Neha Hiremath: ಕಾಂಗ್ರೆಸ್ ಪರ ಚುನಾವಣೆ ಪ್ರಚಾರಕ್ಕಿಳಿದ ನೇಹಾ ಹಿರೇಮಠ್ ತಂದೆ; ಹೆಬ್ಬಾಳ್ಕರ್ ಮನೆಯಲ್ಲಿ ಸುದ್ದಿಗೋಷ್ಠಿ


  ಲಕ್ಷ್ಮಿ ಹೆಬ್ಬಾಳ್ಕರ್ ನಿವಾಸದಲ್ಲಿ ನಿರಂಜನ್ ಹಿರೇಮಠ್ ಸುದ್ದಿಗೋಷ್ಠಿ

Niranjan Hiremath: ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಕೂಡ ನಮಗೆ ನೈತಿಕ ಬೆಂಬಲ ಸೂಚಿಸಿದ್ದರು. ಹೀಗಾಗಿ ಕಣದಲ್ಲಿರುವ ಮೃಣಾಲ್‌ ಹೆಬ್ಬಾಳ್ಕರ್‌ಗೆ ಈ ಕ್ಷೇತ್ರದ ಜನರು ಬೆಂಬಲಿಸಬೇಕು ಎಂದು ಮತಯಾಚನೆ ಮಾಡಿದರು.ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Laxmi Hebbalkar) ಭೇಟಿ ಬಳಿಕ ನೇಹಾ ಹಿರೇಮಠ್ ತಂದೆ ನಿರಂಜನ್ ಹಿರೇಮಠ್ (Niranjan Hiremath) ದಂಪತಿ ‌ಬೆಳಗಾವಿಯ ಕುವೆಂಪು ‌ನಗರದಲ್ಲಿರುವ ಸಚಿವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಏಪ್ರಿಲ್ 18ರಂದು ನೇಹಾ (Neha Hiremath) ಹತ್ಯೆ ಆಯಿತು, ಆಗ ಸಚಿವೆ ಹೆಬ್ಬಾಳ್ಕರ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು ಅಂದು ಘಟನೆಯ ವರದಿ ಪಡೆದ ಸಚಿವೆ ಹೆಬ್ಬಾಳ್ಕರ್ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹಸಚಿವ ಜಿ.ಪರಮೇಶ್ವರ್ ಅವರಿಗೆ ಮಾಹಿತಿ ನೀಡಿದ್ದರು. ನಮ್ಮ ಬೇಡಿಕೆಯಂತೆ ವಿಶೇಷ ಕೋರ್ಟ್ ರಚನೆ, ಸಿಐಡಿ ತನಿಖೆಗೆ ಸರ್ಕಾರ ಅಸ್ತು ಅಂದಿತ್ತು, ನುಡಿದಂತೆ ನಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ವಂದನೆ ಸಲ್ಲಿಸಲು ಬಂದಿದ್ದೇವೆ ಎಂದು ನಿರಂಜನ್ ಹಿರೇಮಠ್ ಹೇಳಿದರು.ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಘಟನೆ ಬಳಿಕ ನಮ್ಮ ಕುಟುಂಬಕ್ಕೆ ಧೈರ್ಯ ತುಂಬಿದರು. ಘಟನೆ ಬಗ್ಗೆ ಪಕ್ಷಾತೀತ, ಧರ್ಮಾತೀತವಾಗಿ ಖಂಡನೆ ವ್ಯಕ್ತಪಡಿಸಿದವು. ನಮಗೆ ನೈತಿಕ ಬೆಂಬಲ ‌ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ. ವಿಧಾನಸೌಧದಲ್ಲಿ ಧ್ವನಿ ಎತ್ತುವುದಾಗಿಯೂ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.ಸಂಬಂಧಿತ ಸುದ್ದಿಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್, ಈತನ ಪರವಾಗಿ ಮೋದಿ ಪ್ರಚಾರ ಮಾಡ್ತಾರೆ: ರಾಹುಲ್ ಗಾಂಧಿಇಲ್ಲಿ ಕಾಂಗ್ರೆಸ್‌ ಸಾಯುತ್ತಿದೆ, ಅಲ್ಲಿ ಪಾಕಿಸ್ತಾನ ಅಳುತ್ತಿದೆ; ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿಅಮಿತ್ ಶಾ ಡೀಪ್ ಫೇಕ್‌ ವಿಡಿಯೋ ಪ್ರಕರಣ, ಜಾರ್ಖಂಡ್‌ ಕಾಂಗ್ರೆಸ್‌ನ ‘ಎಕ್ಸ್‌’ ಖಾತೆ ಬ್ಯಾನ್ಚಿಲ್ಲರೆ ಅಣ್ತಮ್ಮ ಎಂದ ಕುಮಾರಸ್ವಾಮಿ ವಿರುದ್ಧ ಸಂಸದ ಡಿಕೆ ಸುರೇಶ್ ಕೆಂಡಮೃಣಾಲ್‌ ಹೆಬ್ಬಾಳ್ಕರ್ ಪರ ಮತಯಾಚನೆಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಕೂಡ ನಮಗೆ ನೈತಿಕ ಬೆಂಬಲ ಸೂಚಿಸಿದ್ದರು. ಹೀಗಾಗಿ ಕಣದಲ್ಲಿರುವ ಮೃಣಾಲ್‌ ಹೆಬ್ಬಾಳ್ಕರ್‌ಗೆ ಈ ಕ್ಷೇತ್ರದ ಜನರು ಬೆಂಬಲಿಸಬೇಕು ಎಂದು ಮತಯಾಚನೆ ಮಾಡಿದರು. ಪ್ರಜ್ವಲ್ ರೇವಣ್ಣಗೆ ಕಠಿಣ ಶಿಕ್ಷೆ ಆಗಬೇಕುನನ್ನ ಹೇಳಿಕೆಯಿಂದ ಯಾರೂ ಅನ್ಯತಾ ಭಾವಿಸಬಾರದು. ನನಗೆ ಬಿಜೆಪಿ ನಾಯಕರು ಕೂಡ ಬೆಂಬಲ ಸೂಚಿಸಿದ್ದಾರೆ. ಪ್ರಜ್ವಲ್ ‌ರೇವಣ್ಣ ಸೆಕ್ಸ್ ಸ್ಕ್ಯಾಂಡಲ್‌ ಬಗ್ಗೆಯೂ ಹೋರಾಟ ಮಾಡುತ್ತೇನೆ. ಸಾಕಷ್ಟು ಮಹಿಳೆಯರ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ದೌರ್ಜನ್ಯ ಎಸಗಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ ಪ್ರಜ್ವಲ್ ರೇವಣ್ಣಗೆ ಕಠಿಣ ಶಿಕ್ಷೆ ಆಗಬೇಕು ಎಂದು ನಿರಂಜನ್ ಹಿರೇಮಠ್ ಆಗ್ರಹಿಸಿದರು.ಎಲ್ಲರೂ ಧ್ವನಿ ಎತ್ತಬೇಕುಪ್ರಜ್ವಲ್‌ನನ್ನು ತುಂಡರಿಸಿ ಭಾಗಗಳನ್ನು ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ಹಂಚಬೇಕು. ಹಣದ ಪ್ರಭಾವದಿಂದ ಮಹಿಳೆ ಮೇಲೆ ಈ ರೀತಿ ದೌರ್ಜನ್ಯ ನಡೆಯುತ್ತಿವೆ. ಯಾರೇ ಮಹಿಳೆ ಮೇಲೆ ಅನ್ಯಾಯವಾದರೂ ಎಲ್ಲರೂ ಧ್ವನಿ ಎತ್ತಬೇಕು ಎಂದು ನಿರಂಜನ್ ಹಿರೇಮಠ್ ಹೇಳಿದರು.ವೈರಲ್ ಫೋಟೋಗೆ ಪ್ರತಿಕ್ರಿಯೆಹಂತಕ ಫಯಾಜ್ ಜೊತೆಗಿರುವ ಚನ್ನರಾಜ್ ಹಟ್ಟಿಹೊಳಿ ಫೋಟೊ ವೈರಲ್ ಮಾಡಲಾಗ್ತಿದೆ. ರಾಜಕಾರಣಿಗಳ ಜೊತೆಗೆ ಎಲ್ಲರೂ ಫೋಟೊ ‌ತೆಗೆಸಿಕೊಳ್ಳುವುದು ಸಾಮಾನ್ಯ. ಮೂರು ವರ್ಷಗಳ ಹಿಂದಿನ ಫೋಟೊವನ್ನು ರಾಜಕೀಯಕ್ಕೆ ಬಳಕೆ ಮಾಡಬಾರದು ಎಂದು ವೈರಲ್ ಫೋಟೋಗೆ ನಿರಂಜನ್ ಹಿರೇಮಠ್ ಪ್ರತಿಕ್ರಿಯೆ ನೀಡಿದರು.ಇದನ್ನೂ ಓದಿ: HD Revanna: ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹಾಜರು, ಅತ್ತ ನಿರೀಕ್ಷಣಾ ಜಾಮೀನಿಗೆ ರೇವಣ್ಣ ಅರ್ಜಿ!ಡ್ಯಾಮೇಜ್ ಕಂಟ್ರೋಲ್ಗೆ HDK ಕಸರತ್ತುಪೆನ್ಡ್ರೈವ್ ಪ್ರಕರಣ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕುಟುಂಬಕ್ಕೆ ಮುಜುಗರ ತಂದಿಟ್ಟಿದೆ. ಡ್ಯಾಮೇಜ್ ಕಂಟ್ರೋಲ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಮುಂದಾಗಿದ್ದು, ಪದ್ಮನಾಭನಗರದ H.D.ದೇವೇಗೌಡರ ನಿವಾಸದಲ್ಲಿ ಮತ್ತೆ ಮೀಟಿಂಗ್ ಮಾಡಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆ ದೇವೇಗೌಡರ ಜೊತೆಗೆ ಚರ್ಚೆ ಮಾಡಿದ್ದಾರೆ.HDK-DK ಬ್ರದರ್ಸ್‌ ನಡುವೆ ಟಾಕ್‌ವಾರ್‌‌ ಜೋರಾಗಿದೆ. ಡಿಕೆ ಬ್ರದರ್ಸ್ 420 ಎಂದು ಜರಿದಿದ್ದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರಿಗೆ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ. ಇವರದ್ದು ಪೆನ್ಡ್ರೈವ್ ಕುಟುಂಬ, ಅವರ ಆಸ್ತಿಯೇ ಪೆನ್ಡ್ರೈವ್. ತೆನೆ ಹೊತ್ತ ಮಹಿಳೆ ಪೆನ್ಡ್ರೈವ್ ಹೊರಬೇಕಾಗುತ್ತದೆ. ನೂಲಿನಂತೆ ಸೀರೆ ಅಂತಾ ಜನರೇ ಮಾತನಾಡ್ತಿದಾರೆ. ಪೆನ್‌ಡ್ರೈವ್ ರಿಲೀಸ್ ಮಾಡಿದ್ದು ಅವ್ರ ಮೈತ್ರಿ ಪಾರ್ಟ್‌ನರ್ ಅಂತಾ ಡಿ.ಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ.

Post a Comment

Previous Post Next Post