ಆರ್ ಅಶೋಕ್ ಮತ್ತು ಡಿಕೆ ಶಿವಕುಮಾರ್:
DK Shivakumar Vs R Ashok: ಇನ್ನು ಬ್ರ್ಯಾಂಡ್ ಬೆಂಗಳೂರು ಮಾಡುವ ಬದಲು ಬಾಂಬ್ ಬೆಂಗಳೂರು ಆಗ್ತಿದೆ ಎಂದ ಆರ್.ಅಶೋಕ್ ಹೇಳಿಕೆಗೆ ಡಿ.ಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ (Rameshwearam Cafe) ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬೆಂಗಳೂರಿನಲ್ಲಿ (Bengaluru) ಅಡಗಿ ಕುಳಿತಿರುವ ಭಯೋತ್ಪಾದಕರು ಜನಸಾಮಾನ್ಯರ ನಿದ್ದೆಗೆಡಿಸಿದ್ದಾರೆ. ಒಂದ್ಕಡೆ ಆರೋಪಿಯ ಪತ್ತೆಗೆ ಎನ್ಐಎ, ಎಸ್ಎಸ್ಜಿ, ಸಿಸಿಬಿ ತೀವ್ರ ಶೋಧ ನಡೆಸ್ತಿದ್ರೆ, ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ರಾಜಕೀಯ ವಾಕ್ಸಮರ ನಡೆಸುತ್ತಿದ್ದಾರೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ ಇಡೀ ಬೆಂಗಳೂರನ್ನ ಬೆಚ್ಚಿಬೀಳಿಸ್ತಿದೆ. ಎಲ್ಲಿ ಯಾವಾಗ ಏನ್ ಬ್ಲಾಸ್ಟ್ ಆಗುತ್ತೋ ಅಂತಾ ಸಿಲಿಕಾನ್ ಸಿಟಿ ಮಂದಿ ಭಯದಲ್ಲೇ ಓಡಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ನವರ ಕುಚೋದ್ಯಗಳಿಂದಲೇ ಇಂಥ ಬಾಂಬ್ ಬ್ಲಾಸ್ಟ್ ಘಟನೆಗಳು ನಡೆಯುತ್ತಿವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಬಾಂಬ್ ಹಾಕಿದ್ದಾರೆ.ಸಂಬಂಧಿತ ಸುದ್ದಿನಮ್ಮನ್ನ ಸಿಎಂ ಬಳಿ ಕಳಿಸಿ, ನಮಗೆ ಗೃಹಲಕ್ಷ್ಮೀ ಹಣ ಬಂದಿಲ್ಲ; ಮಹಿಳೆಯರ ಆಕ್ರೋಶFSL Report ಸಂಪೂರ್ಣವಾಗಿ ಬಂದಿಲ್ಲವಾ? ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳುಮಾರ್ಚ್ 10ರೊಳಗೆ ಕಾಂಗ್ರೆಸ್ ಮೊದಲ ಪಟ್ಟಿ? ರಾಜ್ಯ ‘ಕೈ’ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಇಂತಿದೆRameshwaram Cafe: ಶಿವರಾತ್ರಿಯಂದು ರಾಮೇಶ್ವರಂ ಕೆಫೆ ಪುನರಾರಂಭ; ಮಾಲೀಕ ರಾಘವೇಂದ್ರ ರಾವ್ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಆಗ್ರಹಅಲ್ಪಸಂಖ್ಯಾತರನ್ನ ಓಲೈಕೆ ಮಾಡ್ತಿದ್ದಾರೆ. ಏನ್ ಬೇಕಾದ್ರೂ ಮಾಡಿ, ನಾವ್ ಕೇಳಲ್ಲ. ವೋಟ್ ಮಾತ್ರ ಕೊಡಿ ಅನ್ನೋ ಕಾಂಗ್ರೆಸ್ನವರಿಗೆ ಇದೆ. ಹೀಗಾಗಿ ಇಲಿಗಳ ಬಿಲದಲ್ಲಿದ್ದ ಭಯೋತ್ಪಾದಕರೆಲ್ಲಾ ಬಾಂಬ್ ಇಟ್ಟು ಹುಲಿಗಳಂತೆ ಓಡಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಟ್ರ್ಯಾಕ್ ತಪ್ಪಿ ಆಚೆ ಹೋಗಿದೆ. ಗವರ್ನರ್ ಮಧ್ಯ ಪ್ರವೇಶ ಮಾಡಿ ಸರ್ಕಾರವನ್ನ ವಜಾ ಮಾಡಬೇಕು ಅಂತಾ ವಿಪಕ್ಚ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.