Amit Shah: ನೇಹಾ ಹಿರೇಮಠ್ ಹತ್ಯೆ ಲವ್ ಜಿಹಾದ್ ಕೇಸ್; ಸಂದರ್ಶನದಲ್ಲಿ ಅಮಿತ್ ಶಾ ನೀಡಿದ ಮಾಹಿತಿ ಏನು?


 ನೇಹಾ ಹತ್ಯೆ ಲವ್ ಜಿಹಾದ್ Neha Hiremath Murder Case: ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿಯ ಹೇಳಿಕೆಯನ್ನು ನೀಡಲಾಗುತ್ತಿದೆ ಎಂದು ಅಮಿತ್ ಶಾ ಹೇಳಿದರು. ನವದೆಹಲಿ: ಹುಬ್ಬಳ್ಳಿಯ ಕಾಲೇಜ್ ಕ್ಯಾಂಪಸ್ನಲ್ಲಿ ನಡೆದ ನೇಹಾ ಹಿರೇಮಠ್ (Neha Hiremath Case) ಹತ್ಯೆ ಲವ್ ಜಿಹಾದ್ (Love Jihad Case) ಪ್ರಕರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಹೇಳಿದ್ದಾರೆ.    ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ, ನೇಹಾ ಹಿರೇಮಠ್ ಹತ್ಯೆ ಪ್ರಕರಣದ ಕುರಿತು ಅಮಿತ್ ಶಾ ಮಾತನಾಡಿದ್ದು, ನೇಹಾ ಹತ್ಯೆ ಖಾಸಗಿ ವಿಷಯ ಎಂದಿದ್ದ ಕಾಂಗ್ರೆಸ್ (Congress) ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು.ಅಲ್ಪಸಂಖ್ಯಾತರ ಮತ ಬ್ಯಾಂಕ್ಗಾಗಿ ನೇಹಾ ಪ್ರಕರಣ ಖಾಸಗಿ ವಿಚಾರಕ್ಕೆ ನಡೆದ ಕೊಲೆ ಎಂದು ಕಾಂಗ್ರೆಸ್ ಹೇಳಿತು. ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿಗೆ ಭದ್ರತೆ ಕೊಡಬೇಕು ಅಲ್ಲವಾ? ಕಾಲೇಜು ಆವರಣದೊಳಗೆ ಕೊಲೆ ನಡೆದಿರೋದು ಅದು ಹೇಗೆ ಖಾಸಗಿ ವಿಷಯ ಆಗುತ್ತೆ ಎಂದು ಅಮಿತ್ ಶಾ ಪ್ರಶ್ನೆ ಮಾಡಿದರು.ಸಂಬಂಧಿತ ಸುದ್ದಿLok Sabha Election 2024: ಕೊಲ್ಕತ್ತಾದಲ್ಲಿ ಪ್ರಧಾನಿ ಮೋದಿ- 3 ಚುನಾವಣಾ ರ‍್ಯಾಲಿಗಳಲ್ಲಿ ಭಾಗಿಎಚ್ಡಿ ರೇವಣ್ಣಗೆ ಮತ್ತೊಂದು ಶಾಕ್! ಮಾಜಿ ಸಚಿವರ ವಿರುದ್ಧ ಮೈಸೂರಿನಲ್ಲಿ ಮತ್ತೊಂದು ದೂರು ದಾಖಲು?ಕಾಂಗ್ರೆಸ್ ಲಿಸ್ಟ್ ಬಿಡುಗಡೆ, ರಾಯ್ಬರೇಲಿಯಿಂದ್ ರಾಹುಲ್ ಕಣಕ್ಕೆ, ಅಮೇಥಿಯಿಂದ ಅಚ್ಚರಿಯ ಅಭ್ಯರ್ಥಿ!Prajwal Revanna ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ದೂರು, ಇಂದು ಅಪ್ಪ-ಮಗನ ಬೇಲ್ ಭವಿಷ್ಯಕಾಂಗ್ರೆಸ್ನಿಂದ ವೋಟ್ ಬ್ಯಾಂಕ್ ರಾಜಕಾರಣಇದೊಂದು ಖಾಸಗಿ ಅಥವಾ ವೈಯಕ್ತಿಕ ವಿಚಾರಕ್ಕೆ ನಡೆದ ಕೊಲೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸಾಮಾಜಿಕ ಅನಿಷ್ಠ ಮುಚ್ಚಿಡಲು ಪ್ರಯತ್ನಿಸಲಾಗ್ತಿದೆ. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿಯ ಹೇಳಿಕೆಯನ್ನು ನೀಡಲಾಗುತ್ತಿದೆ ಎಂದು ಅಮಿತ್ ಶಾ ಹೇಳಿದರು.ಕಾಂಗ್ರೆಸ್ ಸರ್ಕಾರ ಬಂದ ನಂತರ ಸ್ಪೋಟಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿನ ಬ್ಲಾಸ್ಟ್ನ್ನು ಸಿಲಿಂಡರ್ ಸ್ಫೋಟ ಎಂದು ಕರೆಯಲಾಯ್ತು. ಎನ್ಐಎ ತನಿಖೆಯಲ್ಲಿ ಸತ್ಯಾಂಶ ಹೊರ ಬಂದಿದೆ. 