ಮಕಾಡೆ ಮಲಗಿದ ಕೇಸರಿ ಪಕ್ಷ!ಈತನ್ಮಧ್ಯೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ತಮ್ಮ ಎರಡೂ ಲೋಕಸಭಾ ಕ್ಷೇತ್ರಗಳಾದ ವಯನಾಡ್ ಮತ್ತು ರಾಯ್ ಬರೇಲಿಯಿಂದ ಗೆದ್ದಿದ್ದಾರೆ. ಈ ಗೆಲುವಿನ ವಿಡಿಯೋವನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ವಯನಾಡು ಮತ್ತು ರಾಯ್ ಬರೇಲಿಯ ಜನರ ಅಪಾರ ಪ್ರೀತಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದ್ದು, ಅದು ನನ್ನ ಅಧಿಕಾರದಲ್ಲಿದ್ದರೆ, ನಾನು ಎರಡೂ ಸ್ಥಳಗಳ ಸಂಸದನಾಗಿ ಉಳಿಯಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಎರಡೂ ಸ್ಥಾನಗಳಲ್ಲಿ ಗೆದ್ದಿರುವುದರಿಂದ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕಿದೆ. ಆದರೆ ರಾಹುಲ್ ಗಾಂಧಿಗೆ ವಯನಾಡ್ ರಾಜಕೀಯ ಮರುಜೀವ ಕೊಟ್ಟ ಕ್ಷೇತ್ರವಾದರೆ, ರಾಯ್‌ಬರೇಲಿ ತಮ್ಮ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರ. ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲದಲ್ಲಿ ರಾಹುಲ್ ಗಾಂಧಿ ಇದ್ದಾರೆ ಎಂದು ತಿಳಿದು ಬಂದಿದೆ.ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಮತ್ತು ವಯನಾಡ್ ಕ್ಷೇತ್ರಗಳಿಂದ ಭಾರಿ ಮತಗಳಿಂದ ಗೆದ್ದಿದ್ದು, ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಇದು ಹಾಲಿ ಸಂಸದರು ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು 2019 ರಲ್ಲಿ ಅವರ ಪ್ರತಿಸ್ಪರ್ಧಿ ನಡುವೆ ಗೆದ್ದ ಮತಗಳ ಎರಡು ಪಟ್ಟಿಗೂ ಹೆಚ್ಚು ಅಂತರವಾಗಿದೆ.ವಯನಾಡ್‌ನಲ್ಲಿ 3.64 ಲಕ್ಷ ಮತಗಳ ಅಂತರದ ಗೆಲುವುಅದೇ ಸಮಯದಲ್ಲಿ, ರಾಹುಲ್ ಗಾಂಧಿ ಅವರು ಬಂಪರ್ ಮತಗಳೊಂದಿಗೆ ಎರಡನೇ ಬಾರಿಗೆ ವಯನಾಡಿನಿಂದ ಗೆದ್ದಿದ್ದಾರೆ. 2019ರಲ್ಲಿ ಅವರು ವಯನಾಡಿನಿಂದ 4.31 ಲಕ್ಷ ಮತಗಳಿಂದ ಗೆದ್ದಿದ್ದರು. ಆದರೆ, ಈ ಬಾರಿ ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದಿಂದ 3,64,422 ಮತಗಳಿಂದ ಗೆದ್ದಿದ್ದಾರೆ. ಅವರು ಸಿಪಿಐ ನಾಯಕಿ ಅನ್ನಿ ರಾಜಾ ಅವರನ್ನು ಸೋಲಿಸಿದ್ದಾರೆ. ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ, ಬಿಜೆಪಿ ನಾಯಕ ಕೆ. ಸುರೇಂದ್ರನ್ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.ಇದನ್ನೂ ಓದಿ: Lok Sabha Election Results: 400 ಬಿಡಿ, ಬಿಜೆಪಿ ನೇತೃತ್ವದ ಎನ್‌ಡಿಎಗೆ 300ರ ಗಡಿ ದಾಟಲು ಬಿಡದ ವಿಪಕ್ಷಗಳ ‘ಇಂಡಿಯಾ’ ಒಕ್ಕೂಟ!ವಯನಾಡ್ ಸೀಟಿನ ಸಮೀಕರಣ ಏನು?ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 13,59,679 ಎಂಬುದು ಗಮನಾರ್ಹ. ಈ ಮತದಾರರಲ್ಲಿ, ಪರಿಶಿಷ್ಟ ಜಾತಿಗಳು 3 ಪ್ರತಿಶತ, ಪರಿಶಿಷ್ಟ ಪಂಗಡಗಳು 9.5 ಪ್ರತಿಶತ, ಮುಸ್ಲಿಮರು 32 ಪ್ರತಿಶತ ಮತ್ತು ಕ್ರಿಶ್ಚಿಯನ್ನರು 13 ಪ್ರತಿಶತ. 2019ರ ಚುನಾವಣೆಯಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಮತದಾರರು ರಾಹುಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದಲ್ಲಿ ಸರ್ಕಾರ ರಚಿಸುವವರು ಯಾರು ಗೊತ್ತಾ? ಎನ್‌ಡಿಎ ಮೈತ್ರಿಕೂಟಕ್ಕೆ 294 ಸ್ಥಾನಗಳು ಮತ್ತು ಇಂಡಿಯಾ ಮೈತ್ರಿಕೂಟಕ್ಕೆ 231 ಸ್ಥಾನಗಳು ಲಭಿಸಿದೆ ಎಂಬುದು ಲೋಕಸಭೆಯ ಫಲಿತಾಂಶದಿಂದ ಈಗ ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸ್ವಂತ ಬಲದಿಂದ 272ರ ಗಡಿ ದಾಟಲು ಸಾಧ್ಯವಾಗಿಲ್ಲ. ಆದಾಗ್ಯೂ, ಈ ಸ್ಪರ್ಧೆಯು ಸಾಕಷ್ಟು ಆಸಕ್ತಿದಾಯಕವಾಗಿದೆ. ಇಂತಹ ಸಂದರ್ಭದಲ್ಲಿ ಬೇರೆ ಪಕ್ಷದ ಸಂಸದರನ್ನು ಸೆಳೆಯುವ ಆಪರೇಷನ್ ರಾಜಕಾರಣ ಶುರುವಾಗಲಿದೆ ಎಂಬ ಲೆಕ್ಕಾಚಾರ ಇದೆ.

Post a Comment

Previous Post Next Post