Crime News: ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಅರ್ಬಾಜ್‌ನನ್ನು ಬಂಧಿಸಿದ್ದಾರೆ.ಬೆಂಗಳೂರು: ವಿವಾಹಿತೆಯನ್ನ ಮದುವೆಯಾಗಲು (Married Woman) ಪೀಡಿಸಿ, ಮದುವೆಗೆ ಒಲ್ಲೆ ಎಂದ ಮಹಿಳೆಯ ಮನೆಗೆ ಪಾಗಲ್ ಪ್ರೇಮಿಯೊಬ್ಬ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಹೆಗ್ಗಡೆನಗರದ (Heggadenagara, Bengaluru) ಸಾರಾಯಿಪಾಳ್ಯದಲ್ಲಿ ನಡೆದಿದೆ. ಆರೋಪಿ ಅರ್ಬಾಜ್, ವಿವಾಹಿತ ಮಹಿಳೆಯ ಹಿಂದೆ ಬಿದ್ದಿದ್ದನು. ತನ್ನನ್ನು ವಿವಾಹವಾಗುವಂತೆ ಮಹಿಳೆಗೆ ಅರ್ಬಾಜ್ ಪೀಡಿಸ್ತಿದ್ದನಂತೆ. ಮದುವೆಗೆ (Marriage Proposal) ಮಹಿಳೆ ನಿರಾಕರಿಸಿದರಂತೆ. ಹೀಗಾಗಿ ಮಹಿಳೆಯ ಮನೆಗೆ ಅರ್ಬಾಜ್ ಬೆಂಕಿ (Fire) ಇಟ್ಟಿದ್ದಾನೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಮನೆಯಲ್ಲಿದ್ದ ಬಟ್ಟೆಗಳು, ಟಿವಿ, ಫ್ರಿಡ್ಜ್ ಇತರ ವಸ್ತುಗಳು ಬೆಂಕಿಗಾಹುತಿಯಾಗಿವೆ.ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಅರ್ಬಾಜ್‌ನನ್ನು ಬಂಧಿಸಿದ್ದಾರೆ.ಸಂಬಂಧಿತ ಸುದ್ದಿTraffic Violation: ಟ್ರಾಫಿಕ್‌ನಿಂದ ಬರಬೇಕಿದೆ 1700 ಕೋಟಿ ರೂಪಾಯಿ; ದಂಡ ಪಾವತಿಸಲು ಹೊಸ ವೆಬ್‌ಸೈಟ್!Bengaluru Rain: ಬೆಂಗಳೂರಿನ ಹಲವೆಡೆ ಮಳೆ; ಉರಿ ಬಿಸಿಲಿನ ನಡುವೆ ತಂಪೆರೆದ ವರುಣ!Bengaluru: ಎಸಿ, ಕೂಲರ್ಗಳ ಮೊರೆ ಹೋದ ಬೆಂಗಳೂರಿಗರು- ಮಳೆ ಯಾವಾಗ ಬರುತ್ತೆ ಅಂತಿದ್ದಾರೆ ಎಲ್ರೂKarnataka Rain: ರಣ ಬಿಸಿಲಿನ ನಡುವೆ ಮಳೆಯ ಮನ್ಸೂಚನೆ ನೀಡಿದ ಹವಾಮಾನ ಇಲಾಖೆ!ಕೌಟುಂಬಿಕ ಕಲಹಕ್ಕೆ ವ್ಯಕ್ತಿ ಆತ್ಮಹತ್ಯೆಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ.ಮೃತನನ್ನು 30 ವರ್ಷದ ಶ್ರೀಧರ್ ಎಂದು ಗುರುತಿಸಲಾಗಿದೆ. ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಜಾತಿನಿಂದನೆ ಕೇಸ್ ದಾಖಲಿಸಿದಕ್ಕೆ ಯುವಕ ಆತ್ಮಹತ್ಯೆಜಾತಿನಿಂದನೆ ಕೇಸ್ ದಾಖಲಿಸಿದಕ್ಕೆ ಹೆದರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಲಾಡಮುಗಳಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು 23 ವರ್ಷದ ನಿಖಿಲ್ ಪೂಜಾರಿ ಎಂದು ಗುರುತಿಲಾಗಿದೆ. ನಾಲ್ಕು ದಿನದ ಹಿಂದೆ ನಡೆದ ಗ್ರಾಮದ ಜಾತ್ರೆಯಲ್ಲಿ 2 ಸಮುದಾಯಗಳ ನಡುವೆ ಗಲಾಟೆಯಾಗಿತ್ತು.ಈ ಹಿನ್ನೆಲೆ ನಿಖಿಲ್ ಪೂಜಾರಿ ಸೇರಿದಂತೆ ಹಲವರ ವಿರುದ್ಧ ಇನ್ನೊಂದು ಸಮುದಾಯ ಯುವಕರು ಜಾತಿ ನಿಂದನೆ ಕೇಸ್ ದಾಖಲಿಸಿದ್ದರು. ಇದರಿಂದ ಹೆದರಿ ನಿಖಿಲ್ ನೇಣಿಗೆ ಶರಣಾಗಿದ್ದಾನೆ.ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಜಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ವೊಂದು ಸ್ಫೋಟಗೊಂಡಿರುವ ಘಟನೆ ಮಂಡ್ಯದ ಮಳವಳ್ಳಿಯಲ್ಲಿ ನಡೆದಿದೆ. ಉಮಾಶಂಕರ್ ಎಂಬುವರಿಗೆ ಸೇರಿದ ಎಲೆಕ್ಟ್ರಿಕ್ ಸ್ಕೂಟರ್‌ಅನ್ನು ತಮ್ಮ ಶಾಮಿಯಾನ ಅಂಗಡಿಯಲ್ಲಿ ಚಾರ್ಜ್‌ಗೆ ಹಾಕಿದ್ದರು. ಈ ವೇಳೆ ಸ್ಕೂಟರ್ ಸ್ಫೋಟಗೊಂಡಿದ್ದು, ಅಂಗಡಿಯೊಳಗಿದ್ದ ಎಲ್ಲ ವಸ್ತುಗಳು ಬೆಂಕಿಗಾಹುತಿಯಾಗಿವೆ.ಹಾಡಹಗಲೇ ವಿದ್ಯಾರ್ಥಿನಿ ಕಿಡ್ನಾಪ್ಗೆ ಯತ್ನಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ಹಾಡಹಗಲೇ ಶಾಲಾ ವಿದ್ಯಾರ್ಥಿನಿ ಕಿಡ್ನಾಪ್ಗೆ ಯತ್ನಿಸಿದ್ದಾರೆ. ಕೊಚಿಂಗ್ ಸೆಂಟರ್ಗೆ ತೆರಳುತ್ತಿದ್ದ 6 ವರ್ಷದ ಸಂಜನಾಳ ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ.ಬೆಳಗ್ಗೆ ಎಂದಿನಂತೆ ಸ್ನೇಹಿತೆ ಮನೆಗೆ ತೆರಳಿ.. ಸಂಜನಾ ಟ್ಯೂಷನ್ಗೆ ಹೋಗುತ್ತಿದ್ದಳು. ಈ ವೇಳೆ ದುಷ್ಕರ್ಮಿಯೋರ್ವ ಮಾಸ್ಕ್ ಧರಿಸಿ ಬಾಲಕಿ ಕಣ್ಣಿಗೆ ಸ್ಪ್ರೇ ಮಾಡಿ ಕಿಡ್ನಾಪ್ಗೆ ಯತ್ನಿಸಿದ್ದಾನೆ. ಕೂಡಲೇಆತನಿಂದ ತಪ್ಪಿಸಿಕೊಂಡು ಬಾಲಕಿ ಮನೆಗೆ ಓಡಿ ಬಂದಿದ್ದಾಳೆ.ಕೈ ಎತ್ತಿದವನಿಗೆ ಖಾಕಿ ಗುಂಡಿನ ರುಚಿಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಕೊಲೆ ಕೇಸ್ನದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಕ್ತಿದೆ. ನಾಲ್ವರ ಕೊಲೆಗೆ ಡೀಲ್ ನಡೆದಿದ್ದು 65 ಲಕ್ಷಕ್ಕೆ ಅಲ್ವಂತೆ. 5 ಕೋಟಿ 65 ಲಕ್ಷಕ್ಕೆ ಡೀಲ್ ಮಾಡ್ಕೊಂಡಿದ್ದರಂತೆ. ಆರೋಪಿ ಫೈರೋಜ್ಗೆ ಖಾಕಿ ಡ್ರಿಲ್ ಮಾಡ್ತಿದ್ದು ದಿನಕ್ಕೊಂದು ವಿಷ್ಯ ಬಾಯಿಬಿಡ್ತಿದ್ದಾನೆ.ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದ ಬಳಿ ಸ್ಥಳ ಮಹಜರಿಗೆ ಹೋದಾಗ ಖಾಕಿ ಮೇಲೆಯೇ ಕೈ ಎತ್ತಿದ್ದಾನೆ. ಪಿಎಸ್ಐ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ನೋಡಿದವನಿಗೆ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ. ಇದನ್ನೂ ಓದಿ: Rahul Gandhi: ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್, ಈತನ ಪರವಾಗಿ ಮೋದಿ ಪ್ರಚಾರ ಮಾಡ್ತಾರೆ: ರಾಹುಲ್ ಗಾಂಧಿವಿದ್ಯಾರ್ಥಿ ಅನುಮಾನಾಸ್ಪದ ಸಾವುಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಧ್ಯಾರ್ಥಿ ಅನುಮಾನಸ್ಪದವಾಗಿ ಸಾವನ್ನಪ್ಪಿರೋ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಮೂಲದ ರಂಗನಾಥ್ ಮೃತ ವಿದ್ಯಾರ್ಥಿ. ಕೆಲ ತಿಂಗಳುಗಳ ಹಿಂದೆ ಬಸ್ ಆ್ಯಕ್ಸಿಡೆಂಟ್‌ನಲ್ಲಿ ಗಾಯಗೊಂಡಿದ್ದ ರಂಗನಾಥ್, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರಂತೆ.ಆಯುರ್ವೇದಿಕ್ ಚಿಕಿತ್ಸೆ ಪಡೀತಿದ್ದ ರಂಗನಾಥ್, ತಿಂಡಿ ತಿಂದು ಮಲಗಿದವರು ಎದ್ದೇ ಇಲ್ಲ. ರಂಗನಾಥ್ ಸಾವನ್ನಪ್ಪಿದ್ದು ಹೇಗೆ ಅನ್ನೋ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೊರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Post a Comment