ಚಂದ್ರಬಾಬು ನಾಯ್ಡು-ಪವನ್ ಕಲ್ಯಾಣ
ಬಿ.ಸಿ ಉಪ ಯೋಜನೆಯೊಂದಿಗೆ ಐದು ವರ್ಷಗಳಲ್ಲಿ ರೂ.1.5 ಲಕ್ಷ ಕೋಟಿ ಮಂಜೂರು ಮಾಡಲಾಗುವುದು ಮತ್ತು ಆ ಹಣವನ್ನು ಬಿ.ಸಿ.ಗಳ ಅಭಿವೃದ್ಧಿ ಯೋಜನೆಗೆ ಬಳಸಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಚಂದ್ರಬಾಬು ಭರವಸೆ ನೀಡಿದ್ದಾರೆ.ಆಂಧ್ರಪ್ರದೇಶ: ಮುಂಬರುವ ವಿಧಾನಸಭಾ ಚುನಾವಣೆಗೂ (Assembly Poll) ಮುನ್ನ ಟಿಡಿಪಿ-ಜನಸೇನಾ (TDP-Janasena) ಮೈತ್ರಿಕೂಟದ ಪಕ್ಷಗಳು ಆಂಧ್ರದ ಜನತೆಗೆ ಭರ್ಜರಿ ಭರವಸೆ ನೀಡಿವೆ. ಮಂಗಳಗಿರಿಯಲ್ಲಿ ನಡೆದ ಜಯಹೋ ಬಿ.ಸಿ. (ಹಿಂದುಳಿದ ವರ್ಗಗಳ) ಬಹಿರಂಗ ಸಭೆಯಲ್ಲಿ ಪವನ್ ಕಲ್ಯಾಣ್ ಮತ್ತು ಚಂದ್ರಬಾಬು ನಾಯ್ಡು (Chandra Babu Naidu) ಬಿ.ಸಿ. ಡಿಕ್ಷರೇಷನ್ ಘೋಷಿಸಿದರು. ಜನಸೇನಾ (Janasena) ಅಧ್ಯಕ್ಷ ಪವನ್ ಕಲ್ಯಾಣ್ (Pawan Kalyan) ಮತ್ತು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು 10 ಅಂಶಗಳೊಂದಿಗೆ ಘೋಷಣೆಯನ್ನು ಬಿಡುಗಡೆ ಮಾಡಿದರು. ಆಂಧ್ರ ಪ್ರದೇಶದಲ್ಲಿ ಟಿಡಿಪಿ-ಜನಸೇನಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಬಿ.ಸಿ. ಸಮುದಾಯದವರಿಗೆ 50 ವರ್ಷಕ್ಕೆ ಮಾಸಿಕ 4 ಸಾವಿರ ಪಿಂಚಣಿ ನೀಡಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಪ್ರಸ್ತುತ ಅಧಿಕಾರದಲ್ಲಿರುವ ವೈಸಿಪಿ ಸರ್ಕಾರವು ಬಿ.ಸಿ. ಸಮುದಾಯವನ್ನು ತುಚ್ಚವಾಗಿ ನೋಡುತ್ತಿದೆ. ಆದರೆ ತಮ್ಮ ಸರ್ಕಾರ ರಚನೆಯಾದ ನಂತರ ನಾಮನಿರ್ದೇಶಿತ ಹುದ್ದೆಗಳಲ್ಲಿ ಬಿ.ಸಿ.ಯವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.ಸಂಬಂಧಿತ ಸುದ್ದಿನಮಗೆ ಸೀಟ್ ಬಿಟ್ಟುಕೊಡದಿರಲು ಸೋನಿಯಾ ಗಾಂಧಿಗೆ ಹೇಳಿ: ಕಾಂಗ್ರೆಸ್ ಶಾಸಕರಿಗೆ ಮಾನ್ ಹೀಗೆ ಹೇಳಿದ್ದೇಕೆ?ಗುಜರಾತ್‌ಗೆ ರಾಹುಲ್ ಯಾತ್ರೆ ಪ್ರವೇಶಿಸುವ ಮೊದಲೇ ಕಾಂಗ್ರೆಸ್‌ಗೆ ಬಿಗ್‌ಶಾಕ್, 3 ಮಾಜಿ ಶಾಸಕರು ಬಿಜೆಪಿಗೆ!ಎಲೆಕ್ಷನ್ ಕಮಿಷನ್ನಿಂದ ಇಂದು ಪತ್ರಿಕಾಗೋಷ್ಠಿ, ಚುನಾವಣೆ ದಿನಾಂಕಅಗ್ನಿವೀರ್ ಯೋಜನೆ ರದ್ದು, ರೈಲ್ವೆ ಟಿಕೆಟ್ ದರ ಇಳಿಕೆ, ₹450ಕ್ಕೆ ಗ್ಯಾಸ್! ಹೀಗಿರಲಿದೆ 'ಕೈ' ಪ್ರಣಾಳಿಕೆ1.5 ಲಕ್ಷ ಕೋಟಿ ಮಂಜೂರುಬಿ.