ಸಿದ್ದರಾಮಯ್ಯ-ವಿ ಶ್ರೀನಿವಾಸ ಪ್ರಸಾದ್ಈಗಾಗಲೇ ಅಳಿಯನನ್ನ ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಸಿದ್ದಾರೆ. ಇದೀಗ ಹಳೆ ಮುನಿಸು ಮರೆತು ಇಬ್ಬರು ದಿಗ್ಗಜರು ಒಂದಾಗಲು ವೇದಿಕೆ ಸಜ್ಜಾಗಿದೆ.ಮೈಸೂರು: ಲೋಕಸಭಾ ಚುನಾವಣೆಗೆ (Lok Sabha Election 2024) ಕೌಂಡ್‌ಡೌನ್ ಶುರುವಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಈ ಬಾರಿ ಎಲ್ಲಾ ಪಕ್ಷಗಳು ತಂತ್ರಗಾರಿಕೆಯನ್ನು ಮಾಡುತ್ತಿದೆ. ಈತನ್ಮಧ್ಯೆ ಮೈಸೂರು (Mysuru) ಮತ್ತು ಚಾಮರಾಜನಗರ (Chamarajnagar) ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಸಿಎಂ ಸಿದ್ದರಾಮಯ್ಯ (Siddaramaiah) ಪಣ ತೊಟ್ಟಿದ್ದಾರೆ.ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಬಿಜೆಪಿ ನಾಯಕರ ಜೊತೆ ಮುನಿಸು ಹೊಂದಿದ್ದು, ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಬಹುತೇಕ ಫಿಕ್ಸ್ ಆಗಿದೆ. ಈ ಹಿಂದೆ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವರೂ ಆಗಿರುವ ವಿ ಶ್ರೀನಿವಾಸ್ ಸಿದ್ದರಾಮಯ್ಯ ಜೊತೆ ಮುನಿಸಿಕೊಂಡು ಬಿಜೆಪಿ ಸೇರಿ ನಂತರ ಸಂಸದರಾಗಿ ಆಯ್ಕೆಯಾಗಿದ್ದರು. ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇಬ್ಬರೂ ಮುನಿಸು ಮರೆತು ಮುಖಾಮುಖಿ ಆಗಲಿದ್ದಾರೆ ಎಂದು ತಿಳಿದು ಬಂದಿದೆ.ಸಂಬಂಧಿತ ಸುದ್ದಿಮೈಸೂರು, ಚಾಮರಾಜನಗರ ಗೆಲುವಿಗೆ ಪಣತೊಟ್ಟ ಸಿಎಂ, ಇಂದಿನಿಂದ ಖುದ್ದು ಫೀಲ್ಡ್‌ಗಿಳಿದು ಸಿದ್ದರಾಮಯ್ಯ ಪ್ರಚಾರಬಡವರಿಗೆ ಉಚಿತವಾಗಿ ವಿಸ್ಕಿ, ಬಿಯರ್ ಗ್ಯಾರಂಟಿ! ಮತದಾರರಿಗೆ ವಿಚಿತ್ರ ಆಫರ್ ಕೊಟ್ಟ ಅಭ್ಯರ್ಥಿಚುನಾವಣಾ ಹೊಸ್ತಿಲಲ್ಲಿ ಬಿಹಾರ ಕಾಂಗ್ರೆಸ್‌ಗೆ ಬಿಗ್ ಶಾಕ್! ಬಂದವರೆಲ್ಲಾ ಬಿಟ್ಟು ಹೋದ್ರು!Sumalatha: ಕಾಂಗ್ರೆಸ್‌ಗೆ ಅಂಬರೀಶ್ ಏನು ಅನ್ಯಾಯ ಮಾಡಿದ್ರು? ಡಿಕೆಶಿಗೆ ಸುಮಲತಾ ಖಡಕ್ ಪ್ರಶ್ನೆಇದನ್ನೂ ಓದಿ: LPG Gas Cylinder: ಆರ್ಥಿಕ ವರ್ಷದ ಮೊದಲ ದಿನವೇ ಭರ್ಜರಿ ಗುಡ್‌ನ್ಯೂಸ್! ಚುನಾವಣೆಗೆ ಮುನ್ನ LPG ಸಿಲಿಂಡರ್ ಬೆಲೆ ಇಳಿಕೆ!ಇದರ ಭಾಗವಾಗಿ ಇಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದು, ಈಗಾಗಲೇ ಸಚಿವ ಮಹದೇವಪ್ಪ, ವೆಂಕಟೇಶ್ ಹಾಗೂ ಸಿಎಂ ಪುತ್ರ ಯತೀಂದ್ರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ. ಇದೀಗ ಇಂದು ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಲಿದ್ದು, ಈ ವೇಳೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲ ಕೇಳಲಿದ್ದಾರೆ. ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟದಿಂದ ವಿ.