ಮೃತ ಬಾಲಕಿ ಮಾನ್ವಿ
ಸಂಪೂರ್ಣ ಚಿಕಿತ್ಸೆ ನೀಡುವ ಮುನ್ನವೇ ಮಾನ್ವಿ ಕೊನೆಯುಸಿರೆಳೆದಳು ಎಂದು ಮೃತ ಬಾಲಕಿಯ ತಾತ ವಿವರಿಸಿದ್ದಾರೆ.Aಪಟಿಯಾಲ: ಹುಟ್ಟುಹಬ್ಬದ (Birthday) ದಿನ ಎಲ್ಲರಿಗೂ ತುಂಬಾ ಪ್ರಮುಖವಾದ ದಿನ. ಅಂತಹ ಪ್ರಮುಖ ದಿನವೇ 10 ವರ್ಷದ ಬಾಲಕಿ ಪಾಲಿಗೆ ಮರಣ ದಿನವಾಗಿದೆ. ಆನ್ ಲೈನ್ ಮೂಲಕ ಬಂದ ಬರ್ತ್ ಡೇ ಕೇಕ್ ಬಾಲಕಿಗೆ ಯಮಪಾಷಣವಾಗಿದೆ. ಸಂತೋಷದ ದಿನ ದುರಂತ ಅಂತ್ಯ ಕಂಡ ಬಾಲಕಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೋಡುಗರ ಮನದಲ್ಲಿ ವಿಧಿ ನೀ ಎಷ್ಟು ಕ್ರೂರಿ ಎನ್ನುವಂತೆ ಮಾಡಿದೆ.ಹುಟ್ಟುಹಬ್ಬದ ದಿನವೇ ಸಾವುಪಂಜಾಬ್ ನಲ್ಲಿ ಹುಟ್ಟುಹಬ್ಬದ ದಿನವೇ ಬಾಲಕಿ ಮಸಣ ಸೇರಿರುವ ದುರಂತ ಘಟನೆ ನಡೆದಿದೆ. 10 ವರ್ಷದ ಬಾಲಕಿಯ ಹುಟ್ಟುಹಬ್ಬವನ್ನು ಮನೆಯವರು ಆನ್ ಲೈನ್ ನಿಂದ ಕೇಕ್ ತರಿಸಿ ಕಟ್ ಮಾಡಿಸಿ ಸಂಭ್ರಮದಿಂದ ಆಚರಿಸಿದ್ದಾರೆ. ಆದರೆ ಅದೇ ಕೇಕ್ ಬಾಲಕಿಯನ್ನು ಹುಟ್ಟುಹಬ್ಬದ ದಿನವೇ ಸಾಯುವಂತೆ ಮಾಡಿದೆ.ಸಂಬಂಧಿತ ಸುದ್ದಿಗುಡ್ ಬೈ ಬ್ರದರ್.. ವಿಲ್ ಮಿಸ್ ಯು, ಗೆಳೆಯ ಡ್ಯಾನಿಯಲ್ ನಿಧನಕ್ಕೆ ನಟ ಕಿಶೋರ್ ಸಂತಾಪಯುಎಇನಲ್ಲಿರುವ ಭಾರತೀಯರು ಸಹ ಇನ್ಮುಂದೆ ಫೋನ್‌ಪೇ ಆ್ಯಪ್ ಬಳಸಬಹುದು!ಕ್ಯೂನಲ್ಲಿ ನಿಲ್ಲಬೇಕಿಲ್ಲ, ಎಲ್ಲಿಯೂ ಅಲೆಯಬೇಕಾಗಿಲ್ಲ: ಆನ್‌ಲೈನ್‌ನಲ್ಲೇ ಲಭ್ಯವಿವೆ ಪಡಿತರ ಚೀಟಿ ಡಿಟೇಲ್ಸ್ನಿಮ್ಮ ಆಧಾರ್-ಪ್ಯಾನ್ ಲಿಂಕ್ ಮಾಡಲಾಗಿದ್ಯಾ? ಆನ್‌ಲೈನ್‌ನಲ್ಲಿ ನೋಡುವುದು ಹೇಗೆ?ಪಂಜಾಬ್ ನ ಪಟಿಯಾಲದಲ್ಲಿ ಕಳೆದ ವಾರ 10 ವರ್ಷದ ಬಾಲಕಿ ಆನ್ ಲೈನ್ ನಲ್ಲಿ ತರಿಸಿದ ಕೇಕ್ ನಿಂದ ಫುಡ್ ಪಾಯ್ಸನ್ ಆಗಿ ಸಾವನ್ನಪ್ಪಿರುವುದು ವರದಿಯಾಗಿದೆ. ಈಗ ಮೃತ ಬಾಲಕಿ ಸಂತೋಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮದಲ್ಲಿರುವ ಕೊನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೃತ ಬಾಲಕಿ ಹೆಸರು ಮಾನ್ವಿ. ಕ್ಯೂಟ್ ಆಗಿ ಮುಗ್ಧ ನಗುವಿನಲ್ಲಿ ಕೇಕ್ ಕಟ್ ಮಾಡಿ ಎಲ್ಲರ ಜೊತೆ ಸಂಭ್ರಮಿಸುತ್ತಿರುವ ಮಾನ್ವಿ ವಿಡಿಯೋ ಆಗ ಎಲ್ಲರ ಮನಕಲಕುವಂತೆ ಮಾಡಿದೆ. ಕೇಕ್ ತಿಂದವರು ಅಸ್ವಸ್ಥಮಾನ್ವಿ ತಾತ ಹೇಳುವ ಪ್ರಕಾರ, ಮಾನ್ವಿ ಕುಟುಂಬಸ್ಥರು