PM Modi: ಭ್ರಷ್ಟಾಚಾರಿಗಳ ಎದುರು ಮೋದಿ ತಲೆಬಾಗಲ್ಲ; ವಿಪಕ್ಷಗಳಿಗೆ ನಮೋ ತಿರುಗೇಟು


  ಪ್ರಧಾನಿ ಮೋದಿ

ಭ್ರಷ್ಟಾಚಾರ ನಡೆಸಿದ್ದಕ್ಕಾಗಿ ಕೆಲವು ದೊಡ್ಡ ನಾಯಕರನ್ನು ಕಂಬಿ ಹಿಂದೆ ನಿಲ್ಲಿಸಲಾಗಿದೆ. ನಾನು ಭ್ರಷ್ಟಾಚಾರಿಗಳ ಎದುರು ತಲೆಬಾಗಲ್ಲ ಎಂದು ಮೋದಿ ವಿಪಕ್ಷಗಳಿಗೆ ತಿರುಗೇಟು ನೀಡಿದರು.ಮೀರತ್‌: ಭ್ರಷ್ಟ ನಾಯಕರ ಮುಂದೆ ಮೋದಿ ತಲೆಬಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ವಿಪಕ್ಷಗಳ ವಿರುದ್ಧ ಅಬ್ಬರಿಸಿದರು. ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ (Arvind Kejriwal) ಬಂಧನ ಖಂಡಿಸಿ ಇಂದು ದೆಹಲಿಯಲ್ಲಿ ವಿಪಕ್ಷಗಳು ಒಟ್ಟಾಗಿ ಮೆಗಾ ರ್ಯಾಲಿ ನಡೆಸುತ್ತಿವೆ. ಬಂಧನ ರಾಜಕೀಯ ಪ್ರೇರಿತ ಎಂದು ಕೇಂದ್ರದತ್ತ ಬೊಟ್ಟು ಮಾಡಿದ್ದಾರೆ. ಇತ್ತ ಮೋದಿ ಉತ್ತರ ಪ್ರದೇಶದ ಮೀರತ್‌ನಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ಭ್ರಷ್ಟಾಚಾರ ನಡೆಸಿದ್ದಕ್ಕಾಗಿ ಕೆಲವು ದೊಡ್ಡ ನಾಯಕರನ್ನು ಕಂಬಿ ಹಿಂದೆ ನಿಲ್ಲಿಸಲಾಗಿದೆ. ನಾನು ಭ್ರಷ್ಟಾಚಾರಿಗಳ ಎದುರು ತಲೆಬಾಗಲ್ಲ ಎಂದು ಮೋದಿ ವಿಪಕ್ಷಗಳಿಗೆ ತಿರುಗೇಟು ನೀಡಿದರು.

 ಸಂಬಂಧಿತ ಸುದ್ದಿ

INDIA ಮಹತ್ವದ ಸಭೆ: ಕೇಜ್ರಿವಾಲ್, ಚುನಾವಣಾ ದೇಣಿಗೆ, ಇಡಿ ವಿರುದ್ಧ ಪ್ರತಿಪಕ್ಷಗಳಿಂದ ಹೋರಾಟ

ಪರಸ್ಪರರ ಭ್ರಷ್ಟಾಚಾರ ಮುಚ್ಚಿ ಹಾಕಲು INDI ರಚನೆಯಾಗಿದೆ; ವಿಪಕ್ಷಗಳ ವಿರುದ್ಧ ಮೋದಿ ಗುಡುಗು

ನಮ್ಮ ಗಂಡಂದಿರು ಜೈಲಿನಲ್ಲಿದ್ದಾರೆ, ನಾವು ಜೊತೆಯಾಗಿ ಹೋರಾಡೋಣ: ಸುನೀತಾ ಕೇಜ್ರಿವಾಲ್- ಕಲ್ಪನಾ ಸೊರೆನ್

