Covishield Side Effects: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮಗಳನ್ನು ಒಪ್ಪಿಕೊಂಡ ಅಸ್ಟ್ರಾಜೆನೆಕಾ: ಲಸಿಕೆ ಹಾಕಿಸಿಕೊಂಡವರ ಗತಿ ಏನು?


 ಸಾಂದರ್ಭಿಕ ಚಿತ್ರ
ಭಾರತದಲ್ಲಿ ಕೋವಿಶೀಲ್ಡ್ ಎಂಬ ಹೆಸರಿನಿಂದ ಈ ಲಸಿಕೆಗಳನ್ನು ನೀಡಲಾಯಿತು. ಆದರೆ ಸ್ವಲ್ಪ ದಿನದ ಬಳಿಕ ಈ ಲಸಿಕೆಗಳ ವಿರುದ್ಧ ಅಪಶೃತಿ ಕೇಳಿಬರಲು ಶುರುವಾಯಿತು. ಆದರೆ ಅದಾಗಲೇ ಪ್ರಪಂಚದಾದ್ಯಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಲಸಿಕೆಯನ್ನು ಪಡೆದುಕೊಂಡಿದ್ದರು.
2021ರಲ್ಲಿ ಕೋವಿಡ್ (Covid) ಜಗತ್ತನ್ನು ಆವರಿಸಿಕೊಂಡಾಗ ಎಲ್ಲಾ ರಾಷ್ಟ್ರಗಳು ತನ್ನ ಪ್ರಜೆಗಳಿಗೆ ಜೀವರಕ್ಷಕ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮತ್ತು ತ್ವರಿತವಾಗಿ ಬಿಡುಗಡೆ ಮಾಡಲು ಹಗಲಿರುಳು ಶ್ರಮಿಸುವ ಪ್ರಯತ್ನ ಮಾಡಿ ಯಶಸ್ಸು ಕಂಡಿದ್ದವು.
ಲಸಿಕೆಯ ಅಡ್ಡ ಪರಿಣಾಮಗಳನ್ನು ಒಪ್ಪಿಕೊಂಡ ಅಸ್ಟ್ರಾಜೆನೆಕಾ
ಈ ಲಸಿಕೆಗಳಲ್ಲಿ ಮೊದಲನೆಯದು ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್‌ನ ಕೋವಿಡ್ ಲಸಿಕೆ. ಭಾರತದಲ್ಲಿ ಕೋವಿಶೀಲ್ಡ್ ಎಂಬ ಹೆಸರಿನಿಂದ ಇವುಗಳನ್ನು ನೀಡಲಾಯಿತು. ಆದರೆ ಸ್ವಲ್ಪ ದಿನದ ಬಳಿಕ ಈ ಲಸಿಕೆಗಳ ವಿರುದ್ಧ ಅಪಶೃತಿ ಕೇಳಿಬರಲು ಶುರುವಾಯಿತು. ಆದರೆ ಅದಾಗಲೇ ಪ್ರಪಂಚದಾದ್ಯಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಲಸಿಕೆಯನ್ನು ಪಡೆದುಕೊಂಡಿದ್ದರು.
ಸಂಬಂಧಿತ ಸುದ್ದಿ
ಭಾರತ ಭೇಟಿ ರದ್ದು ಮಾಡಿ ಚೀನಾಗೆ ಹಾರಿದ ಎಲೋನ್ ಮಸ್ಕ್:‌ ಟೆಸ್ಲಾಗೆ ಭಾರತಕ್ಕಿಂತ ಚೀನಾ ಏಕೆ ಮುಖ್ಯ?
ಜರ್ಮನಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ 40 ಸಾವಿರಕ್ಕಿಂತ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು!
ಕೋವಿಶೀಲ್ಡ್ ಲಸಿಕೆಯಿಂದ ಟಿಟಿಎಸ್ ಅಪಾಯ, ಸೈಡ್​ ಇಫೆಕ್ಟ್​ ಇದೆ ಎಂದು ಒಪ್ಪಿಕೊಂಡ Astrazeneca!