ಮಾರ್ಚ್ 24ರಂದು ಸಂಜೆ 6 ಗಂಟೆ ಸಮಯಕ್ಕೆ ಆನ್ ಲೈನ್ ನಲ್ಲಿ ಬರ್ತ್ ಡೇ ಕೇಕ್ ಆರ್ಡರ್ ಮಾಡಿದ್ದಾರೆ. ಸಂಜೆ 7 ಗಂಟೆ ಸುಮಾರಿಗೆ ಕೇಕ್ ಕತ್ತರಿಸಿ ಕುಟುಂಬಸ್ಥರು ಸಂಭ್ರಮಿಸಿದ್ದಾರೆ. ರಾತ್ರಿ 10 ಗಂಟೆ ಸಮಯಕ್ಕೆ ಮನೆಯಲ್ಲಿದ್ದ ಐವರು ಅಸ್ವಸ್ಥರಾಗಿದ್ದಾರೆ. ವಿಡಿಯೋದಲ್ಲಿ ಕಾಣಿಸುವ ಇಬ್ಬರು ಹೆಣ್ಣು ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ಮಾನ್ವಿ ವಿಪರೀತ ಬಾಯಾರಿಕೆಯಿಂದ ಕುಡಿಯಲು ನೀರನ್ನು ಕೇಳಿದ್ದಾಳೆ. ನೀರು ಕುಡಿದ ಬಳಿಕ ನಿದ್ರೆಗೆ ಜಾರಿದ್ದಾಳೆ. ಮತ್ತೊಬ್ಬ ಬಾಲಕಿ ಪ್ರೇಮನ್ ತೀವ್ರ ವಾಂತಿಯಿಂದ ಬಳಲಿದ್ದಾಳೆ.ಇದನ್ನೂ ಓದಿ: Weird News: ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ ಈ ವ್ಯಕ್ತಿ! ಈತ ಯಾರನ್ನೇ ನೋಡಿದ್ರೂ ರಾಕ್ಷಸರಂತೆ ಕಾಣುತ್ತಾರಂತೆಮರುದಿನ ಮಾನ್ವಿ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು, ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಕ್ಷಣ ತಪಾಸಣೆ ನಡೆಸಿದ ವೈದ್ಯರು, ಆಕ್ಸಿಜನ್ ಹಾಕಿ, ಇಸಿಜಿ (ECG -electrocardiogram) ಮಾಡಿದ್ದಾರೆ. ಆದರೆ ದುರಾದೃಷ್ಟವಶಾತ್ ಮಾನ್ವಿ ಬದುಕುಳಿಯಲಿಲ್ಲ. ಸಂಪೂರ್ಣ ಚಿಕಿತ್ಸೆ ನೀಡುವ ಮುನ್ನವೇ ಮಾನ್ವಿ ಕೊನೆಯುಸಿರೆಳೆದಳು ಎಂದು ಮೃತ ಬಾಲಕಿ ತಾತ ವಿವರಿಸಿದ್ದಾರೆ.ಪ್ರಾಣ ತೆಗೆದ ಚಾಕೋಲೇಟ್ ಕೇಕ್ಪಟಿಯಾಲಾದ ಅದಾಲತ್ ಬಜಾರ್‌ನಲ್ಲಿರುವ ‘ಕೇಕ್ ಕನ್ಹಾ’ ಬೇಕರಿಯಲ್ಲಿ ಆನ್ ಲೈನ್ ಮೂಲಕ ಚಾಕೋಲೇಟ್ ಕೇಕ್ ಅನ್ನು ಮಾನ್ವಿ ಕುಟುಂಬಸ್ಥರು ಆರ್ಡರ್ ಮಾಡಿದ್ದರು. ಈ ಕೇಕ್ ನಲ್ಲಿ ವಿಷಕಾರಿ ಅಂಶವಿದ್ದು ಮಾನ್ವಿ ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.ಮೃತ ಬಾಲಕಿ ಮಾನ್ವಿ ಕುಟುಂಬಸ್ಥರ ಆರೋಪದಂತೆ ಸ್ಥಳೀಯ ಪೊಲೀಸರು ಬೇಕರಿ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸುತ್ತಿರುವ ಪೊಲೀಸರು ಬಾಲಕಿಯ ಮರಣೋತ್ತರ ಪರೀಕ್ಷೆ ನಡೆದಿದೆ. ಕೇಕ್ ಪೀಸ್ ಅನ್ನು ತಪಾಸಣೆಗೆ ಕಳುಹಿಸಲಾಗಿದೆ. ನಾವು ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Post a Comment