Udhayanidhi: ಸನಾತನ ಧರ್ಮ ವಿವಾದ; ಸಚಿವ ಉದಯನಿಧಿಗೆ ಸುಪ್ರೀಂ ಕೋರ್ಟ್ ತರಾಟೆ


 ಉದಯನಿಧಿ ಸ್ಟಾಲಿನ್

ನೀವೇನು ಜನಸಾಮಾನ್ಯರಲ್ಲ, ನೀವೊಬ್ಬ ಮಂತ್ರಿ. ನಿಮ್ಮ ಹೇಳಿಕೆಯ ಪರಿಣಾಮಗಳನ್ನು ನೀವು ತಿಳಿದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಪೀಠವು ತರಾಟೆಗೆ ತೆಗೆದುಕೊಂಡಿತು. ನವದೆಹಲಿ: ಸನಾತನ ಧರ್ಮದ (Sanatana Dharma) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರಿಗೆ ಸುಪ್ರೀಂ ಕೋರ್ಟ್ (Supreme Court) ಚಾಟಿ ಬೀಸಿದೆ. ತಮ್ಮ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ದಾಖಲಾಗಿರುವ ಎಫ್​ಐಆರ್​ಗಳ ಸಂಬಂಧ ಸಚಿವರು ಉನ್ನತ ಕೋರ್ಟ್​ ಮೊರೆ ಹೋಗಿದ್ದರು. ಈ ಬಗ್ಗೆ ನ್ಯಾಯ ಪೀಠವು ಉದಯನಿಧಿ ಅವರ ನಿಲುವನ್ನು ತರಾಟೆಗೆ ತೆಗೆದುಕೊಂಡಿತು. ನೀವು ನಿಮ್ಮ ಹಕ್ಕನ್ನು ದುರುಪಯೋಗಪಡಿಸಿಕೊಂಡಿದ್ದೀರಿ ಎಂದು ಸಚಿವರ ಬಗ್ಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠ ಅಸಮಾಧಾನ ವ್ಯಕ್ತಪಡಿಸಿತು.ನಿಮ್ಮ ಹಕ್ಕನ್ನು ನೀವು ದುರಪಯೋಗ ಮಾಡಿಕೊಂಡಿದ್ದೀರಿಸಂಬಂಧಿತ ಸುದ್ದಿಲಂಚ ಪ್ರಕರಣಗಳಲ್ಲಿ ಸಂಸದ, ಶಾಸಕರಿಗೆ ಕಾನೂನು ರಕ್ಷಣೆ ಇಲ್ಲ: ಸುಪ್ರೀಂ ಐತಿಹಾಸಿಕ ತೀರ್ಪುಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗವನ್ನು ನಿರಾಕರಿಸುವುದು ತಪ್ಪಲ್ಲ; ಸುಪ್ರೀಂಕೋರ್ಟ್ಸಿಜೆಐ ಚಂದ್ರಚೂಡ್​ ಮನಸ್ಸು ಬದಲಾಯಿಸುವಂತೆ ಮಾಡಿದ ಕಪಿಲ್ ಸಿಬಲ್? ಮಂಡಿಸಿದ ವಾದವೇನು ಗೊತ್ತಾ?Electoral Bonds ಯೋಜನೆಗೆ ನಿಷೇಧ, ಇದು ಅಸಾಂವಿಧಾನಿಕ​: ಸುಪ್ರೀಂ ಮಹತ್ವದ ತೀರ್ಪುಸಿನಿಮಾ ನಟರೂ ಆಗಿರುವ ಉದಯನಿಧಿ ಸ್ಟಾಲಿನ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ದೇಶದ ವಿವಿಧೆಡೆ ದಾಖಲಾಗಿರುವ ಅನೇಕ ಎಫ್​ಐಆರ್​ಗಳನ್ನು ಒಗ್ಗೂಡಿಸಿ ವಾದ-ವಿವಾದ ಆಲಿಸುವಂತೆ ಮನವಿ ಮಾಡಿದರು. ಅರ್ಜಿಯನ್ನು ಆಲಿಸಿದ ಕೋರ್ಟ್​ ಸಚಿವರ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನೀವು ಸಂವಿಧಾನದ ಆರ್ಟಿಕಲ್ 19(1)(ಎ) ಅಂದರೆ ವಾಕ್ ಸ್ವಾತಂತ್ರ್ಯ ಹಾಗೂ ಆರ್ಟಿಕಲ್ 19(1)(ಎ) ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ಈಗ ನೀವು ಆರ್ಟಿಕಲ್ 32 ರ ಅಡಿಯಲ್ಲಿ ಅಂದರೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ನಿಮ್ಮ ಹಕ್ಕನ್ನು ಚಲಾಯಿಸುತ್ತಿದ್ದೀರಾ ಕೋರ್ಟ್​ ಪ್ರಶ್ನಿಸಿತು.