Anantkumar Hegde: ಧಮ್ ಇದ್ರೆ ಈಗಲೇ ಬಂದು ಇಲ್ಲಿ ಕೂತ್ಕೊಳ್ಳಿ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಸಂಸದರ ಸವಾಲು


 ಅನಂತ್​ಕುಮಾರ್ ಹೆಗಡೆ, ಬಿಜೆಪಿ ಸಂಸದ

 UttaraKannada Loksabha Constituency: ಕುರ್ಚಿ ಮುಂದಿಟ್ಟ ಸಂಸದರು, ಧಮ್ ಇದ್ರೆ ಬನ್ನಿ ಇಲ್ಲಿ ಕುಳಿತುಕೊಳ್ಳಿ ಎಂದು ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ಸವಾಲು ಹಾಕಿದರು.ಕಾರವಾರ: ನನ್ನ ಎದುರು ಚುನಾವಣೆಗೆ ಸ್ಪರ್ಧೆ ಮಾಡುವ ಬಿಜೆಪಿಯ ಆಕಾಂಕ್ಷಿಗಳಿದ್ರೆ (BJP Ticket Aspiriant) ಬನ್ನಿ. ಈಗಲೇ ಬನ್ನಿ, ಧಮ್ ಇದ್ರೆ ಬನ್ನಿ ಎಂದು ಸಂಸದ ಅನಂತ ಕುಮಾರ್ ಹೆಗಡೆ (MP Ananthkumar Hegde) ಕುರ್ಚಿ ಹಿಡಿದಿರುವ ಘಟನೆ ನಡೆದಿದೆ. ಭಟ್ಕಳದ ಮಾವಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ (BJP Meeting) ಕುರ್ಚಿ ಮೇಲೆತ್ತಿ ಕಾರ್ಯಕರ್ತರ ಧೈರ್ಯವನ್ನು ಸಂಸದ ಅನಂತ ಕುಮಾರ್ ಹೆಗಡೆ ಪ್ರಶ್ನೆ ಮಾಡುವಂತೆ ಕಾಣಿಸುತ್ತಿತ್ತು. ತಾನು ಇರೊವರೆಗೂ ಉತ್ತರಕನ್ನಡ (Uttarakannada Loksabha Constituency) ಬೇರೆ ಯಾವ ಬಿಜೆಪಿ ಅಭ್ಯರ್ಥಿ ಇಲ್ಲ ಎಂಬಂತೆ ಅನಂತ್​ಕುಮಾರ್ ಹೆಗಡೆ ಅವರ ಮಾತುಗಳಿದ್ದವು ಎಂಬ ಚರ್ಚೆಗಳು ಶುರುವಾಗಿವೆ. ಸಂಸದರ ಈ ವರ್ತನೆಯಿಂದಾಗಿ ಕಾರ್ಯಕರ್ತರು ಮುಜುಗರಕ್ಕೊಳಗಾದರು. ಸಂಬಂಧಿತ ಸುದ್ದಿರಾಜ್ಯ ಪೊಲೀಸ್‌‌ ಮಹಾ ನಿರ್ದೇಶಕರ ಕಚೇರಿಗೆ ಬಿಜೆಪಿ ನಿಯೋಗ ಭೇಟಿ; ತಿರಂಗಾ ಯಾತ್ರೆಗೆ ಬ್ರೇಕ್ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಬಿಗ್‌ಶಾಕ್‌! ವಿವಿಧ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ!Lok Sabha Election: ತುಮಕೂರು ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ, ಬೀದಿಗಿಳಿದು ಪ್ರತಿಭಟಿಸಿದ ಕಾರ್ಯಕರ್ತರು!