ಕೇವಲ ಎಂಡಿಹೆಚ್‌, ಎವರೆಸ್ಟ್ ಮಸಾಲಾ ಮಾತ್ರವಲ್ಲ, ಹಲವಾರು ದೇಶಗಳಲ್ಲಿ ಈ ಭಾರತೀಯ ಫುಡ್‌ಗಳಿಗಿವೆ ನಿಷೇಧ
 ಈ ವಿವಾದ ಆಗಿನಿಂದಲೂ ಇತ್ತು. ಆದರೆ ಕೋವಿಶೀಲ್ಡ್‌ ಲಸಿಕೆ ಬಲು ಅಪರೂಪವಾಗಿ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬ್ರಿಟೀಷ್‌ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಈಗ ಒಪ್ಪಿಕೊಂಡಿದೆ.
ಇದನ್ನೂ ಓದಿ: ಅಬ್ಬಾ.. ಎಂತಾ ಐಡಿಯಾ, ಟ್ರಾಫಿಕ್ ಸಿಗ್ನಲ್​ನಲ್ಲಿ ಗ್ರೀನ್ ನೆಟ್​! ಅಧಿಕಾರಿಗಳ ಪ್ಲಾನ್​ಗೆ ಸಲಾಮ್ ಎಂದ ವಾಹನ ಸವಾರರು
ಏನಿದು ಅಸ್ಟ್ರಾಜೆನೆಕಾ ವಿವಾದ?
ಫೆಬ್ರವರಿ 2023ರಲ್ಲಿ, ಅಸ್ಟ್ರಾಜೆನೆಕಾ ಕಂಪನಿಯು ಯುಕೆ ನ್ಯಾಯಾಲಯದಲ್ಲಿ ದಾಖಲೆಗಳನ್ನು ಸಲ್ಲಿಸಿತು, ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಎಂದು ಕರೆಯಲ್ಪಡುವ ಅಪರೂಪದ ಅಡ್ಡ ಪರಿಣಾಮವು ಜನರಲ್ಲಿ ಸಂಭವಿಸಬಹುದು.
ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಕಡಿಮೆಯಾಗುವಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದುʼ ಎಂದು ಅಸ್ಟ್ರಾಜೆನೆಕಾ (AstraZeneca) ಸಂಸ್ಥೆ ತಾನು ಸಲ್ಲಿಸಿರುವ ನ್ಯಾಯಾಲಯದ ದಾಖಲೆಗಳಲ್ಲಿ ಒಪ್ಪಿಕೊಂಡಿದೆ.
ಭಾರತದಲ್ಲಿ AZD1222 ಅಥವಾ ಕೋವಿಶೀಲ್ಡ್ ಎಂದೂ ಕರೆಯಲ್ಪಡುವ ಅಸ್ಟ್ರಾಜೆನೆಕಾ ಮೊದಲ ಬಾರಿಗೆ, ಕಂಪನಿಯು ತನ್ನ ಲಸಿಕೆಯು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಎಂದು ಕರೆಯಲ್ಪಡುವ ಅಪಾಯಕಾರಿ ಸ್ಥಿತಿಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿದೆ.
ಕೋರ್ಟ್‌ನಲ್ಲಿವೆ ಅಸ್ಟ್ರಾಜೆನೆಕಾ ವಿರುದ್ಧ ಅನೇಕ ಕೇಸ್‌ಗಳು
ಬ್ರಿಟನ್‌ನಲ್ಲಿ ಕೋವಿಶೀಲ್ಡ್ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವು ಮತ್ತು ತೀವ್ರತರವಾದ ಗಾಯಗಳಿಗೆ ಕಾರಣವಾದ ಆರೋಪದ ಮೇಲೆ ಮೊಕದ್ದಮೆ ಎದುರಿಸುತ್ತಿದೆ.
ಪ್ರಕರಣದ ಮೊದಲ ದೂರುದಾರರಾದ ಜೇಮೀ ಸ್ಕಾಟ್ ಅವರು ಏಪ್ರಿಲ್ 2021 ರಲ್ಲಿ ಲಸಿಕೆಯನ್ನು ಪಡೆದಿದ್ದು, ಇದು ರಕ್ತ ಹೆಪ್ಪುಗಟ್ಟುವಿಕೆಯ ನಂತರ ಶಾಶ್ವತ ಮಿದುಳಿನ ಗಾಯಕ್ಕೆ ಕಾರಣವಾಯಿತು ಎಂದು ದೂರು ನೀಡಿದ ನಂತರ ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿತು.
ಅಸ್ಟ್ರಾಜೆನೆಕಾ ಮತ್ತು ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನಡುವಿನ ಸಂಬಂಧವೇನು?
