Traffic Violation: ಟ್ರಾಫಿಕ್‌ನಿಂದ ಬರಬೇಕಿದೆ 1700 ಕೋಟಿ ರೂಪಾಯಿ; ದಂಡ ಪಾವತಿಸಲು ಹೊಸ ವೆಬ್‌ಸೈಟ್!

 

ಹೊಸ ವೆಬ್‌ಸೈಟ್

 ಟ್ರಾಫಿಕ್‌ ದಂಡ ಪಾವತಿ ಮಾಡಲು ಹೊಸ ವೆಬ್‌ಸೈಟ್‌ ಬಿಡುಗಡೆಗೊಳಿಸಲಾಗಿದೆ. ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ (Traffic Violation) ಪ್ರಕರಣ ಸಂಬಂಧ ದಂಡ ಪಾವತಿಸಲು ರಾಜ್ಯ ಪೊಲೀಸ್ ಹೊಸದಾಗಿ ವೆಬ್‌ಸೈಟ್ ಪರಿಚಯಿಸಿದೆ. ಈ ಕುರಿತು ಖುದ್ದು ಟ್ರಾಫಿಕ್ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.ಈ ಹಿಂದೆ ಕರ್ನಾಟಕ ಒನ್ (Karnataka One), ಬೆಂಗಳೂರು ಒನ್ ಅಥವಾ ಆಫ್ಲೈನ್ ಮೂಲಕ ಆಯಾಯ ಸಂಚಾರಿ ಠಾಣೆಗೆ ತೆರಳಿ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು.ಆದರೆ,‌ ಇದೀಗ ರಾಜ್ಯ ಪೊಲೀಸ್ ಟ್ರಾಫಿಕ್ ದಂಡ ವಸೂಲಿಗಾಗಿಯೇ ವೆಬ್ ಸೈಟ್ ತೆರೆದಿದೆ. ಈ ಮೂಲಕ ಸುಲಭವಾಗಿ ದಂಡದ ಮೊತ್ತವನ್ನು ಆನ್‌ಲೈನ್ ಪಾವತಿ ಮಾಡಬಹುದಾಗಿದೆ. ಅಚ್ಚರಿ ಅಂದ್ರೆ ಟ್ರಾಫಿಕ್‌ ಸಂಬಂಧಿತ 3.25 ಕೋಟಿ ಪ್ರಕರಣಗಳು ಬಾಕಿ ಇವೆ ಅನ್ನೋದನ್ನ ಟ್ರಾಫಿಕ್‌ & ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್‌ ಮೋಹನ್‌ ತಿಳಿಸಿದ್ದಾರೆ.ಸಂಬಂಧಿತ ಸುದ್ದಿAncestors Rising: ಮೈಸೂರಿನ ಕಬಿನಿ ಹಿನ್ನೀರಲ್ಲಿ ಪ್ರತ್ಯಕ್ಷರಾದ ಶಿವ, ಗಣಪ, ನಂದಿ, ನಾಗ!Bengaluru Rain: ಬೆಂಗಳೂರಿನ ಹಲವೆಡೆ ಮಳೆ; ಉರಿ ಬಿಸಿಲಿನ ನಡುವೆ ತಂಪೆರೆದ ವರುಣ!Bengaluru: ಮದುವೆಗೆ ಒಪ್ಪದ ವಿವಾಹಿತೆ ಮನೆಗೆ ಬೆಂಕಿ ಇಟ್ಟ ಪಾಗಲ್ ಪ್ರೇಮಿ!Fireless Omlet: ಬೆಂಕಿಯಿಲ್ಲದೇ ಬಿಸಿಲಲ್ಲೇ ತಯಾರಾಯ್ತು ಆಮ್ಲೆಟ್, ಲಿಂಗಸುಗೂರಿನ ಯುವಕರ ಪ್ರಯೋಗ ಸಕ್ಸಸ್!ಇದನ್ನೂ ಓದಿ: Bengaluru Rain: ಬೆಂಗಳೂರಿನ ಹಲವೆಡೆ ಮಳೆ; ಉರಿ ಬಿಸಿಲಿನ ನಡುವೆ ತಂಪೆರೆದ ವರುಣ! ಇದರಿಂದಾಗಿ ಮಾರ್ಚ್‌ ಅಂತ್ಯದವರೆಗೆ ನಿಯಮ ಉಲ್ಲಂಘನೆ ಸಂಬಂಧ 1700 ಕೋಟಿ ರೂಪಾಯಿ ದಂಡ ವಸೂಲಿ ಮಾಡಬೇಕಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ 1425 ಕೋಟಿ ರೂಪಾಯಿ ದಂಡ ವಸೂಲಿ ಮಾಡಬೇಕಿದೆ. ದಂಡ ವಸೂಲಿ ಮಾಡುವುದು ಕೂಡಾ ಪೊಲೀಸರಿಗೆ ಸವಾಲಿನ ವಿಚಾರವಾಗಿದ್ದು, ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿದ್ದಾರೆ.ಇದನ್ನೂ ಓದಿ: Shocking News: ವಿಮಾನದಲ್ಲಿ ಎಮರ್ಜೆನ್ಸಿ ಎಕ್ಸಿಟ್‌ ತೆರೆಯಲು ಮುಂದಾದ ಭೂಪ; ಮುಂದೇನಾಯ್ತು ನೋಡಿ!ಇನ್ನೊಂದೆಡೆ, ದಂಡ ಪಾವತಿ ಮಾಡಲು ಕರ್ನಾಟಕ ರಾಜ್ಯ ಪೊಲೀಸ್‌ ವತಿಯಿಂದ ಹೊಸದಾಗಿ ವೆಬ್‌ಸೈಟ್‌ ಬಿಡುಗಡೆಗೊಳಿಸಲಾಗಿದೆ. ಈ ವೆಬ್‌ಸೈಟ್‌ ಮೂಲಕ ಬೆಂಗಳೂರು ಹೊರತಾದ ಎಲ್ಲ ಜಿಲ್ಲೆಯವರು ದಂಡದ ಮೊತ್ತವನ್ನು ಪಾವತಿಸಬಹುದಾಗಿದೆ. https://payfine.mchallan.com:7271/ ಲಾಗಿನ್‌ ಆಗುವ ಮೂಲಕ ಸುಲಭವಾಗಿ ದಂಡ ಪಾವತಿಸಬಹುದಾಗಿದೆ.

Post a Comment

Previous Post Next Post