ಸಿ ಉಪ ಯೋಜನೆಯೊಂದಿಗೆ ಐದು ವರ್ಷಗಳಲ್ಲಿ ರೂ.1.5 ಲಕ್ಷ ಕೋಟಿ ಮಂಜೂರು ಮಾಡಲಾಗುವುದು ಮತ್ತು ಆ ಹಣವನ್ನು ಬಿ.ಸಿ.ಗಳ ಅಭಿವೃದ್ಧಿ ಯೋಜನೆಗೆ ಬಳಸಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಚಂದ್ರಬಾಬು ಭರವಸೆ ನೀಡಿದ್ದಾರೆ. ಈ ಬಹಿರಂಗ ಸಭೆಯ ವೇದಿಕೆಯಲ್ಲಿ ಮಾಜಿ ಸಚಿವ ಹಾಗೂ ವೈಸಿಪಿ ಶಾಸಕ ಗುಮ್ಮುನೂರಿ ಜಯರಾಮ್ ಟಿಡಿಪಿಗೆ ಸೇರ್ಪಡೆಯಾದರು. ಪಕ್ಷದ ಅಧ್ಯಕ್ಷ ಚಂದ್ರಬಾಬು ಅವರಿಗೆ ಸ್ಕಾರ್ಫ್ ತೊಡಿಸಿ ಪಕ್ಷಕ್ಕೆ ಆಹ್ವಾನಿಸಿದರು. ವೈಸಿಪಿಯಲ್ಲಿ ಸ್ವಾತಂತ್ರ್ಯವಿಲ್ಲ, ಟಿಡಿಪಿ ಸೇರುವುದು ಕಳೆದುಹೋದ ಮಗು ಮನೆಗೆ ಮರಳಿದಂತೆ ಎಂದು ಜಯರಾಮ್ ಹೇಳಿದರು.ಇದನ್ನೂ ಓದಿ: BJP South Strategy: ದಕ್ಷಿಣ ಭಾರತೀಯರ ಮತಗಳನ್ನು ಗೆಲ್ಲಲು ಮೋದಿ ಚಾಣಾಕ್ಷ ನಡೆ ಹೇಗಿದೆ ನೋಡಿಬಿ.ಸಿ ಡಿಕ್ಲರೇಷನ್ನಲ್ಲಿನ 10 ಅಂಶಗಳಿವು.1. 50 ವರ್ಷಕ್ಕೆ ಬಿಸಿ ವರ್ಗದವರಿಗೆ ಪಿಂಚಣಿ,2 ಪಿಂಚಣಿ ಮೊತ್ತವನ್ನು 4 ಸಾವಿರಕ್ಕೆ ಹೆಚ್ಚಿಸಲು ನಿರ್ಧಾರ3.ಬಿಸಿ ಸಮುದಾಯದವರ ರಕ್ಷಣೆಗಾಗಿ ವಿಶೇಷ ಕಾನೂನು4. ಸಾಮಾಜಿಕ ನ್ಯಾಯ ಪರಿಶೀಲನಾ ಸಮಿತಿಯ ಸ್ಥಾಪನೆ5. ಬಿ.ಸಿ . ಉಪ ಯೋಜನೆಯೊಂದಿಗೆ 5 ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ ಬಿಡುಗಡೆ, ಈ ಹಣವನ್ನು ಬಿಸಿ ಸಮುದಾಯದಕ್ಕೆ ಮಾತ್ರ ಬಳಸುವುದನ್ನ ಖಚಿತಪಡಿಸಿಕೊಳ್ಳಲು ಕ್ರಮಗಳು6. ಸ್ಥಳೀಯ ಸಂಸ್ಥೆಗಳಲ್ಲಿ ಶೇ.34 ಮೀಸಲಾತಿಗೆ ನಿರ್ಣಯ7. ಶಾಸನಸಭೆಗಳಲ್ಲಿ ಬಿಸಿ ಯವರಿಗೆ 33 ಪ್ರತಿಶತ ಮೀಸಲಾತಿಗೆ ನಿರ್ಣಯ8. ಎಲ್ಲಾ ಸಂಸ್ಥೆಗಳು ಮತ್ತು ನಾಮನಿರ್ದೇಶಿತ ಹುದ್ದೆಗಳಲ್ಲಿ ಬಿಸಿ ಗಳಿಗೆ 34% ಮೀಸಲಾತಿಕೆಲವು BC ಸಮುದಾಯಗಳಿಗೆ ಸಹಕಾರಿ ಸದಸ್ಯರಾಗುವ ಅವಕಾಶ9. ಜನಸಂಖ್ಯೆಯ ಪ್ರಸ್ತಾಪದ ಮೇಲೆ ನಿಗಮಗಳ ಸ್ಥಾಪನೆ, ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಹಣ ಹಂಚಿಕೆ10. ಬಿ.ಸಿ.ಗಳ ಸ್ವಯಂ ಉದ್ಯೋಗಕ್ಕೆ 10 ಸಾವಿರ ಕೋಟಿ ರೂ, ಬೆಂಬಲ ಸಲಕರಣೆಗಳಿಗಾಗಿ 5 ಸಾವಿರ ಕೋಟಿ
Post a Comment