ಪ್ರಧಾನಿ ಮೋದಿ
BJP Campaign: ಮೋದಿ ಅವರಿಗೆ ಕುಟುಂಬವೇ ಇಲ್ಲ. ಅವರು ಏಕೆ ಮಕ್ಕಳನ್ನು ಮಾಡಿಕೊಂಡಿಲ್ಲ ಎಂದು ಮೊದಲು ಹೇಳಲಿ ಎಂದು ಲಾಲೂ ಪ್ರಶ್ನಿಸಿದ್ದರು. ಆದಿಲಾಬಾದ್, ತೆಲಂಗಾಣ: ಪ್ರಧಾನಿ ಮೋದಿಗೆ (PM Modi) ಕುಟುಂಬವೇ ಇಲ್ಲ, ಅವರೊಬ್ಬ ಹಿಂದೂನೇ (Hindu) ಅಲ್ಲ. ಹಿಂದೂವಾಗಿದ್ದರೆ ಅವರ ತಾಯಿ ತೀರಿಕೊಂಡಾಗ ಕೇಶಮುಂಡನ ಮಾಡಿಸಿಕೊಳ್ಳಬೇಕಿತ್ತು ಎಂದು ಕಾಲೆಳೆದಿದ್ದ ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಭಾರತ ದೇಶದ ಜನರೇ ನನ್ನ ಕುಟುಂಬ, ನನ್ನ ಜೀವನವೇ ಒಂದು ತೆರೆದ ಪುಸ್ತಕ ಎಂದು ಇಲ್ಲಿ ನಡೆದ ಸಮಾವೇಶದಲ್ಲಿ ಹೇಳಿಕೆ ನೀಡಿದ್ದಾರೆ.ಮೋದಿಗೆ ಮಕ್ಕಳು ಏಕಿಲ್ಲ ಅಂತ ಹೇಳಲಿಸಂಬಂಧಿತ ಸುದ್ದಿನೌಕಾಪಡೆಯ ಹಡಗಿನಿಂದ ನಿಗೂಢವಾಗಿ ನಾಪತ್ತೆಯಾದ ಸಾಹಿಲ್ ವರ್ಮಾ; ಪೋಷಕರಿಂದ ಸಿಬಿಐ ತನಿಖೆಗೆ ಒತ್ತಾಯ!‘ನಾನು ಕೆಲಸ ಮಾಡದ ತಪ್ಪಿಗೆ ಮೋದಿಯವರನ್ನು ಶಿಕ್ಷಿಸಬೇಡಿ’, ಚುನಾವಣೆಗೂ ಮುನ್ನ ಕ್ಷಮೆಯಾಚಿಸಿದ ಬಿಜೆಪಿ ಸಂಸದಕರ್ನಾಟಕದ 17 ಕ್ಷೇತ್ರ ಸೇರಿದಂತೆ 160 BJP ಅಭ್ಯರ್ಥಿಗಳ ಪಟ್ಟಿ ಫೈನಲ್; ಇಲ್ಲಿದೆ ಸಂಭಾವ್ಯ ಪಟ್ಟಿಮೋದಿ ಆಡಳಿತ ಮೆಚ್ಚಿದ ಪಾಕ್ ಮೊದಲ ಮಹಿಳಾ ಸಿಎಂ! ಮೋದಿ ಆರ್ಥಿಕ ನೀತಿ ಫಾಲೋ ಮಾಡ್ತಾರಂತೆ ಮರ್ಯಮ್ನಿನ್ನೆ ಜನ್ ವಿಶ್ವಾಸ್ ಮಹಾ ರ್ಯಾಲಿಯಲ್ಲಿ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮೋದಿ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಕುಟುಂಬವೇ ಇಲ್ಲ. ಅವರು ಏಕೆ ಮಕ್ಕಳನ್ನು ಮಾಡಿಕೊಂಡಿಲ್ಲ ಎಂದು ಮೊದಲು ಹೇಳಲಿ ಎಂದು ಪ್ರಶ್ನಿಸಿದ್ದರು. ಹಿಂದುತ್ವ ಹೆಸರಿನಲ್ಲಿ ಮೋದಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಅವರು ನಿಜವಾದ ಹಿಂದೂನೇ ಅಲ್ಲ. ಹಿಂದೂಗಳು ಹೆತ್ತವರು, ಕುಟುಂಬಸ್ಥರು ನಿಧನರಾದಾಗ ಕೇಶಮುಂಡನ ಮಾಡಿಸಿಕೊಳ್ಳುತ್ತಾರೆ. ಆದರೆ ಮೋದಿ ಅವರು ತಮ್ಮ ತಾಯಿ ತೀರಿಕೊಂಡಾಗ ಕೇಶಮುಂಡನ ಮಾಡಿಸಿಕೊಂಡಿಲ್ಲ ಎಂದು ವ್ಯಂಗ್ಯವಾಡಿದ್ದರು.ಯಾರೂ ಇಲ್ಲದವರಿಗೆ ಮೋದಿ ಇದ್ದಾನೆಲಾಲೂ ಅವರ ವ್ಯಂಗ್ಯಕ್ಕೆ ತಿರುಗೇಟು ಕೊಟ್ಟಿರುವ ಪಿಎಂ ಮೋದಿ, ದೇಶದ 140 ಕೋಟಿ ಜನರೇ ನನ್ನ ಕುಟುಂಬ. ಕೋಟ್ಯಂತರ ತಾಯಂದಿರು, ಸೋದರಿಯರು ನನ್ನ ಕುಟುಂಬಸ್ಥರು ಎಂದಿದ್ದಾರೆ.