Mandya Lok Sabha Election: ನಾನು ಯಾವ ಅನ್ಯಾಯ ಮಾಡಿದ್ದೆ ಕುಮಾರಸ್ವಾಮಿ? ಎಂದು ಪ್ರಶ್ನಿಸಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ವಿಷ ಹಾಕಿದ್ದೆ ಅನ್ನುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕಿದೆ ಅಂತಾರೆ. ಅಮೃತ ಕೊಟ್ಟವನಿಗೆ ವಿಷ ಹಾಕ್ತೀರಾ? ಸಂಸದೆ ಸುಮಲತಾ ವೈರಿ ಅಲ್ಲ ಅನ್ನುವುದಾದರೆ ಮಳೆ ಬಿಸಿಲಿನಲ್ಲಿ ಸರ್ಕಾರ ಉಳಿಸಲು ಹೋರಾಟ ಮಾಡಿದ ನಾನು ಯಾರು? ಎಂದು ಎಚ್‌ಡಿಕೆಗೆ ಖಾರವಾಗಿ ಪ್ರಶ್ನಿಸಿದರು.ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ (Mandya Lok Sabha Election) ಈ ಬಾರಿ ಗೆಲುವು ಸಾಧಿಸಲೇ ಬೇಕೆಂದು ಹೊರಟಿರುವ ಬಿಜೆಪಿ-ಜೆಡಿಎಸ್ ಮೈತ್ರಿ (BJP JDS Alliance) ಅಭ್ಯರ್ಥಿ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, (HD Kumaraswamy) ಗೆಲುವಿಗಾಗಿ ತನ್ನ ರಾಜಕೀಯ ಬದ್ಧ ವೈರಿ ಸಂಸದೆ ಸುಮಲತಾ ಜೊತೆಗೂ ಕೈಜೋಡಿಸಲು ಮುಂದಾಗಿದ್ದಾರೆ.ಮಂಡ್ಯ ಹಾಲಿ ಸಂಸದೆ ಸುಮಲತಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ಎಚ್‌ಡಿ ಕುಮಾರಸ್ವಾಮಿ ನಡೆಗೆ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಈ ಸಂಬಂಧ ಸುದ್ದಿಗಾರರ ಜೊತೆಗೆ ಮಾತನಾಡಿರುವ ಡಿಕೆ ಶಿವಕುಮಾರ್, ಅವತ್ತು ಎಚ್‌ಡಿ ಕುಮಾರಸ್ವಾಮಿ, ಸುಮಲತಾ ಮನೆಗೆ ಹೋಗಬೇಡ ಅಂದ್ರು. ಇವತ್ತು ಸುಮಲತಾ ಮನೆಗೆ ಅವರೇ ಹೋಗುತ್ತಿದ್ದಾರೆ. ಮೈತ್ರಿ ಸರ್ಕಾರ ತೆಗೆದವರ ಜೊತೆಗೆ ತಬ್ಬಿ ಆಡುತ್ತಿದ್ದಾರೆ ಎಂದು ಕಿಡಿಕಾರಿದರುಸಂಬಂಧಿತ ಸುದ್ದಿSumalatha Ambareesh: ನಿರ್ಧಾರ ಪ್ರಕಟಕ್ಕೂ ಮುನ್ನವೇ ಸುಮಲತಾಗೆ ಬಿಗ್ ಶಾಕ್ಪಾಪ ಅವರಿಗೆ ವಯಸ್ಸಾಗಿದೆ’; ಮಹಿಳೆ ಅಡುಗೆ ಮನೆಗೆ ಲಾಯಕ್ಕು ಎಂಬ ಶಾಮನೂರು ಹೇಳಿಕೆಗೆ ಡಿಕೆಶಿ ಖಂಡನೆಅಪ್ಪ-ಮಗಳು ದೂರ ಆಗ್ಬಾರ್ದು ಅಂತ ಸುಮ್ನಿದ್ದೇನೆ, ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ತಡೆಯೋಗೇಶ್ವರ್ ಪುತ್ರಿ ಕಾಂಗ್ರೆಸ್ ಸೇರೋದಕ್ಕೆ ಮುಹೂರ್ತ! 