10 ವರ್ಷದಲ್ಲಿ ಬೆಂಗಳೂರಿನಲ್ಲಿ ಯಾವುದೇ ಸ್ಫೋಟ ನಡೆದಿರಲಿಲ್ಲ. ಇವರ ಸರ್ಕಾರ ಬಂದ್ಮೇಲೆ ಎಸ್ಡಿಪಿಐಗೆ ಬೆಂಬಲ ನೀಡಿತು. ನಂತರ ಸ್ಫೋಟಗಳು ಸಂಭವಿಸುತ್ತಿವೆ ಎಂದು ಅಮಿತ್ ಶಾ ಆರೋಪಿಸಿದರು.ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಅಂದ್ರೆ ಅವರಿಗೆ ? ದೇಶದ ಭದ್ರತೆ, ಬೆಂಗಳೂರಿನ ಭದ್ರತೆ, ಕರ್ನಾಟಕದ ಭದ್ರತೆ, ಇದೆಲ್ಲವನ್ನೂ ನಿರ್ಲಕ್ಷ್ಯಿಸಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ನೇಹಾ ಪೋಷಕರೊಂದಿಗೆ ಅಮಿತ್ ಶಾಬೆಳಗಾವಿ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹ ನೇಹಾ ಹತ್ಯೆಯನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದರು. ಕಾಂಗ್ರೆಸ್ನ ಅಲ್ಪಸಂಖ್ಯಾತರ ಓಲೈಕೆಯಿಂದಲೇ ಫಯಾಜ್ನಂತ ವ್ಯಕ್ತಿಗಳು ಕಾಲೇಜು ಕ್ಯಾಂಪಸ್ಗೆ ನುಗ್ಗಿ ಕೊಲೆ ಮಾಡುತ್ತಾರೆ ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದರು.ನೇಹಾ ಪೋಷಕರಿಗೆ ಅಮಿತ್ ಶಾ ಸಾಂತ್ವನಮೇ 1ರಂದು ಹುಬ್ಬಳ್ಳಿಯಲ್ಲಿ ನೇಹಾ ಪೋಷಕರನ್ನು ಭೇಟಿಯಾಗಿದ್ದ ಅಮಿತ್ ಶಾ ಸಾಂತ್ವನ ಹೇಳಿದ್ದರು. ಈ ವೇಳೆ ನಿಮ್ಮ ಜೊತೆ ನಾವಿದ್ದೇವೆ ಎಂದು ಅಮಿತ್ ಶಾ ಭರವಸೆ ನೀಡಿದ್ದರು. ಇದನ್ನೂ ಓದಿ: Neha Hiremath: ಕಾಂಗ್ರೆಸ್ ಪರ ಚುನಾವಣೆ ಪ್ರಚಾರಕ್ಕಿಳಿದ ನೇಹಾ ಹಿರೇಮಠ್ ತಂದೆ; ಹೆಬ್ಬಾಳ್ಕರ್ ಮನೆಯಲ್ಲಿ ಸುದ್ದಿಗೋಷ್ಠಿಏಪ್ರಿಲ್ 18ರಂದು ನೇಹಾ ಕೊಲೆಏಪ್ರಿಲ್ 18ರಂದು ನೇಹಾ ಕ್ಲಾಸ್ರೂಮ್ನಿಂದ ಹೊರಗೆ ಬರುತ್ತಿದ್ದಂತೆ ಎದುರಾದ ಆರೋಪಿ ಫಯಾಜ್ ಎಂಬಾತ ಚಾಕುವಿನಿಂದ 9 ಬಾರಿ ಇರಿದು ಕೊಲೆ ಮಾಡಿದ್ದನು. ಏಪ್ರಿಲ್ 19ರಂದು ಮರಣೋತ್ತರ ಶವಪರೀಕ್ಷೆ ನಡೆಸಿದ ಬಳಿಕ ನೇಹಾ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿತ್ತು. ಆನಂತರ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.: ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನುವಳ್ಳಿ ಗ್ರಾಮದವನಾಗಿದ್ದು, ತಂದೆ-ತಾಯಿ ಇಬ್ಬರೂ ಶಾಲಾ ಶಿಕ್ಷಕರಾಗಿದ್ದಾರೆ. ಮಗ ಮತ್ತು ನೇಹಾ ಪ್ರೀತಿಸುತ್ತಿದ್ದರು. ಇದು ಲವ್ ಜಿಹಾದ್ ಅಲ್ಲ. ಆದರೆ ಕೊಲೆ ಮಾಡಿದ್ದು ತಪ್ಪು. ನೇಹಾಳನ್ನು ಕೊಲೆಗೈದ ಮಗನಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಆಗಲಿ ಎಂದು ಫಯಾಜ್ ತಾಯಿ ಹೇಳಿದ್ದರು

Post a Comment

Previous Post Next Post