ದೇಶದ ಪ್ರತಿ ಬಡವನೂ ನನ್ನ ಕುಟುಂಬಸ್ಥನು. ಯಾರೂ ಇಲ್ಲದವರಿಗೂ ಮೋದಿ ಇದ್ದಾನೆ. ಅವರಿಗಾಗಿ ನಾನು, ನನಗಾಗಿ ಅವರು ಇದ್ದಾರೆ. ನಾನು ದೇಶಕ್ಕಾಗಿ ಬದುಕುತ್ತಿದ್ದೇನೆ, ದೇಶದ ಜನರಿಗಾಗಿ ಹೋರಾಡುತ್ತೇನೆ, ದೇಶಕ್ಕಾಗಿಯೇ ಸಾಯಲು ಇಚ್ಛಿಸುತ್ತೇನೆ ಎಂದು ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.ಇದನ್ನೂ ಓದಿ: Loksabha Elections: ಉತ್ತರದಿಂದ ದಕ್ಷಿಣವರೆಗೆ ಪ್ರಧಾನಿ ಮೋದಿ ಚುನಾವಣಾ ಪ್ರಚಾರ, 9 ದಿನಗಳಲ್ಲಿ 11 ರಾಜ್ಯಗಳ ಪ್ರವಾಸ ಮೋದಿ ಕಿ ಪರಿವಾರ್ ಕ್ಯಾಂಪೇನ್ ಬಿಸಿಮೋದಿಗೆ ಕುಟುಂಬವೇ ಇಲ್ಲ ಎಂಬ ಲಾಲೂ ವ್ಯಂಗ್ಯದ ವಿರುದ್ಧ ಬಿಜೆಪಿಯ ಅಗ್ರ ನಾಯಕರು ತಿರುಗಿ ಬಿದ್ದಿದ್ದಾರೆ. ಗೃಹಮಂತ್ರಿ ಅಮಿತ್ ಶಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಹೆಸರಿನ ಪಕ್ಕ ಮೋದಿ ಕಿ ಪರಿವಾರ್ (ಮೋದಿ ಅವರ ಕುಟುಂಬಸ್ಥರು) ಎಂದು ಸೇರಿಸಿಕೊಂಡಿದ್ದಾರೆ.ಮೋದಿ ಕಿ ಪರಿವಾರ್ ಹೆಸರಿನಲ್ಲಿ ಕ್ಯಾಂಪೇನ್ ಶುರು ಮಾಡಿದ್ದಾರೆ. ಬಿಜೆಪಿಯ ಹಲವು ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ತಮ್ಮ ಹೆಸರಿನ ಜೊತೆ ಮೋದಿ ಕಿ ಪರಿವಾರ್ ಎಂದು ಸೇರಿಸಿಕೊಂಡಿದ್ದಾರೆ. ಆ ಮೂಲಕ ಲಾಲೂ ಅವರ ಹೇಳಿಕೆಯನ್ನು ಖಂಡಿಸಿ, ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಿದ್ದಾರೆ.ಈ ಹಿಂದೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ರಫೇಲ್ ಯುದ್ಧವಿಮಾನಗಳ ಖರೀದಿ ಹಗರಣವನ್ನು ಆರೋಪಿಸಿ ಚೌಕಿದಾರ್ ಚೋರ್ ಹೈ (ಕಾವಲುಗಾರ ಕಳ್ಳ) ಎಂದು ಮೋದಿ ಅವರನ್ನು ಗೇಲಿ ಮಾಡಿದ್ದರು. ಇದಕ್ಕೆ ಮೋದಿ ಹೌದು ನಾನು ಚೌಕಿದಾರನೇ ಎನ್ನುವ ಮೂಲಕ ತಿರುಗೇಟು ನೀಡಿದ್ದರು ಬಿಜೆಪಿಗರು ಈ ವಾಕ್ಯವನ್ನು ಬಳಸಿಕೊಂಡು ಜಾಣತನದಿಂದ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಿದ್ದರು. ಈಗ ಮತ್ತೆ ಅದೇ ರೀತಿ ವಿಪಕ್ಷಗಳ ದಾಳಿಯನ್ನು ಹೊಸ ಕ್ಯಾಂಪೇನ್ ಮೂಲಕ ಸಮರ್ಥವಾಗಿ ನಿಭಾಹಿಸಲು ಮುಂದಾಗಿದ್ದಾರೆ.
Post a Comment