Crime News: ಗಂಡನನ್ನು ಕೊಂದವರಿಗೆ ₹ 50,000 ಬಹುಮಾನ ಅಂತ ವಾಟ್ಸಾಪ್ ಸ್ಟೇಟಸ್ ಹಾಕಿದ ಹೆಂಡತಿ!


 ಸಾಂದರ್ಭಿಕ ಚಿತ್ರ

ಮಹಿಳೆಯೊಬ್ಬರು ತನ್ನ ಗಂಡನನ್ನು ಕೊಲೆ ಮಾಡಿದರೆ 50 ಸಾವಿರ ಹಣ ಕೊಡುವುದಾಗಿ ವಾಟ್ಸಪ್​ ಸ್ಟೇಟಸ್​ನಲ್ಲಿ ಘೋಷಿಸಿದ್ದಾರೆ. ಪತ್ನಿಯ ಈ ಆಫರ್​ ನೋಡಿದ ಪತಿ ಸೀದಾ ಪೊಲೀಸರ​ ಮೊರೆ ಹೋಗಿದ್ದಾರೆ.ದೆಹಲಿ: ಗಂಡ-ಹೆಂಡತಿ ಜಗಳ (Husband -Wife) ಉಂಟು ಮಲಗೋವರೆಗೆ ಅನ್ನೋ ಮಾತಿದೆ. ಆದರೆ ಕೆಲವೊಮ್ಮೆ ಪತಿ-ಪತ್ನಿ ಜಗಳಗಳ ಕೊಲೆಯಲ್ಲಿ ಅಂತ್ಯವಾಗುತ್ತವೆ. ಆಗ್ರಾದ ಬಹ್ ಜಿಲ್ಲೆಯ ಮಹಿಳೆಯೊಬ್ಬರು ತನ್ನ ಗಂಡನನ್ನು ಕೊಲೆ ಮಾಡಿದರೆ 50 ಸಾವಿರ ಹಣ ಕೊಡುವುದಾಗಿ (Reward ) ವಾಟ್ಸಪ್​ ಸ್ಟೇಟಸ್​ನಲ್ಲಿ ಘೋಷಿಸಿದ್ದಾರೆ. ಪತ್ನಿಯ ಈ ಆಫರ್​ ನೋಡಿದ ಪತಿ ಸೀದಾ ಪೊಲೀಸರ​ ಮೊರೆ ಹೋಗಿದ್ದಾರೆ. ಇದಕ್ಕೂ ಮೊದಲು ಪತ್ನಿಯ ಪ್ರಿಯಕರ ಕೂಡ ಬೆದರಿಕೆ ಹಾಕಿದ್ದರು ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾರೆ.ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಬಹ್ ಪೊಲೀಸ್ ಠಾಣೆಯ ಅಧಿಕಾರಿ ಶ್ಯಾಮ್ ಸಿಂಗ್ ಹೇಳಿದ್ದಾರೆ.ಸಂಬಂಧಿತ ಸುದ್ದಿಹೆಂಡತಿಯ ಟಾರ್ಚರ್ ತಾಳಲಾರದೆ ಗಂಡ ಆತ್ಮಹತ್ಯೆ; ಗೋಡೆ ಮೇಲೆ ಡೆತ್​ನೋಟ್​!ಬಾಗಿಲು ತೆರೆದ್ರೆ ಅವರ ಬೆಡ್ ರೂಂ; ಕಿಟಕಿ ತೆಗೆದೇ ಎಲ್ಲ ಮಾಡ್ತಾರೆ’ ಠಾಣೆ ಮೆಟ್ಟಿಲೇರಿದ ಬೆಂಗ್ಳೂರ್ ಲೇಡಿWedding: ವಧು ಜೊತೆ ಆಕೆಯ ಮಾಜಿ ಪತಿಯೂ ಮನೆಗೆ ಎಂಟ್ರಿಥೇಟ್ ‘ಚೆಲುವಿನ ಚಿತ್ತಾರ’! ಮಾನಸಿಕ ರೋಗಿಯಾಗಿರುವ ಪತ್ನಿಯ ಮೊದಲ ಗಂಡನ ಆರೈಕೆಗೆ ನಿಂತ 2ನೇ ಪತಿ!