Shiva Rajkumar: ನಾನು ರಾಹುಲ್ ಗಾಂಧಿಯ ದೊಡ್ಡ ಅಭಿಮಾನಿ, ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಘೋಷಣೆ


 [ಇಂತಹ ಮಹಾನಾಯಕರ ಜತೆಗೆ ವೇದಿಕೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ರಾಹುಲ್ ಗಾಂಧಿ ಅವರ ದೊಡ್ಡ ಅಭಿಮಾನಿ ಎಂದು ನಾನು ಹಲವು ಸಮಾವೇಶದಲ್ಲಿ ಹೇಳಿದ್ದೇನೆ ಎಂದ್ರುಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್ (Geetha Shivarajkumar) ಪರವಾಗಿ ಘಟಾನುಘಟಿಗಳು ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಮತಯಾಚನೆ ಮಾಡಿದ್ರು. ಮೇ 7ರಂದು ಶಿವಮೊಗ್ಗ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಶಿವಮೊಗ್ಗದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahulgandhi) ಅವರು ಭಾಗಿಯಾಗಿದ್ರು. ಸಮಾವೇಶದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ಧರಾಮಯ್ಯ (CM Siddaramai) ಭಾಗವಹಿಸಿದ್ದರು. ಈ ವೇಳೆ ಸಮಾವೇಶದಲ್ಲಿ ಮಾತಾಡಿದ ನಟ ಶಿವರಾಜ್ ಕುಮಾರ್ ನಾನು ರಾಹುಲ್ ಗಾಂಧಿ ಅಭಿಮಾನಿ (Rahul Gandhi Fan) ಎಂದಿದ್ದಾರೆ.ಸಂಬಂಧಿತ ಸುದ್ದಿ
Janaki Samsara: ಕನ್ನಡ ಕಿರುತೆರೆಗೆ ವಾಪಸ್ ಬಂದ ಡಾರ್ಲಿಂಗ್ ಕೃಷ್ಣ ಆನ್ಸ್ಕ್ರೀನ್ ಜೋಡಿ!
ಕಾಂಗ್ರೆಸ್ ಲಿಸ್ಟ್ ಬಿಡುಗಡೆ, ರಾಯ್ಬರೇಲಿಯಿಂದ್ ರಾಹುಲ್ ಕಣಕ್ಕೆ, ಅಮೇಥಿಯಿಂದ ಅಚ್ಚರಿಯ ಅಭ್ಯರ್ಥಿ!
Amit Shah: ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಅಮಿತ್ ಶಾ ಹೇಳಿದ್ದೇನು? ಸಂಪೂರ್ಣ ವಿವರ ಇಲ್ಲಿದೆ
ಪ್ರಜ್ವಲ್ ರೇವಣ್ಣ ಕೇಸ್, ನೇಹಾ ಹತ್ಯೆ ಪ್ರಕರಣ! ಕರ್ನಾಟಕ ಪಾಲಿಟಿಕ್ಸ್ ಬಗ್ಗೆ ಅಮಿತ್ ಶಾ ಹೇಳಿದ್ದೇನು?
ನಾನು ರಾಹುಲ್ ಗಾಂಧಿ ಅಭಿಮಾನಿ
ಈ ಬಾರಿ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ಕುಮಾರ್ ಅವರನ್ನು ಗೆಲ್ಲಿಸಲೇಬೇಕು ಎಂದು ನಟ ಶಿವರಾಜ್ಕುಮಾರ್ ಕೂಡ ಪಣತೊಟ್ಟಂತಿದೆ. ಪತ್ನಿ ಪರ ಭರ್ಜರಿ ಪ್ರಚಾರ ಮಾಡ್ತಿದ್ದಾರೆ. ಸಮಾವೇಶದಲ್ಲಿ ಮಾತಾಡಿದ ನಟ ಶಿವರಾಜ್ ಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಕೊಂಡಾಡಿದ್ದಾರೆ. ನಾನು ರಾಹುಲ್ ಗಾಂಧಿ ಅಭಿಮಾನಿ ಎಂದು ಶಿವಣ್ಣ ಹೇಳಿದ್ರು.
 ರಾಹುಲ್ ಗಾಂಧಿ ಅವರ ಫಿಟ್ನೆಸ್ಗೆ ನಾನು ಫ್ಯಾನ್