ಡಿಕೆ ಶಿವಕುಮಾರ್ ತಿರುಗೇಟುಇನ್ನು ಬ್ರ್ಯಾಂಡ್ ಬೆಂಗಳೂರು ಮಾಡುವ ಬದಲು ಬಾಂಬ್ ಬೆಂಗಳೂರು ಆಗ್ತಿದೆ ಎಂದ ಆರ್.ಅಶೋಕ್ ಹೇಳಿಕೆಗೆ ಡಿ.ಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.ಬೆಂಗಳೂರು ಮಾನ, ಕರ್ನಾಟಕದ ಮಾನ ಕಳೆಯೋದಲ್ಲದೇ, ಅವರ ಮಾನವನ್ನ ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬೇಸಿಕ್ ಕಾಮನ್ ಸೆನ್ಸ್ ಇಲ್ಲದೇ ಇದ್ದವರು ಈ ಥರ ಮಾತಾಡ್ತಾರೆ. ಯಾವ ಸಮಯದಲ್ಲಿ ಏನು ಮಾತಾಡಬೇಕು ಅಂತಾ ಅವರಿಗೆ ಗೊತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಗರಂ ಆದರು.ಜಿ.ಪರಮೇಶ್ವರ್ ಸ್ಪಷ್ಟನೆಬಾಂಬ್ ಬ್ಲಾಸ್ಟ್ ಪ್ರಕರಣವನ್ನ ಸಿಲ್ಲಿ ಎಂದ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ ಅಸಮಧಾನ ಹೊರಹಾಕಿದ್ರು. ಅವರಿಗೆ ಹೆಚ್ಚು ಮಾಹಿತಿ ಇರೋದಿಲ್ಲ. ನೀವೆಲ್ಲಾ ಹೋಗಿ ಕೇಳಿದಾಗ ಹೇಳಿರ್ತಾರೆ. ಅವರ ಹೇಳಿಕೆ ಅಧಿಕೃತ ಅಂತ ಅನ್ನೀಸೋದಿಲ್ಲ ಎಂದರುನಾವು ಹೇಳಿದಾಗ ಅನೇಕ ಮಾಹಿತಿಯನ್ನ ಇಟ್ಟುಕೊಂಡು ಹೇಳಿರ್ತೇವೆ. ನಾನು, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಹೇಳಿದಾಗ ಜವಾಬ್ದಾರಿಯಿಂದ ಹೇಳಿರುತ್ತೇವೆ ಎಂದರು.ಶೀಘ್ರದಲ್ಲಿಯೇ ಬಂಧನಎಂಟು ತಂಡಗಳನ್ನ ರಚನೆ ಮಾಡಿ, ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗ್ತಿದೆ. ಎಐ ತಂತ್ರಜ್ಞಾನ ಬಳಸಿ ಶಂಕಿತನ ಶೋಧ ನಡೆಸಲಾಗ್ತಿದೆ. ಒಂದೆರಡು ದಿನದಲ್ಲಿ ಹಿಡಿಯುತ್ತೇವೆ ಅಂತಾ ಪರಮೇಶ್ವರ್ ಹೇಳಿದರು. ಇದನ್ನೂ ಓದಿ: FSL Report ಸಂಪೂರ್ಣವಾಗಿ ಬಂದಿಲ್ಲವಾ? ಸರ್ಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳುಒಟ್ನಲ್ಲಿ ಬಾಂಬ್ ಸ್ಪೋಟ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರವನ್ನ ತೀವ್ರ ಮುಜುಗರಕ್ಕೀಡು ಮಾಡ್ತಿದ್ದಾರೆ. ಕಾಂಗ್ರೆಸ್ ವಿರುದ್ದ ಮುಗಿಬೀಳಲು ಬಿಜೆಪಿ ನಾಯಕರಿಗೆ ರಾಜಕೀಯ ಅಸ್ತ್ರವಾಗಿಬಿಟ್ಟಿದೆ.
Post a Comment