ಸಿಎಂ ಸಿದ್ದರಾಮಯ್ಯ
ಪ್ರಜ್ವಲ್ ರೇವಣ್ಣ ಎಲ್ಲಿಗಾದರೂ ಎಸ್ಕೇಪ್ ಆಗಿಲಿ, ಯಾವ ದೇಶದಲ್ಲಿದ್ದರು ಹಿಡ್ಕೊಂಡು ಬರ್ತೀವಿ. ಪಾಸಪೋರ್ಟ್ ರದ್ದು ಮಾಡಿ ಎಂದು ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.ಬಾಗಲಕೋಟೆ: ಪೆನ್‌ಡ್ರೈವ್ ಕೇಸ್‌ನಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ (Prajwal Revanna) ಪಾಸ್‌ಪೋರ್ಟ್ ರದ್ದು ಮಾಡುವಂತೆ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಕೇಂದ್ರ ಸರ್ಕಾರ, ಪಾಸ್‌ಪೋರ್ಟ್ (Passport) ರದ್ದು ಮಾಡಲು ನಮಗೆ ಅಧಿಕಾರ ಇಲ್ಲ. ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಮಾಡಬೇಕು ಅಂದರೆ ಕೋರ್ಟ್ (Court) ಮೊರೆ ಹೋಗಬೇಕು ಎಂದು ರಾಜ್ಯ ಸರ್ಕಾರಕ್ಕೆ (Karnataka Govt) ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಪ್ರಜ್ವಲ್ ರೇವಣ್ಣ ಎಲ್ಲಿಗಾದರೂ ಎಸ್ಕೇಪ್ ಆಗಿಲಿರೀ, ಯಾವ ದೇಶದಲ್ಲಿದ್ದರು ಹಿಡ್ಕೊಂಡು ಬರ್ತೀವಿ ಎಂದು ಹೇಳಿದ್ದಾರೆ.ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಂತ್ರಸ್ಥ ಮಹಿಳೆಯನ್ನ ರೇವಣ್ಣ ಆಪ್ತರು ಎಸ್ಕೇಪ್ ಮಾಡಿಸಿದ್ದಾರೆಂಬ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಆ ಹೆಣ್ಣುಮಗಳು ಎಲ್ಲಿ ಹೋಗಿದ್ದಾರೆ ಎಂದು ಪತ್ತೆ ಹಚ್ಚಲು ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರುಸಂಬಂಧಿತ ಸುದ್ದಿಮಗನ ಸೆಕ್ಸ್ ಹಗರಣದಿಂದ ಈ ನಾಯಕನ ಪ್ರಧಾನಿಯಾಗುವ ಕನಸೇ ನುಚ್ಚು ನೂರಾಗಿತ್ತು!ಎಚ್ಡಿ ರೇವಣ್ಣಗೆ ಮತ್ತೊಂದು ಶಾಕ್! ಮಾಜಿ ಸಚಿವರ ವಿರುದ್ಧ ಮೈಸೂರಿನಲ್ಲಿ ಮತ್ತೊಂದು ದೂರು ದಾಖಲು?Prajwal Revanna ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ದೂರು, ಇಂದು ಅಪ್ಪ-ಮಗನ ಬೇಲ್ ಭವಿಷ್ಯಪ್ರ kiಜ್ವಲ್ ರೇವಣ್ಣ ಕೇಸ್, ನೇಹಾ ಹತ್ಯೆ ಪ್ರಕರಣ! ಕರ್ನಾಟಕ ಪಾಲಿಟಿಕ್ಸ್ ಬಗ್ಗೆ ಅಮಿತ್ ಶಾ ಹೇಳಿದ್ದೇನು?