ಕಾಂಗ್ರೆಸ್ ವರ್ಸಸ್ ಬಿಜೆಪಿ
Congress Vs BJP: ಫ್ಎಸ್ಎಲ್ ವರದಿಗೆ ಕಾಯುತ್ತಿದ್ದೇವೆ. ರಿಪೋರ್ಟ್ ಬಂದ ಕೂಡಲೇ ಮುಲಾಜಿಲ್ಲದೆ ಕ್ರಮ ಆಗುತ್ತೆ ಅಂತಾ ಹೋಂ ಮಿನಿಸ್ಟರ್ ಜಿ ಪರಮೇಶ್ವರ್ ಹೇಳಿದ್ದಾರೆ.ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ (Pakistan pro slogan) ವಿಚಾರವಾಗಿ ಕಾಂಗ್ರೆಸ್ – ಬಿಜೆಪಿ (Congress Vs BJP) ನಡುವೆ ನಡೆಯುತ್ತಿರುವ ಜಟಾಪಟಿಗೆ ಬ್ರೇಕ್ ಬೀಳುತ್ತಲೇ ಇಲ್ಲ. ಎಫ್ಎಸ್ಎಲ್ ರಿಪೋರ್ಟ್ (FSL Report) ಬಂದಿದ್ರೂ ಆರೋಪಿಯನ್ನ ಇದೂವರೆಗೂ ಅರೆಸ್ಟ್ ಮಾಡ್ತಿಲ್ಲ ಅಂತಾ ಕಮಲ ಪಡೆ (BJP Leaders) ವಾಗ್ದಾಳಿ ನಡೆಸ್ತಿದ್ರೆ, ಇನ್ನೂ ರಿಪೋರ್ಟ್ ಬಂದಿಲ್ಲ. ಬಿಜೆಪಿಯವರು (BJP) ಹೇಳ್ದಾಗೆ ಕೇಳೋಕೆ ಆಗಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (Minster G Parameshwar) ತಿರುಗೇಟು ನೀಡಿದ್ದಾರೆ.ಶತ್ರು ರಾಷ್ಟ್ರದ ಪರ ಘೋಷಣೆ ಕೂಗಿದವರನ್ನು ಇದುವರೆಗೂ ಅರೆಸ್ಟ್ ಮಾಡಿಲ್ಲ ಅಂತಾ ಬಿಜೆಪಿ ನಾಯಕರು ಕೆಂಡ ಕಾರುತ್ತಿದ್ದಾರೆ.ಐದು ದಿನ ಕಳೆದ್ರೂ ಘೋಷಣೆ ಕೂಗಿದ ವ್ಯಕ್ತಿಯನ್ನ ಅರೆಸ್ಟ್ ಯಾಕೆ ಮಾಡಿಲ್ಲ? ಎಫ್ಎಸ್ಎಲ್ ರಿಪೋರ್ಟ್ ಬಂದಿದ್ರೂ ಕಾಂಗ್ರೆಸ್ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಕಮಲ ಪಡೆ ವಾಗ್ದಾಳಿ ನಡೆಸ್ತಿದೆ.ಸಂಬಂಧಿತ ಸುದ್ದಿLoksabha Election BJP candidates: ದೆಹಲಿಯ ನಾಲ್ವರು ಸಂಸದರನ್ನು ಬಿಜೆಪಿ ಕೈಬಿಟ್ಟಿದ್ಯಾಕೆ?ನಮ್ಮನ್ನ ಸಿಎಂ ಬಳಿ ಕಳಿಸಿ, ನಮಗೆ ಗೃಹಲಕ್ಷ್ಮೀ ಹಣ ಬಂದಿಲ್ಲ; ಮಹಿಳೆಯರ ಆಕ್ರೋಶRameshwaram Cafe Case: ಬಾಂಬ್ ಬೆಂಗಳೂರು ಎಂದ ಅಶೋಕ್ಗೆ ಡಿಕೆಶಿ ಕೌಂಟರ್ಮೋದಿ ವಾರಣಾಸಿಯಿಂದ ಸ್ಪರ್ಧೆ! 3ನೇ ಬಾರಿ ಕಾಶಿ ಸಹೋದರ-ಸಹೋದರಿಯ ಸೇವೆಗೆ ಸಿದ್ಧನಿದ್ದೇನೆ ಎಂದ ಪಿಎಂರಾಜೀನಾಮೆಗೆ ಆರ್.ಅಶೋಕ್ ಆಗ್ರಹಜನ ಛೀ.. ಥೂ ಅಂತಿದ್ದಾರೆ. ಇಂಥ ಅನ್ ಪಾಪ್ಯುಲರ್ ಸರ್ಕಾರ ಯಾವತ್ತೂ ನೋಡಿಲ್ಲ. ಸಿಎಂ ಮಾತ್ರವಲ್ಲ ಇಡೀ ಸರ್ಕಾರ ರಾಜೀನಾಮೆ ಕೊಡಬೇಕು ಅಂತಾ ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ. ಪರಮೇಶ್ವರ್ ತಿರುಗೇಟುಇನ್ನು ಎಫ್ಎಸ್ಎಲ್ ವರದಿಗೆ ಕಾಯುತ್ತಿದ್ದೇವೆ. ರಿಪೋರ್ಟ್ ಬಂದ ಕೂಡಲೇ ಮುಲಾಜಿಲ್ಲದೆ ಕ್ರಮ ಆಗುತ್ತೆ ಅಂತಾ ಹೋಂ ಮಿನಿಸ್ಟರ್ ಜಿ ಪರಮೇಶ್ವರ್ ಹೇಳಿದ್ದಾರೆ. ನಾವು ವರದಿ ಮುಚ್ಚಟ್ಟಿಲ್ಲ. ಅಶೋಕ್ ಆರೋಪ ಮಾಡ್ತಾನೇ ಇರ್ತಾರೆ. ಅವರು ಹೇಳಿದ್ರು ಅಂತ ನಾವು ಹೇಳೋಕೆ ಆಗಲ್ಲ ಅಂತಾ ಕೌಂಟರ್ ಕೊಟ್ಟರು.ಒಟ್ಟಿನಲ್ಲಿ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿರುವ ವಿಚಾರವಾಗಿ ಕಾಂಗ್ರೆಸ್ - ಬಿಜೆಪಿ ನಾಯಕರು ವಾಕ್ಸಮರಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: Bengaluru: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ; ನ್ಯೂಸ್18ಗೆ ಸಿಕ್ಕಿದೆ ಶಂಕಿತನ ದೃಶ್ಯ ರಾಜ್ಯಪಾಲರಿಗೆ ದೂರುಪಾಕಿಸ್ತಾನದ ಪರ ಘೋಷಣೆ ವಿವಾದಕ್ಕೆ ಸಂಬಂಧಿಸಿದಂತೆ ಗವರ್ನರ್ (Karnataka Governor) ಕಚೇರಿಗೆ ತೆರಳಿ ದೋಸ್ತಿ ನಿಯೋಗ ದೂರು ನೀಡಿದೆ. ಸರ್ಕಾರವನ್ನ ವಜಾ ಮಾಡಬೇಕೆಂದು ವಿಪಕ್ಷ ನಾಯಕರು (Opposition Leaders) ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಸೈಯದ್ ನಾಸೀರ್ ಹುಸೇನ್ (Syed Nasir Hussain) ಹಾಗೂ ಬೆಂಬಲಿಗರ ವಿರುದ್ಧ ದೂರು ನೀಡಲಾಗಿದೆ.
Post a Comment