ಕೋವಿಡ್ ಲಸಿಕೆಯನ್ನು ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಹೊರತಂದಿದೆ. ಜನವರಿ 2021 ರಲ್ಲಿ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಭಾರತಕ್ಕಾಗಿ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸಲು ಅವರೊಂದಿಗೆ ಪಾಲುದಾರಿಕೆಗೆ ಸಹಿ ಹಾಕಿತು.
 ಅಧಿಕೃತ ಮಾಹಿತಿಯ ಪ್ರಕಾರ, ಏಪ್ರಿಲ್ 2024ರ ಹೊತ್ತಿಗೆ, ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮದ ಭಾಗವಾಗಿ ಭಾರತದಲ್ಲಿ 1.7 ಬಿಲಿಯನ್ ಡೋಸ್ ಕೋವಿಶೀಲ್ಡ್ ಅನ್ನು ನೀಡಲಾಗಿದೆ.
ಲಸಿಕೆ ಹಾಕಿಸಿಕೊಂಡವರ ಕಥೆ ಏನು?
ವ್ಯಾಕ್ಸಿನೇಷನ್ ಮಾಡಿದ ಮೊದಲ ಕೆಲವು ವಾರಗಳಲ್ಲಿ (1-6 ವಾರಗಳು) ಪ್ರತಿಕೂಲ ಪರಿಣಾಮಗಳು ಸಾಮಾನ್ಯವಾಗಿ ಸಂಭವಿಸುತ್ತವೆ, ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ ವೈದ್ಯರು.
ಇದಲ್ಲದೆ, ಕೋವಿಡ್ ಸೋಂಕು ಸ್ವತಃ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು‌, ಆದ್ದರಿಂದ ಲಸಿಕೆಗಿಂತ ಇದೇ ಅಪಾಯಕಾರಿ ಆಗಿರುತ್ತದೆ. ಈ ಕೋವಿಡ್‌ ಲಸಿಕೆ ಮಾತ್ರವಲ್ಲದೇ ಇನ್ಫ್ಲುಯೆನ್ಸ ಲಸಿಕೆ, ನ್ಯುಮೋಕೊಕಲ್ ಲಸಿಕೆ, H1N1 ವ್ಯಾಕ್ಸಿನೇಷನ್ ಮತ್ತು ರೇಬೀಸ್ ಲಸಿಕೆಯಿಂದ ಕೂಡ TTS ಉಂಟಾಗಬಹುದು ಎಂದಿರುವ ವೈದ್ಯರು ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಅಸ್ಟ್ರಾಜೆನೆಕಾ ಲಸಿಕೆಯನ್ನು ನಿಷೇಧಿಸಿರುವ ದೇಶಗಳು
ಲಸಿಕೆಯ ಸೂಕ್ಷ್ಮ ಪರಿಶೀಲನೆಯ ಪರಿಣಾಮವಾಗಿ, ಹಲವಾರು ದೇಶಗಳಲ್ಲಿ ಲಸಿಕೆಯನ್ನು ನಿಷೇಧಿಸಲಾಯಿತು. ಇದನ್ನು ಅಮಾನತುಗೊಳಿಸಿದ ಮೊದಲ ದೇಶ ಡೆನ್ಮಾರ್ಕ್, ನಂತರ ಐರ್ಲೆಂಡ್, ಥೈಲ್ಯಾಂಡ್, ನೆದರ್ಲ್ಯಾಂಡ್ಸ್, ನಾರ್ವೆ, ಐಸ್ಲ್ಯಾಂಡ್, ಕಾಂಗೋ ಮತ್ತು ಬಲ್ಗೇರಿಯಾ.
2021 ರಲ್ಲಿ, ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಪ್ರಕರಣಗಳು ವರದಿಯಾದ ನಂತರ ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಸ್ಪೇನ್‌ನಂತಹ ಹಲವಾರು ಯುರೋಪಿಯನ್ ರಾಷ್ಟ್ರಗಳು 2021 ರಲ್ಲಿ ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆಯನ್ನು ನಿಷೇಧಿಸಿದವು ನಂತರ, ಕೆನಡಾ, ಸ್ವೀಡನ್, ಲಾಟ್ವಿಯಾ ಮತ್ತು ಸ್ಲೊವೇನಿಯಾ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಮಲೇಷ್ಯಾ ಕೂಡ ಲಸಿಕೆಯನ್ನು ಸ್ಥಗಿತಗೊಳಿಸಿದವು.

Post a Comment

Previous Post Next Post