Accused Arrested: ಹೌದಾ, ಅರೆಸ್ಟ್ ಮಾಡಿದ್ರಾ? ಐ ಕಾಂಟ್ ಬಿಲೀವ್ ಎಂದ ಪರಮೇಶ್ವರ್


 ಜಿ ಪರಮೇಶ್ವರ್, ಗೃಹ ಸಚಿವ

 G Parameshwar: ನಮ್ಮ ಇಲಾಖೆಯವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರು ತನಿಖೆ (Police Investigation) ಮಾಡ್ತಾ ಇದ್ರು, ಅವರು ಅರೆಸ್ಟ್ ಮಾಡಿರಬಹುದು ಎಂದು ಹೇಳಿದರು.ತುಮಕೂರು: ಪಾಕ್ ಪರ ಘೋಷಣೆ ಕೂಗಿದ ಆರೋಪದ ಪ್ರಕರಣದಲ್ಲಿ ಮೂವರು ಆರೋಪಿಗಳ (Accused Arrested) ಬಂಧನದ ವಿಚಾರಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ (Home Minister G Parameshwar) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತ ಪ್ರಶ್ನೆಗೆ ಹೌದಾ ಅರೆಸ್ಟ್ ಮಾಡಿದ್ರಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇಲ್ಲ, ನಾನು ಬೆಳಗ್ಗೆಯಿಂದ ನಿಮ್ಮ ಜೊತೆಯಲ್ಲಿಯೇ ಇದ್ದೇನೆ. ಎಲ್ಲಾದ್ರೂ ಎರಡು ಗಂಟೆ ಕಾಣೆಯಾಗಿದ್ನಾ? ನಮ್ಮ ಇಲಾಖೆಯವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರು ತನಿಖೆ (Police Investigation) ಮಾಡ್ತಾ ಇದ್ರು, ಅವರು ಅರೆಸ್ಟ್ ಮಾಡಿರಬಹುದು ಎಂದು ಹೇಳಿದರು. ಮೂವರು ಆರೋಪಿಗಳ ಬಂಧನದ ಬಗ್ಗೆ ಪೊಲೀಸ್ ಪ್ರಕಟಣೆಯ ನೋಟ್ ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಇದು ಅಧಿಕೃತ ಅಂತಾ ಹೇಗೆ ನಂಬೋದು ಎಂದರು. ನಾನು ಈ ಕಾಪಿ ಮೇಲೆ ಅವಲಂಬನೆಯಾಗಲ್ಲ. ಐ ಕಾಂಟ್ ಬಿಲೀವ್ ಎಂದರು.ಸಂಬಂಧಿತ ಸುದ್ದಿಚುನಾವಣೆಗೂ ಮುನ್ನ ಕಾಂಗ್ರೆಸ್​ಗೆ ಮತ್ತೊಂದು​ ​ಆಘಾತ! ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿರಿಯ ನಾಯಕNisha Yogeshwar: ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಂಡ ಸಿಪಿವೈ ಪುತ್ರಿ; ಡಿಕೆ ಸುರೇಶ್ ಜೊತೆ ಚರ್ಚೆBengaluru: ಪಾಕ್ ಪರ ಘೋಷಣೆ ಆರೋಪ; ಮೂವರು ಆರೋಪಿಗಳ ಬಂಧನಎಲೆಕ್ಷನ್ ಬಂದಾಗ ಬಾಂಬ್ ಯಾರ್ ಹಾಕ್ತಾರೆ ನಮ್ಗೆ ಗೊತ್ತಿದೆ; ಬಿಜೆಪಿ ವಿರುದ್ದ ಸಚಿವ ವೈದ್ಯ ಗಂಭೀರ ಆರೋಪಮಾಹಿತಿ ಪಡೆದು ಹೇಳುವೆ!ಅರೆಸ್ಟ್ ಆಗಿದ್ರೆ ಅದನ್ನ ಖಚಿತಪಡಿಸಿಕೊಂಡು ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ. ಬೆಂಗಳೂರಿಗೆ ಹೋಗ್ತೀನಿ ಈಗ ,ಆ ಬಳಿಕ ಕನ್ಫರ್ಮ್ ಮಾಡ್ತೀನಿ. ಅಂತಿಮವಾಗಿ ರಿಪೋರ್ಟ್ ಬಂದಿದ್ಯಾ? ಅದರ ಮೇಲೆ ಕ್ರಮ ತೆಗೆದುಕೊಂಡಿದ್ದಾರಾ ನೋಡ್ತೀನಿ ಎಂದು ಹೇಳಿದರು.ಮೂವರ ಬಂಧನ, ಪೊಲೀಸರಿಂದ ಮಾಧ್ಯಮ ಪ್ರಕಟಣೆಎಫ್​ಎಸ್​ಎಲ್ ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿರೋದು ದೃಢವಾದ್ಮೇಲೆಯೇ ವಿಧಾನಸೌಧ ಠಾಣೆಯ ಪೊಲೀಸರು ಮೂವರನ್ನು ಬಂಧಿಸಲಾಗಿದೆ. ಈ ಸಂಬಂಧ ಪೊಲೀಸರಿಂದ ಮಾಧ್ಯಮ ಪ್ರಕಟಣೆ ಸಹ ಬಿಡುಗಡೆ ಮಾಡಲಾಗಿದೆ.ಯಾರು ಬಂಧಿತರು?ಹಾವೇರಿ ಜಿಲ್ಲೆಯ ಬ್ಯಾಡಗಿಯ ಮಹಮ್ಮದ್ ನಾಶಿಪುಡಿ, ಬೆಂಗಳೂರಿನ ಆರ್​​ಟಿ ನಗರದ ಮುನಾವರ್ ಮತ್ತು ದೆಹಲಿ ಮೂಲದ ಇಲ್ತಾಜ್ಆರೋಪಿಗಳ ಬಂಧನಕ್ಕೆ ಆರ್.ಅಶೋಕ್ ಪ್ರತಿಕ್ರಿಯೆವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವರದಿ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​ ಸರ್ಕಾರ ಕಡೆಗೂ ಜನಾಕ್ರೋಶಕ್ಕೆ ಮಣಿದು ಮೂರು ಆರೋಪಿಗಳನ್ನು ಬಂಧಿಸಿದೆ. ಇದನ್ನೂ ಓದಿ: Nisha Yogeshwar: ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಂಡ ಸಿಪಿವೈ ಪುತ್ರಿ; ಡಿಕೆ ಸುರೇಶ್ ಜೊತೆ ಚರ್ಚೆFSL ವರದಿಯಲ್ಲಿ ಘೋಷಣೆ ಕೂಗಿದ್ದು ಧೃಢಪಟ್ಟ ನಂತರವೇ ಈ ಮೂವರು ಆರೋಪಿಗಳ ಬಂಧನವಾಗಿರುವುದು ಸ್ಪಷ್ಟಾಗಿದ್ದರೂ, ಸರ್ಕಾರ ಇನ್ನೂ FSL ವರದಿ ಬಹಿರಂಗ ಮಾಡದಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ, ಯಾರನ್ನೂ ರಕ್ಷಿಸುತ್ತಿಲ್ಲ ಎನ್ನುವುದಾದರೆ ವರದಿ ಬಹಿರಂಗ ಮಾಡಲು ಹಿಂಜರಿಕೆ ಏಕೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.

Post a Comment

Previous Post Next Post