ದೆಹಲಿ ಸರ್ಕಾರಕ್ಕೆ ಮುಗಿಯದ ಇಡಿ ಕಂಟಕ! ಗೃಹ ಸಚಿವ ಕೈಲಾಶ್ ಗಹ್ಲೋಟ್ ತನಿಖೆಗೆ ಹಾಜರು

ಯಾರೇ ಲೂಟಿ ಮಾಡಿದ್ದರೂ ಪ್ರತಿಯೊಂದು ಪೈಸೆಯನ್ನು ದೇಶದ ಜನರಿಗೆ ಹಿಂತಿರುಗಿಸಬೇಕೆಂಬುದು ನನ್ನ ಗ್ಯಾರಂಟಿ ಎಂದು ಪ್ರಧಾನಿ ಮೋದಿ ಹೇಳಿದರು. ನನ್ನ ದೇಶದ ಜನರನ್ನು ಲೂಟಿ ಮಾಡಿದವರು ಯಾರೇ ಆಗಿರಲಿ, ನನ್ನ ಜನರಿಂದ ಕದ್ದ ಸಂಪತ್ತನ್ನು ನಾನು ಅವರಿಗೆ ಹಿಂದಿರುಗಿಸುತ್ತೇನೆ ಎಂಬುದು ನನ್ನ ಭರವಸೆ ಎಂದರು.ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಕುರಿತು ಮಾತನಾಡಿದ ಪ್ರಧಾನಿ ಮೋದಿ, ರೈತರನ್ನು ದ್ವೇಷಿಸುವ ಭಾರತದ ಒಕ್ಕೂಟವು ಚೌಧರಿ ಚರಣ್ ಸಿಂಗ್‌ಗೆ ಸರಿಯಾದ ಗೌರವವನ್ನೂ ನೀಡಲಿಲ್ಲ ಎಂದು ಆರೋಪಿಸಿದರು. ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಸಂಸತ್ತಿನೊಳಗೆ ಭಾರತ ಮೈತ್ರಿಕೂಟ ಮಾಡಿದ್ದನ್ನು ಇಡೀ ದೇಶವೇ ನೋಡಿದೆ. ಭಾರತ ರತ್ನ ಪ್ರಶಸ್ತಿ ವಿಚಾರವಾಗಿ ಸಂಸತ್ತಿನಲ್ಲಿ ಮಾತನಾಡಲು ನಮ್ಮ ಕಿರಿಯ ಸಹೋದರ ಜಯಂತ್ ಚೌಧರಿ ಎದ್ದು ನಿಂತಾಗ ಅವರನ್ನು ತಡೆಯುವ ಪ್ರಯತ್ನ ನಡೆದಿದೆ ಎಂದು ಮೋದಿ ಕಿರಿಕಾರಿದರು.ಇನ್ನು ಮೀರತ್​ ಕ್ಷೇತ್ರದಲ್ಲಿ ಅರುಣ್ ಗೋವಿಲ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅರುಣ್ ಗೋವಿಲ್ 80ರ ದಶಕದಲ್ಲಿ ರಾಮಾಯಣ ಧಾರವಾಹಿಯಲ್ಲಿ ಭಗವಾನ್ ರಾಮನ ಪಾತ್ರದಲ್ಲಿ ನಟಿಸಿದ್ದರು.ಚುನಾವಣಾ ಮಾಹಿತಿಏಪ್ರಿಲ್​ 19ರಂದು ಮೊದಲ ಹಂತದ ಚುನಾವಣೆ ಆರಂಭವಾಗಲಿದ್ದು, ಜೂನ್​ 1ರಂದು ಕೊನೆಯ 7ನೇ ಹಂತದ ಮತದಾನ ನಡೆಯಲಿದೆ. ಜೂನ್​ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಏಪ್ರಿಲ್ 19 ರಂದು ಮೊದಲ ಹಂತದಲ್ಲಿ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ 89 ಕ್ಷೇತ್ರಗಳಿಗೆ, ಮೂರನೇ ಹಂತದಲ್ಲಿ 94 ಕ್ಷೇತ್ರಗಳು, ನಾಲ್ಕನೇ ಹಂತದಲ್ಲಿ 96, ಐದನೇ ಹಂತದಲ್ಲಿ 49, ಆರನೇ ಹಂತದಲ್ಲಿ 57 ಮತ್ತು ಏಳನೇ ಹಂತದಲ್ಲಿ 57 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

Post a Comment

Previous Post Next Post