ಮಲ್ಲಿಕಾರ್ಜುನ ಖರ್ಗೆ/ ರಾಹುಲ್ ಗಾಂಧಿಮೊದಲ ಪಟ್ಟಿಯಲ್ಲೇ ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ, ಸೆಂಟ್ರಲ್, ಬೆಂಗಳೂರು ಉತ್ತರ, ಉಡುಪಿ- ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟ ಸಾಧ್ಯತೆ ಇದೆ. ಬೆಂಗಳೂರು)ಬೆಂಗಳೂರು: ಮಾರ್ಚ್ 10ರ ಒಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ (Congress Candidates 1st list) ರಿಲೀಸ್ ಆಗೋ ಸಾಧ್ಯತೆ ಇದೆ. ಮುಂದಿನ ವಾರವೇ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಇಬ್ಬರೂ ಹೈಕಮಾಂಡ್‌ರನ್ನ (Congress High Command) ಭೇಟಿಯಾಗಲಿದ್ದು, ಕೆಪಿಸಿಸಿಯಿಂದ (KPCC) ಫೈನಲ್ ಮಾಡಿರುವ ಪಟ್ಟಿ ಸಲ್ಲಿಕೆ ಮಾಡಲಿದ್ದಾರೆ. ಗೊಂದಲವಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಗೆ ಕೆಲ ಸಚಿವರು ಒತ್ತಡ ಹೇರಿದ್ದಾರೆ.
ಗೊಂದಲವಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಗೆ ಒತ್ತಡ
ಸಂಬಂಧಿತ ಸುದ್ದಿ
Loksabha Election BJP candidates: ದೆಹಲಿಯ ನಾಲ್ವರು ಸಂಸದರನ್ನು ಬಿಜೆಪಿ ಕೈಬಿಟ್ಟಿದ್ಯಾಕೆ?
ಚುನಾವಣೆಗೂ ಮುನ್ನಾ I.N.D.I.A ಬಲ ಪ್ರದರ್ಶನ! ರಾಹುಲ್ ಸೇರಿ ಯಾರು ಏನ್ ಹೇಳಿದ್ರು?
ನಮ್ಮನ್ನ ಸಿಎಂ ಬಳಿ ಕಳಿಸಿ, ನಮಗೆ ಗೃಹಲಕ್ಷ್ಮೀ ಹಣ ಬಂದಿಲ್ಲ; ಮಹಿಳೆಯರ ಆಕ್ರೋಶ
Rameshwaram Cafe Case: ಬಾಂಬ್ ಬೆಂಗಳೂರು ಎಂದ ಅಶೋಕ್ಗೆ ಡಿಕೆಶಿ ಕೌಂಟರ್
ಸಿಎಂ, ಡಿಸಿಎಂ ಪ್ರತ್ಯೇಕ ಸರ್ವೆ ರಿಪೋರ್ಟ್ ಆಧಾರದ ಮೇಲೆ ಸಿದ್ದಪಡಿಸಿರುವ ಪ್ರತ್ಯೇಕ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸಲು ಮುಂದಾಗಿದ್ದಾರೆ. ಮೊದಲ ಪಟ್ಟಿಯಲ್ಲೇ ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ, ಸೆಂಟ್ರಲ್, ಬೆಂಗಳೂರು ಉತ್ತರ, ಉಡುಪಿ- ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟ ಸಾಧ್ಯತೆ ಇದೆ. ಗೊಂದಲವಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಗೆ ಕೆಲ ಸಚಿವರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಇತ್ತ ಸಿಎಂ, ಡಿಸಿಎಂ ಸರ್ವೆ ಅಲ್ಲದೇ ಐಸಿಸಿಯಿಂದಲೂ ಪ್ರತ್ಯೇಕ ಸರ್ವೆ ನಡೆಸಲಾಗಿದ್ದು, ಸಿಎಂ, ಡಿಸಿಎಂ ಪಟ್ಟಿಯ ಜೊತೆ ಸರ್ವೆ ರಿಪೋರ್ಟ್ ಆಧರಿಸಿ ಹೈಕಮಾಂಡ್ ಅಭ್ಯರ್ಥಿ ಫೈನಲ್ ಮಾಡಲಿದೆಯಂತೆ.
ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಮಾಜಿ ಸಚಿವ; ಸಿಎಂ ಸಿದ್ದುಗೆ ಬಿಗ್ ಶಾಕ್!
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ
ಮೈಸೂರು - ಎನ್.ಲಕ್ಷ್ಮಣ್, ಡಾಲಿ ಧನಂಜಯ್
ಮಂಡ್ಯ - ಸ್ಟಾರ್ ಚಂದ್ರು
ತುಮಕೂರು - ಎಸ್.ಪಿ.ಮುದ್ದಹನುಮೇಗೌಡ, ಡಿ.ಸಿ.ಗೌರಿಶಂಕರ್
ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ
ಕೋಲಾರ - ಕೆ.ಎಚ್.ಮುನಿಯಪ್ಪ
ಚಿತ್ರದುರ್ಗ - ಬಿ.ಎನ್.ಚಂದ್ರಪ್ಪ
ಉಡುಪಿ-ಚಿಕ್ಕಮಗಳೂರು - ಜಯಪ್ರಕಾಶ್ ಹೆಗ್ಡೆ
ಬೆಂಗಳೂರು ಗ್ರಾಮಾಂತರ - ಡಿ.ಕೆ.ಸುರೇಶ್
ಬೆಂಗಳೂರು ಸೆಂಟ್ರಲ್ - ರಿಜ್ವಾನ್ ಹರ್ಷದ್, ಟಬೂ ಗುಂಡೂರಾವ್
ಬೆಂಗಳೂರು ಉತ್ತರ - ಕುಸುಮಾ ಹನುಮಂತರಾಯಪ್ಪ
ಬೆಂಗಳೂರು ದಕ್ಷಿಣ - ಸೌಮ್ಯ ರೆಡ್ಡಿ
ಉತ್ತರ ಕನ್ನಡ - ಅಂಜಲಿ ನಿಂಬಾಳ್ಕರ್
ಎಲೆಕ್ಷನ್ಗೆ ಪ್ರತಿಭಾ ಶರತ್ ನಿಲ್ಲಲ್ಲ- ಬಚ್ಚೇಗೌಡ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸೊಸೆ ಪ್ರತಿಭಾ ಶರತ್ ನಿಲ್ಲಲ್ಲ ಅಂತ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಸ್ಪಷ್ಟಪಡಿಸಿದ್ದಾರೆ. ನನ್ನ ಸೊಸೆ ಪ್ರತಿಭಾ ಶರತ್ ಗೌಡರನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಯಾಗಲು ಕೇಳಿದ್ದಾರೆ. ಈ ಬಗ್ಗೆ ನಮ್ಮ ಕುಟುಂಬದಲ್ಲಿ ಚರ್ಚೆ ಮಾಡಿಲ್ಲ ಅಂತ ಬಚ್ಚೇಗೌಡ ಹೇಳಿದ್ದಾರೆ. ನಾನು ಬಿಜೆಪಿ ಪಕ್ಷದಿಂದ ಚಿಕ್ಕಬಳ್ಳಾಪುರ ಸಂಸದನಾಗಿದ್ದೇನೆ, ಮಗ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷದಿಂದ ಹೊಸಕೋಟೆಯ ಶಾಸಕರಾಗಿದ್ದಾರೆ. ಮನೆಯಲ್ಲಿ ಎಲ್ಲರೂ ರಾಜಕೀಯಕ್ಕೆ ಬರೋದು ಬೇಡ ಅಂದಿದ್ದಾರೆ.
Post a Comment