ಎಸ್ಐಟಿ ಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆಂಬ ಎಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರು ಅಪ್ಪನೂ ಅವನು ಲಾಯರ್ ಗಳನ್ನ ಯಾಕೆ ಕರಿಸ್ತಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಲಾಯರ್ ಜೊತೆ ಯಾಕೆ ಚರ್ಚೆ ಮಾಡಿದ್ದಾರೆ. ನಾವು ಬೇರೆ ಬೇರೆ ಆಗಿ ಬಿಟ್ಟಿದ್ದಿವಿ, ರೇವಣ್ಣ ಬೇರೆ ನಾವು ಬೇರೆ ಅಂತಾರೆ. ದೇವೇಗೌಡರಿಗೆ ನಮಗೆ ಸಂಬಂಧ ಇಲ್ಲ ಅಂತಾರೆ, ಚುನಾವಣಾ ಪ್ರಚಾರದಲ್ಲಿ ರೇವಣ್ಣ ಮಗ ಬೇರೆಯಲ್ಲ, ನನ್ನ ಮಗ ಬೇರೆ ಅಲ್ಲ ಅಂತಾರೆ. ರಾಜಕೀಯ ಮಾಡೋದು ಒಟ್ಟಿಗೆ, ಕುತಂತ್ರ ಮಾಡೋದು ಒಟ್ಟಿಗೆ, ತಪ್ಪು ಮಾಡೋದೋ ಒಟ್ಟಿಗೆ ಎಂದು ಟಾಂಗ್ ಕೊಟ್ಟರುಅಲ್ಲದೇ, ಪ್ರಜ್ವಲ್ ರೇವಣ್ಣ ಎಲ್ಲಿಗಾದರೂ ಎಸ್ಕೇಪ್ ಆಗಿಲಿ, ಯಾವ ದೇಶದಲ್ಲಿದ್ದರು ಹಿಡ್ಕೊಂಡು ಬರ್ತೀವಿ. ಪಾಸಪೋರ್ಟ್ ರದ್ದು ಮಾಡಿ ಎಂದು ಪ್ರಧಾನಿಗೆ ಪತ್ರ ಬರೆದಿದ್ದೇನೆ. ಪಾಸಪೋರ್ಟ್ ಕ್ಯಾನ್ಸಲ್ ಆದ ಮೇಲೆ ವಿದೇಶದಲ್ಲಿ ಇರಲಿಕ್ಕೆ ಆಗೋದಿಲ್ಲ ಅಲ್ವಾ, ಪ್ರಧಾನಿ ಪಾಸ್ಪೋರ್ಟ್ ಕ್ಯಾನ್ಸಲ್ ಮಾಡಲಿ ಎಂದು ಸವಾಲು ಎಸೆದರು.ಇದನ್ನೂ ಓದಿ: Kukke Subramanya Swamy Temple: ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ನೂತನ ಎಇಒ ಆಗಿ ಯೇಸುರಾಜ್ ನೇಮಕ ಇದೇ ವೇಳೆ ಹುಬ್ಬಳ್ಳಿ ನೇಹಾ ಕೊಲೆ ಲವ್ ಜಿಹಾದ್ ಎಂದ ಅಮಿತ್ ಶಾ ಹೇಳಿಕೆ ಪ್ರತಿಕ್ರಿಯೆ ನೀಡಿದ ಸಿಎಂ, ಅಮಿತ್ ಶಾ ರಾಜಕೀಯಕ್ಕೋಸ್ಕರ ಹೇಳ್ತಾರೆ. ನೇಹಾ ಪ್ರಕರಣದಲ್ಲಿ ನಾವು ಆರೋಪಿಯನ್ನು ತಕ್ಷಣವೇ ಬಂಧನ ಮಾಡಿದ್ದೀವಿ. ಅದನ್ನು ಸಿಐಡಿ ಕೊಟ್ಟಿದ್ದೆವೆ ಸ್ಪೇಷಲ್ ಕೋರ್ಟ್ ಮಾಡಿದ್ದೇವೆ. ಆರೋಪಿಗೆ ಕಠಿಣ ಶಿಕ್ಷೆ ಕೊಡಬೇಕು ಅಂತ, ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ಮಾತನಾಡಿದ್ದೇವೆ. ಸರ್ಕಾರ ಕಾನೂನು ಪ್ರಕಾರ ಏನೆಲ್ಲ ಮಾಡೋಕೆ ಸಾಧ್ಯ ಇದೆ ಮಾಡಿದ್ದೀವಿ. ಅದು ಜಿಹಾದ್ ಅಂತ ಹೇಳಿದರೆ ರಾಜಕೀಯಕ್ಕೋಸ್ಕರ ಹೇಳ್ತಾರೆ ಎಂದು ಟಾಂಗ್ ಕೊಟ್ಟರು.ಅಮಿತ್ ಶಾ ಗೃಹಮಂತ್ರಿ, ಮಣಿಪುರ ಘಟನೆ ಬಗ್ಗೆ ಯಾಕೆ ಮಾತಾಡಲಿಲ್ಲ? ಮಣಿಪುರದಲ್ಲಿ ಸರ್ಕಾರವನ್ನೇ ಮುಂದುವರೆಸಿದರು. ಅದನ್ನು ಕೇಳಲ್ಲ ನೀವು ಆ ಪ್ರಶ್ನೆ ಕೇಳಿ, ಯು ಬಿಯಿಂಗ್ ಎ ಹೋಮ್ ಮಿನಿಸ್ಟರ್ ಏನ್ ಮಾಡಿದ್ರಿ? ಸರ್ಕಾರವನ್ನು ಸೂಪರ್ ಸೀಡ್ ಮಾಡಿದ್ರಾ? ಚೀಪ್ ಮಿನಿಸ್ಟರ್ ಬದಲಾಯಿಸಿದರಾ? ಸರ್ಕಾರ ಡಿಸ್ಮಿಸ್ ಮಾಡಿದ್ರಾ? ಎಂದು ಪ್ರಶ್ನಿಸಿದರು.

Post a Comment