ಶ್ರೀನಿವಾಸ್ ಪ್ರಸಾದ್‌ರನ್ನು ಕೈಬಿಟ್ಟಿದ್ದರು. ಇದರಿಂದ ಅವಮಾನಗೊಂಡ ವಿ ಶ್ರೀನಿವಾಸ್ ಪ್ರಸಾದ್, ಬಳಿಕ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ್ದರು. ಇದಾದ ಬಳಿಕ ನಂಜನಗೂಡು ಉಪಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ಸೋತಿದ್ದರು. ಅದಾದ ಬಳಿಕ ಚಾಮುಂಡೇಶ್ವರಿ ವಿಧಾನಸೌಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಗೆ ಶ್ರೀನಿವಾಸ್ ಪ್ರಸಾದ್ ಪರೋಕ್ಷ ಕಾರಣರಾಗಿದ್ದರು. ಅಂದಿನಿಂದ ಸಿದ್ದರಾಮಯ್ಯ ಹೆಸರು ಹೇಳಿದ್ರೆ ಕೆಂಡಕಾರುತ್ತಿದ್ದ ಶ್ರೀನಿವಾಸ್ ಪ್ರಸಾದ್ ಇದೀಗ ಮುನಿಸು ಮರೆತು ಒಂದಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಅಳಿಯನನ್ನ ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಸಿದ್ದಾರೆ. ಇದೀಗ ಹಳೆ ಮುನಿಸು ಮರೆತು ಇಬ್ಬರು ದಿಗ್ಗಜರು ಒಂದಾಗಲು ವೇದಿಕೆ ಸಜ್ಜಾಗುತ್ತಿದ್ದು, ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಿರುವ ಶ್ರೀನಿವಾಸ್ ಪ್ರಸಾದ್ ಅವರನ್ನು ರಾಜಕೀಯ ನಿವೃತ್ತಿ ಮತ್ತು ಆರೋಗ್ಯ ವಿಚಾರಿಸುವ ನೆಪದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಲಿದ್ದಾರೆಇದನ್ನೂ ಓದಿ: Lok Sabha Election: ಚಿತ್ರದುರ್ಗದಲ್ಲಿ ಬಿಜೆಪಿಗೆ ಆತಂಕ ತಂದ ಬಂಡಾಯ! ಕಾಂಗ್ರೆಸ್ ಶಾಸಕರ ಜೊತೆ MLA ಚಂದ್ರಪ್ಪ ಗೌಪ್ಯ ಮೀಟಿಂಗ್?ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ತಂತ್ರ ರೂಪಿಸಿದ್ದು, ಮತ್ತೆ ಎರಡು ಕ್ಷೇತ್ರಗಳತ್ತ ಚಿತ್ತ ಹರಿಸಿರುವ ಸಿಎಂ ಸಿದ್ದರಾಮಯ್ಯ, ಇಂದು ವರುಣಾ, ಟಿ ನರಸೀಪುರ ಕ್ಷೇತ್ರಗಳಲ್ಲಿ ಪ್ರಚಾರದ ಸಭೆ ನಡೆಸಲಿದ್ದಾರೆ. ನಾಳೆ ಮೈಸೂರಿನ ಚಾಮರಾಜ ಕ್ಷೇತ್ರಗಳಲ್ಲಿ ಪ್ರಚಾರದ ಸಭೆ ನಡೆಸಲಿದ್ದು, ನಾಡಿದ್ದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನೀಲ್ ಭೋಸ್ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಲಿದ್ದಾರೆ. ಎರಡು ಕ್ಷೇತ್ರಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗೋದರ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದು, ಬಿಜೆಪಿ ನಾಯಕ ಶ್ರೀನಿವಾಸ್ ಪ್ರಸಾದ್ ಬೆಂಬಲದ ಮೂಲಕ ಚುನಾವಣೆ ಗೆಲ್ಲಲು ಪ್ಲಾನ್ ರೂಪಿಸಿದ್ದಾರೆ. ಈ ಬಾರಿ ಶತಾಯಗತಾಯವಾಗಿ ಎರಡು ಕ್ಷೇತ್ರಗಳಲ್ಲಿ ಗೆಲುವಿಗೆ ಮುಂದಾಗಿರುವ ಸಿಎಂ, ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಈ ಭಾಗದಲ್ಲಿ ಪ್ರವಾಸ ಮಾಡಿದ್ದರು. ಇದೀಗ ಮತ್ತೆ ಎರಡು ಕ್ಷೇತ್ರಗಳಲ್ಲಿ ಪ್ರವಾಸದ ಮೂಲಕ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ಮಾಡಲಿದ್ದಾರೆ.

Post a Comment