ಖಾಸಗಿ ಫೋರೆನ್ಸಿಕ್ ವರದಿ ತಯಾರಿಸಿದ್ದೇ ಮೊದಲನೇ ದೇಶದ್ರೋಹ; ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿಕುರ್ಚಿ ಮುಂದಿಟ್ಟ ಸಂಸದರು, ಧಮ್ ಇದ್ರೆ ಬನ್ನಿ ಇಲ್ಲಿ ಕುಳಿತುಕೊಳ್ಳಿ ಎಂದು ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ಸವಾಲು ಹಾಕಿದರು. ಈ ಮೂಲಕ ಮತ್ತೊಮ್ಮೆ ತಾವೇ ಅಭ್ಯರ್ಥಿ ಎಂಬ ಅಭ್ಯರ್ಥಿ ಎಂಬ ಸಂದೇಶವನ್ನು ರವಾನಿಸಿದರು. ಈ ಸಭೆಯಲ್ಲಿ ಭಟ್ಕಳ ಮಾಜಿ ಶಾಸಕ ಸುನಿಲ್ ನಾಯ್ಕ್ ಸೇರಿದಂತೆ ಬಿಜೆಪಿ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.ಸಶಕ್ತರು ಬಂದು ಕುಳಿತುಕೊಳ್ಳಲಿಕಿತ್ತೂರು, ಖಾನಾಪುರ ಎಲ್ಲಿದೆ ಅಂತ ಮ್ಯಾಪ್​ನಲ್ಲಿ ತೋರಿಸೋದಕ್ಕೂ ಬರಲ್ಲ. ಅಂತಜಹವರು ರಾಜಕಾರಣದ ಬಗ್ಗೆ ಮಾತನಾಡ್ತಾರೆ. ಯಾರಾದ್ರೂ ಸಶಕ್ತ ಯುವಕರು ಇದ್ರೆ ಮುಂದೆ ಬನ್ನಿ. ಈ ಕುರ್ಚಿಯನ್ನು ಇಲ್ಲೇ ಇಟ್ಟು ಹೋಗ್ತೀನಿ. ಸಶಕ್ತರು ಬಂದು ಕುಳಿತುಕೊಳ್ಳಲಿ ಎಂದು ಸವಾಲು ಹಾಕಿದರು. ನಾವು ಚುನಾವಣೆಯನ್ನು ಗೆಲ್ಲಬೇಕಿದೆ. ಆಷಾಢಭೂತಿತನದಿಂದ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ. ಚುನಾವಣೆ ಅನ್ನೋದು ಪ್ರಜಾಪ್ರಭುತ್ವದಲ್ಲಿಯ ಯುದ್ಧವಾಗಿದೆ. ಒಂದೊಂದು ಮತ ಸಹ ಪ್ರಮುಖವಾಗಿರುತ್ತದೆ. ಯಾವನೊಬ್ಬನು ನೋಡಿಕೊಂಡು ಮತ ಲೆಕ್ಕ ಹಾಕೋದು ಅಲ್ಲ ಎಂದರು.ಉಡಾಫೆ ಮಾತುಗಳು ಸೋಲಿಗೆ ಕಾರಣನಾನು ಸೋಲಿಸಲು ಒಂದೇ ವೋಟ್ ಸಾಕು. ಉಡಾಫೆಯ ಮಾತುಗಳೇ ನಮ್ಮನ್ನು ಸೋಲಿಸುತ್ತವೆ. ಈ ರೀತಿಯ ಸ್ವಭಾವ ಇದ್ದವರು ಚುನಾವಣೆಯಲ್ಲಿ ಎಂದೂ ಗೆಲ್ಲಲ್ಲ ಎಂದು ಹೇಳಿದರು.ಒಡೆಯ ಹೃದಯದವರು ಎದ್ದು ನಿಲ್ಲಲು ಆಗಲ್ಲ, ಹಾಗೆ ಸಣ್ಣ ಮನಸ್ಸಿನವರು ಎಂದಿಗೂ ದೊಡ್ಡವರು ಆಗಲ್ಲ ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದರು.ಇದನ್ನೂ ಓದಿ: DK Shivakumar: ಡಿಸಿಎಂ ಡಿಕೆ ಶಿವಕುಮಾರ್‌ಗೆ ಬಿಗ್ ರಿಲೀಫ್‌! ED ಕೇಸ್‌ ವಜಾ ಮಾಡಿದ ಸುಪ್ರೀಂ ಕೋರ್ಟ್ರಾಜಕಾರಣಿಯಾಗಿ ಹುಟ್ಟಿಲ್ಲ ಮತ್ತು ಸಾಯಲ್ಲಈ ಚುನಾವಣೆಯನ್ನು ಮೆಟ್ಟಿಲನ್ನಾಗಿ ಸ್ವೀಕರಿಸಿದ್ರೆ ಮುಂದಿನ ವಿಧಾನಸಭೆ ಎಲೆಕ್ಷನ್​ ಬಿಜೆಪಿ ಗೆಲ್ಲಬೇಕು. ಆ ಗೆಲುವಿಗೆ ಈ ಚುನಾವಣೆಯಲ್ಲಿ ಈಗಿನಿಂದಲೇ ಫೌಂಡೇಶನ್ ಹಾಕಿಕೊಂಡು ನಾವೆಲ್ಲರೂ ಹೋಗಬೇಕಿದೆ. ಇದೇ ವೇಳೆ ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯಲ್ಲ ಎಂದು ಹೇಳಿದರು.

Post a Comment

Previous Post Next Post