ಇದನ್ನೂ ಓದಿ: Modi Ka Parivar: ಮೋದಿಗೆ ಮಕ್ಕಳು ಏಕಿಲ್ಲ ಎಂದು ಪ್ರಶ್ನಿಸಿದ ಲಾಲೂಗೆ ಭಾವನಾತ್ಮಕವಾಗಿ ತಿರುಗೇಟು ಕೊಟ್ಟ ನಮೋನೀವು ಸಾಮಾನ್ಯರಲ್ಲನಿಮ್ಮ ಹೇಳಿಕೆಯ ಪರಿಣಾಮ ಏನು ಎಂಬುವುದು ನಿಮಗೆ ಗೊತ್ತಿಲ್ಲವೇ? ನೀವೇನು ಜನಸಾಮಾನ್ಯರಲ್ಲ, ನೀವೊಬ್ಬ ಮಂತ್ರಿ. ನಿಮ್ಮ ಹೇಳಿಕೆಯ ಪರಿಣಾಮಗಳನ್ನು ನೀವು ತಿಳಿದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಪೀಠವು ತರಾಟೆಗೆ ತೆಗೆದುಕೊಂಡಿತು. ಜೊತೆಗೆ ಪ್ರಕರಣವನ್ನು ಮಾರ್ಚ್ 15 ಕ್ಕೆ ಮುಂದೂಡಿತು.ಏನಿದು ವಿವಾದ?ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಮಾವೇಶವೊಂದರಲ್ಲಿ ಮಾತನಾಡಿದ್ದ ಅವರು ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಹಾಗಾಗಿ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳಿಗೆ ಹೋಲಿಸಿ ಟೀಕಿಸಿದ್ದರು. ಈ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ದೇಶಾದ್ಯಂತ ಆಕ್ರೋಶ ಕಂಡು ಬಂದಿತ್ತು.ಹೇಳಿಕೆಯಿಂದ ಹಿಂದೆ ಸರಿಯದ ಉದಯನಿಧಿವಿವಾದದ ಕಾವು ಜೋರಾಗಿದ್ದರೂ ಸಚಿವ ಉದಯನಿಧಿ ತಮ್ಮ ಹೇಳಿಕೆಯಿಂದ ಹಿಂದೆ ಸರಿಯೋದಿಲ್ಲ ಎನ್ನುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಸನಾತನ ಧರ್ಮವನ್ನು ಅನುಸರಿಸುವವರ ನರಮೇಧಕ್ಕೆ ನಾನು ಕರೆ ನೀಡಿಲ್ಲ ಎಂದಷ್ಟೇ ಸ್ಪಷ್ಟನೆ ನೀಡಿದ್ದರು. ಸನಾತನ ಧರ್ಮವು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ವಿಭಾಗಿಸುತ್ತದೆ. ಆ ಮೂಲಕ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಎಂದು ಅವರು ವಾದಿಸಿದ್ದರು.ಸನಾತನ ಧರ್ಮದ ಬಗ್ಗೆ ಸಂಶೋಧನೆ ನಡೆಸಿರುವ ಸಾಮಾಜಿಕ ಹೋರಾಟಗಾರ ಪೆರಿಯಾರ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹಗಳನ್ನು ಪ್ರಸ್ತುತಪಡಿಸಲು ಸಿದ್ಧ ಎಂದು ಉದಯನಿಧಿ ಸವಾಲು ಎಸೆದಿದ್ದರು. ಅನೇಕ ಸಾಮಾಜಿಕ ಅನಿಷ್ಟಗಳಿಗೆ ಸನಾತನ ಧರ್ಮ ಕಾರಣವಾಗಿದೆ ಎಂದು ಉದಯನಿಧಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿಯೂ ಬರೆದುಕೊಂಡಿದ್ದರು. ಈಗ ಅವರು ತಮ್ಮ ಮೇಲಿನ ಪ್ರಕರಣಗಳ ಸಂಬಂಧ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ.

Post a Comment

Previous Post Next Post