ಬಿಜೆಪಿ ನಿಯೋಗ
FSL Report: ವರದಿ ಬಂದರೂ ಸರ್ಕಾರ ಮುಚ್ಚಿಡುವ ಪ್ರಯತ್ನ ಮಾಡ್ತಿದೆ. ಹೀಗಾಗಿ ನಾವು ಡಿಜಿಪಿಗೆ ಮನವಿ ಸಲ್ಲಿಸಿದ್ದೇವೆ ಎಂದು ನಂದೀಶ್ ರೆಡ್ಡಿ ತಿಳಿಸಿದರು.ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆಯ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಖಾಸಗಿ ಎಫ್ಎಸ್ಎಲ್ ವರದಿಯೊಂದನ್ನು (FSL Report) ಬಿಜೆಪಿ ಹಂಚಿಕೊಂಡಿದೆ. ಇದೀಗ ಈ ವರದಿಯನ್ನು ಆಧರಿಸಿ ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ಬಿಜೆಪಿ ಪ್ರತಿಭಟನೆಗೆ (BJP Protest) ಮುಂದಾಗಿದೆ. ಇದೀಗ ಬಿಜೆಪಿ ಶಾಸಕರ ನಿಯೋಗ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಡಿಜಿಪಿ ಅವರಿಗೆ ಮನವಿ ಸಲ್ಲಿಸಿದೆ. ಶಾಸಕರಾದ ರವಿ ಸುಬ್ರಮಣ್ಯ, ಉದಯ್ ಗರುಡಾಚಾರ್, ಧೀರಜ್ ಮುನಿರಾಜು, ಸಿಕೆ ರಾಮಮೂರ್ತಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಅವರ ನಿಯೋ ಮನವವಿಯನ್ನು ಸಲ್ಲಿಸಿದೆ.
Post a Comment