ದೂರು ನೀಡಿರುವ ಪತಿ ಜುಲೈ 9, 2022 ರಲ್ಲಿ ಮಧ್ಯಪ್ರದೇಶದ ಭಿಂಡ್‌ನ ಹಳ್ಳಿಯೊಂದರ ಮಹಿಳೆಯನ್ನು. ಸ್ವಲ್ಪ ಸಮಯದ ನಂತರ ದಂಪತಿ ಮಧ್ಯೆ ಭಿನ್ನಾಭಿಪ್ರಾಯಗಳು ಹೆಚ್ಚಾದವು. ಮದುವೆಯಾದ ಐದು ತಿಂಗಳ ನಂತರ ಮಹಿಳೆ ಗಂಡನ ಮನೆ ತೊರೆದು ತವರಿಗೆ ವಾಪಸ್​ ಆಗಿದ್ದರು. ಅಂದಿನಿಂದ ಮಹಿಳೆ ತನ್ನ ಪೋಷಕರೊಂದಿಗೆ ನೆಲೆಸಿದ್ದಾಳೆ. ಇದೀಗ ಮಹಿಳೆ ಭಿಂಡ್‌ನ ಪೊಲೀಸ್ ಠಾಣೆಯಲ್ಲಿ ಜೀವನಾಂಶ ದಾವೆ ಹೂಡಿದ್ದಾರೆ.ಇದೀಗ ತನ್ನ ಪತಿಯನ್ನು ಕೊಲ್ಲುವ ವ್ಯಕ್ತಿಗೆ ₹ 50,000 ಬಹುಮಾನ ನೀಡುವುದಾಗಿ ವಾಟ್ಸಾಪ್ ಸ್ಟೇಟಸ್ ಅನ್ನು ಹಂಚಿಕೊಂಡಿದ್ದಾಳೆ. ಈ ಹಿನ್ನೆಲೆ ಪತಿ ಠಾಣೆ ಮೆಟ್ಟಿಲೇರಿದ್ದಾರೆ.ಅಕ್ರಮ ಸಂಬಂಧದ ಆರೋಪ ಈಟಿವಿ ಭಾರತ್ ವರದಿಯ ಪ್ರಕಾರ, ತನ್ನ ಹೆಂಡತಿಯು ನೆರೆಯ ಮನೆಯಲ್ಲಿ ವಾಸಿಸುವ ಬಾಡಿಗೆದಾರನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. ಅವರ ಮದುವೆಯ ಆರಂಭದಿಂದಲೂ ಎಲ್ಲಾ ವಿವಾದಗಳಿಗೆ ಏಕೈಕ ಕಾರಣ ಅಕ್ರಮ ಸಂಬಂಧ ಎಂದು ಆರೋಪಿಸಿದ್ದಾರೆ. ಆಕೆಯ ಪ್ರಿಯಕರ ಕೂಡ ದೂರವಾಣಿ ಕರೆ ಮೂಲಕ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪತಿ ದೂರಿನಲ್ಲಿ ಉಲ್ಲೇಸಿದ್ದಾರೆ.ಮತ್ತೊಂದು ಪ್ರಕರಣಬಸ್‌ನಲ್ಲಿ ನಿತ್ಯ ಬರುತ್ತಿದ್ದ ಮಹಿಳೆಯನ್ನು ಪುಸಲಾಯಿಸಿ ತಾನು ಹಿಂದೂ ಎಂದು ನಂಬಿಸಿ ಆಕೆಯನ್ನು ಮದುವೆಯಾಗಿದ್ದಲ್ಲದೇ ಈಗ ಗರ್ಭಿಣಿಯನ್ನಾಗಿಸಿದ ಅನ್ಯಕೋಮಿನ ಯುವಕನ ವಿರುದ್ಧ ದೂರು ದಾಖಲಾಗಿದೆ.ಈ ಘಟನೆ ಗುಜರಾತ್ ನ ಅಹಮದಾಬಾದ್‌ನಲ್ಲಿ ನಡೆದಿದ್ದು, ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಬಲಪಂಥೀಯ ಸಂಘಟನೆಗಳು ಆರೋಪಿಸಿವೆ. ಮೂಲಗಳ ಪ್ರಕಾರ, ಮುಸ್ಲಿಂ ಯುವಕ ತೌಸೀಫ್ ಎಂಬಾತ ತನ್ನನ್ನು ತಾನು ಸುರೇಶ್ ಎಂದು ಹೇಳಿ ಮಹಿಳೆಯ ಸ್ನೇಹ ಸಂಪಾದಿಸಿದ್ದು, ನಂತರ ಆಕೆಯೊಂದಿಗೆ ಪ್ರೀತಿಯ ನಾಟಕವಾಡಿ ಮದುವೆಯಾಗಿದ್ದಲ್ಲದೇ ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ್ದಾನೆ.

Post a Comment

Previous Post Next Post