Threat Mail: ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಬಾಂಬ್​ ಬೆದರಿಕೆ; ಮೇಲ್ ಕಳುಹಿಸಿ 2.5 ಮಿಲಿಯನ್ ಡಾಲರ್​ ಹಣಕ್ಕೆ ಡಿಮ್ಯಾಂಡ್


 ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಬಾಂಬ್​ ಬೆದರಿಕೆ threat: ಇ-ಮೇಲ್ ಸಂಬಂಧ ಮಾರ್ಚ್ 4ರಂದು ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬೆಂಗಳೂರು ಸೈಬರ್ ಕ್ರೈಂ ಪೊಲೀಸರ ತಂಡ ತನಿಖೆ ಆರಂಭಿಸಿದೆ.ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದ (Rameshwaram Cafe Bomb blast) ಆತಂಕ ಇರುವಾಗಲೇ ಬಾಂಬ್ ಬೆದರಿಕೆಯ ಮೇಲ್ (Threat Mail) ಸರ್ಕಾರಕ್ಕೆ ಬಂದಿದೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಮತ್ತು ಗೃಹ ಸಚಿವರಿಗೆ ಬೆದರಿಕೆಯ ಮೇಲ್ ಬಂದಿದೆ. ಶಾಹಿದ್ ಖಾನ್ ಎಂಬಾತನಿಂದ ಬೆದರಿಕೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಸ್‌, ರೈಲು, ದೇವಸ್ಥಾನ, ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಅಂಬಾರಿ ಉತ್ಸವ ಬಸ್‌ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಇಡೋದಾಗಿ ಎಚ್ಚರಿಕೆ ನೀಡಿದ್ದಾರೆ.ಬೆಂಗಳೂರು ಪೊಲೀಸ್ ಕಮಿಷನರ್‌ಗೆ ಇಮೇಲ್ ರವಾನೆಯಾಗಿದೆ ಎಂದು ತಿಳಿದು ಬಂದಿದೆ. ಸಿಎಂ, ಡಿಸಿಎಂ ಮತ್ತು ಗೃಹ ಸಚಿವರಿಗೂ ಮೇಲ್ ರವಾನೆಯಾಗಿದ್ದು, ಎಲ್ಲರಿಗೂ ಮೇಲ್ ಮೂಲಕ ಹಣಕ್ಕೆ ಬೇಡಿಕೆ ಇರಿಸಲಾಗಿದೆ ಎಂದು ತಿಳಿದು ಬಂದಿದೆ.ಸಂಬಂಧಿತ ಸುದ್ದಿವಿಧಾನಸೌಧದ ಗೋಪುರವನ್ನ ಗುಂಬಜ್ ಮಾಡ್ಕೊಂಡು ಅಜಾನ್ ಕೂಗ್ತಾರೆ; ಪ್ರತಾಪ್ ಸಿಂಹCM Siddaramaiah: ಸಿಎಂ ವ್ಯಾಸಂಗ ಮಾಡಿದ ಶಾಲೆಗೆ‌ 10 ಲಕ್ಷ ರೂಪಾಯಿ ದೇಣಿಗೆNisha Yogeshwar: ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಂಡ ಸಿಪಿವೈ ಪುತ್ರಿ; ಡಿಕೆ ಸುರೇಶ್ ಜೊತೆ ಚರ್ಚೆರಾಜ್ಯ ಪೊಲೀಸ್‌‌ ಮಹಾ ನಿರ್ದೇಶಕರ ಕಚೇರಿಗೆ ಬಿಜೆಪಿ ನಿಯೋಗ ಭೇಟಿ; ತಿರಂಗಾ ಯಾತ್ರೆಗೆ ಬ್ರೇಕ್ಸೈಬರ್ ಕ್ರೈಂ ಠಾಣೆಯಲ್ಲಿ ಎಫ್​ಐಆರ್ಇ-ಮೇಲ್ ಸಂಬಂಧ ಮಾರ್ಚ್ 4ರಂದು ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬೆಂಗಳೂರು ಸೈಬರ್ ಕ್ರೈಂ ಪೊಲೀಸರ ತಂಡ ತನಿಖೆ ಆರಂಭಿಸಿದೆ.ಬಾಂಬ್ ಬೆದರಿಕೆಗೆ ಡಿಸಿಎಂ ಹೇಳಿದ್ದೇನು?ಬಾಂಬ್ ಬೆದರಿಕೆ ಮೇಲ್ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಬಾಂಬ್ ಬೆದರಿಕೆ ಬಂದಿದೆ. ನಾವು ಅದನ್ನು ಪೊಲೀಸ್ ಕಮಿಷನರ್​ಗೆ ಕಳುಹಿಸಿ ಕೊಟ್ಟಿದ್ದೇವೆ. ನಿನ್ನೆ ಎಲ್ಲಾ ಮೊನ್ನೆಯೇ ಬಂದಿದೆ ಎಂದು ಹೇಳಿದರು. 2.5 ಮಿಲಿಯನ್ ಡಾಲರ್ ಹಣಕ್ಕೆ ಡಿಮ್ಯಾಂಡ್ಶಾಹಿದ್​ ಖಾನ್, ಎಂಬುವನು ಕಳುಹಿಸಿರುವ ಮೇಲ್ ಇದಾಗಿದೆ. ಬಸ್ಸು, ಟ್ರೈನ್, ಎಲ್ಲಾ ಕಡೆ ಬಾಂಬ್ ಇಡುತ್ತೇವೆ ಎಂದಿದ್ದಾನೆ. ಅಂಬಾರಿ ಬಸ್ಸುಗಳಿಗೆ ಬಾಂಬ್ ಇಡುವ ಮೆಸೇಜ್ ಹಾಕಿದ್ದಾನೆ. ಇದು ನಿಜವೋ, ಸುಳ್ಳೋ, ಬ್ಲಾಕ್ಮೇಲ್​ ಅಂತ ಗೊತ್ತಿಲ್ಲ. 2.5 ಮಿಲಿಯನ್ ಡಾಲರ್ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ ಎಂಬ ವಿಷಯಯನ್ನು ಡಿಕೆ ಶಿವಕುಮಾರ್ ತಿಳಿಸಿದರು.ಇದನ್ನೂ ಓದಿ: CM Siddaramaiah: ಸಿಎಂ ವ್ಯಾಸಂಗ ಮಾಡಿದ ಶಾಲೆಗೆ‌ 10 ಲಕ್ಷ ರೂಪಾಯಿ ದೇಣಿಗೆರಾಮೇಶ್ವರಂ ಕೆಫೆ ಕೇಸ್- NIA ಎಲ್ಲಾ ಆ್ಯಂಗಲ್‌ನಲ್ಲಿ ತನಿಖೆ ಮಾಡ್ತಿದೆರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಬಂಧ NIA ಅಧಿಕಾರಿಗಳು ಬಂದಿದ್ದಾರೆ. ನಮ್ಮ ಪೊಲೀಸರು ಅವರಿಗೆ ಹಸ್ತಾಂತರ ಮಾಡಲಿದ್ದಾರೆ ಅಂತ ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ. ಬಸ್ಸಲ್ಲಿ ಬಂದಿದ್ರು ಅಂತ‌ ಮಾಹಿತಿ ಇದೆ. ಸಿಸಿಟಿವಿ ಫೂಟೇಜ್ ಕೊಡಲಾಗಿದೆ. NIA ಎಲ್ಲಾ ಆ್ಯಂಗಲ್‌ನಲ್ಲಿ ತನಿಖೆ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ.ವರದಿ: ಗಂಗಾಧರ್

Post a Comment

Previous Post Next Post