ಇಂತಹ ಮಹಾನಾಯಕರ ಜತೆಗೆ ವೇದಿಕೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ರಾಹುಲ್ ಗಾಂಧಿ ಅವರ ದೊಡ್ಡ ಅಭಿಮಾನಿ ಎಂದು ನಾನು ಹಲವು ಸಮಾವೇಶದಲ್ಲಿ ಹೇಳಿದ್ದೇನೆ ಎಂದ್ರು, ರಾಹುಲ್ ಗಾಂಧಿಯವರ ಫಿಟ್ನೆಸ್ ಹಾಗೂ ಅವರ ಮನುಷ್ಯತ್ವಕ್ಕೆ ನಾನು ಅಭಿಮಾನಿ ಎಂದು ಹೇಳಿದ್ರು. ಯಾವ ಮನುಷ್ಯ ಫಿಟ್ ಆಗಿರುತ್ತನೋ ಅವನು ದೇಶವನ್ನು ಫಿಟ್ ಅಂಡ್ ಸ್ಟ್ರೀಟ್ ಆಗಿ ನಡೆಸುತ್ತಾನೆ ಎಂದು ರಾಹುಲ್ ಗಾಂಧಿ ಫಿಟ್ನೆಸ್ ಬಗ್ಗೆ ಶಿವಣ್ಣ ಮಾತಾಡಿದ್ರು.
ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಕಿಡಿ
ಸಮಾವೇಶದಲ್ಲಿ ಮಾತಾಡಿದ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಕಿಡಿಕಾರಿದ್ರು. ಬಿಜೆಪಿಯವರು ಸಂವಿಧಾನವನ್ನು ತೆಗೆಯೋದಕ್ಕಾಗಿ ಚುನಾವಣೆ ಮಾಡ್ತಿದೆ. ಇವತ್ತು ಅವರ ಕೈಯಲ್ಲಿರುವ ಸಂವಿಧಾನವನ್ನು ಕಾಂಗ್ರೆಸ್ ರಕ್ಷಣೆ ಮಾಡ್ತಿದೆ‌. ಅಂಬೇಡ್ಕರ್ ಅವರಿಗೆ‌ ನಾವು ನಿಜವಾಗಿಯೂ ಧನ್ಯವಾದಗಳನ್ನು ಹೇಳಬೇಕಾಗುತ್ತದೆ. ಸಂವಿಧಾನದಲ್ಲಿ ಸಮಾನತೆ ತರಬೇಕೆಂದು ಬರೆದಿದೆ. ಈ ಸಂವಿಧಾನದಲ್ಲಿ ಮೀಸಲಾತಿ ಯ ಬಗ್ಗೆಯೂ ಬರೆದಿದ್ದಾರೆ ಈ ಎರಡು ವಿಷಯ ಗಳನ್ನು ಬಿಜೆಪಿ ತೆಗೆಯೋಕೆ ಹೊರಟಿದ್ದಾರೆ ಎಂದ್ರು.
ಇದನ್ನೂ ಓದಿ: Rahul Gandhi: ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್, ಈತನ ಪರವಾಗಿ ಮೋದಿ ಪ್ರಚಾರ ಮಾಡ್ತಾರೆ: ರಾಹುಲ್ ಗಾಂಧಿ
 ಪ್ರಜ್ವಲ್ ರೇವಣ್ಷ ಒಬ್ಬ ಮಾಸ್ ರೇಪಿಸ್ಟ್ ಎಂದ ರಾಹುಲ್!ಎಲ್ಲಿ ಸಮಾನತೆಬೇಕು ಅನ್ನೋರು ನಕ್ಸಲರು ಅಂತ ಬಿಜೆಪಿಯವರು ಹೇಳ್ತಾರೆ. ಬಿಜೆಪಿ ಅಧ್ಯಕ್ಷರು ಸಂವಿಧಾನ ಬೇಡ ಎಂದು ಹೇಳಿದ್ದಾರೆ. ಈ ಕಾಂಗ್ರೆಸ್ ಪಕ್ಷದಲ್ಲಿ ನಾವು ಸಮಾನತೆಗಾಗಿ ಹೋರಾಟ ಮಾಡ್ತಿದ್ದೇವೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಕೊಡಬೇಕು ಎಂದ್ರು. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್ ಬಗ್ಗೆ ಕೂಡ ರಾಹುಲ್ ಗಾಂಧಿ ಮಾತಾಡಿದ್ರು. ಪ್ರಜ್ವಲ್ ರೇವಣ್ಣ 400 ಹೆಣ್ಣು ಮಕ್ಕಳ ಜೊತೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು, ಪ್ರಜ್ವಲ್ ಪರ ಪ್ರಚಾರ ಮಾಡಿದ್ರು. ಅವರಿಗೆ ಮತ ಹಾಕಿದ್ರೆ ನನಗೆ ಮತ ಹಾಕಿದಂತೆ ಎಂದ್ರು. ಪ್ರಜ್ವಲ್ ರೇವಣ್ಷ ಒಬ್ಬ ಮಾಸ್ ರೇಪಿಸ್ಟ್ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ರು.

Post a Comment

Previous Post Next Post