'ಸೈನಿಕ'ನ ವಿರುದ್ಧ ಡಿಕೆ ಬ್ರದರ್ಸ್ ಬಿಗ್ ಪ್ಲಾನ್!ಇದನ್ನೂ ಓದಿ: Lok Sabha Election: ಚಿತ್ರದುರ್ಗದಲ್ಲಿ ಬಿಜೆಪಿಗೆ ಆತಂಕ ತಂದ ಬಂಡಾಯ! ಕಾಂಗ್ರೆಸ್ ಶಾಸಕರ ಜೊತೆ MLA ಚಂದ್ರಪ್ಪ ಗೌಪ್ಯ ಮೀಟಿಂಗ್?ನಾನು ಯಾವ ಅನ್ಯಾಯ ಮಾಡಿದ್ದೆ ಕುಮಾರಸ್ವಾಮಿ? ಎಂದು ಪ್ರಶ್ನಿಸಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ವಿಷ ಹಾಕಿದ್ದೆ ಅನ್ನುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕಿದೆ ಅಂತಾರೆ. ಅಮೃತ ಕೊಟ್ಟವನಿಗೆ ವಿಷ ಹಾಕ್ತೀರಾ? ಸಂಸದೆ ಸುಮಲತಾ ವೈರಿ ಅಲ್ಲ ಅನ್ನುವುದಾದರೆ ಮಳೆ ಬಿಸಿಲಿನಲ್ಲಿ ಸರ್ಕಾರ ಉಳಿಸಲು ಹೋರಾಟ ಮಾಡಿದ ನಾನು ಯಾರು? ಎಂದು ಎಚ್‌ಡಿಕೆಗೆ ಖಾರವಾಗಿ ಪ್ರಶ್ನಿಸಿದರು.ಇನ್ನು, ಸಿಪಿ ಯೋಗೇಶ್ವರ್ ಮಗಳು ನಿಶಾ ಯೋಗೇಶ್ವರ್ ಕಾಂಗ್ರೆಸ್‌ಗೆ ಸೇರಲು ಮುಂದಾಗಿರುವ ಬಗ್ಗೆಯೂ ಮಾತನಾಡಿದ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರುತ್ತೀನಿ ಅಂತ ನನ್ನನ್ನು ಮತ್ತು ಡಿಕೆ ಸುರೇಶ್‌ರನ್ನು ಭೇಟಿ ಆಗಿದ್ಳು. ಪಾಪ ಧೈರ್ಯವಂತ ಹೆಣ್ಣು ಮಗಳು ಏನೋ ಧೈರ್ಯ ಮಾಡಿದ್ದಾಳೆ. ಆದರೆ ಅಪ್ಪ ಮಗಳನ್ನು ದೂರ ಮಾಡಬಾರದು ಅಂತ ನಾನು ಸುಮ್ಮನೆ ಇದ್ದೇನೆ. ನಾಳೆ ಜನ ನನ್ನನ್ನು ಪ್ರಶ್ನೆ ಮಾಡ್ತಾರೆ, ಅಪ್ಪ ಮಗಳನ್ನು ಯಾಕೆ ದೂರ ಮಾಡಿದೆ ಅಂತ. ಅದಕ್ಕಾಗಿ ನಾನು ಸುಮ್ಮನೆ ಇದ್ದೇನೆ ಎಂದು ಹೇಳಿದರು.ನಿಶಾ ಯೋಗೇಶ್ವರ್ ಹಾಗೂ ಅವರ ತಾಯಿ ಇಬ್ಬರೂ ನನಗೆ ಗೊತ್ತು ಎಂದ ಡಿಕೆ ಶಿವಕುಮಾರ್, ಆದರೆ ಅವರ ಕುಟುಂಬದಲ್ಲಿ ಏನೇನಿದೆಯೋ, ಯೋಗೇಶ್ವರ್ ಈಗಿನ ಸಂಸಾರದ ಬಗ್ಗೆ ಗೊತ್ತಿಲ್ಲ ನನಗೆ. ಆದರೆ ನಾಳೆ ಅಪ್ಪ ಮಗಳು ಸರಿ ಹೋಗಬಹುದು. ಹೀಗಾಗಿ ನಾನು ಅಪ್ಪ ಮಗಳನ್ನು ದೂರ ಮಾಡಬಾರದು. ನಾಳೆ ಆ ಹೆಣ್ಣು ಮಗಳಿಗೆ ಮದುವೆ ಮಾಡಬೇಕಿದೆ, ಅಕ್ಷತೆ ಕಾಳು ಹಾಕಬೇಕು, ಹಾಲು ಎರೆಯಬೇಕು. ಮದುವೆ ಆಗಿ ಅವರದೇ ಕುಟುಂಬ ಇದ್ದಿದ್ದರೆ ವಿಚಾರ ಬೇರೆಯಾಗುತ್ತಿತ್ತು ಎಂದು ಡಿಕೆ ಶಿವಕುಮಾರ್ ಹೇಳಿದರು.ಇನ್ನು, ರಾಜರಾಜೇಶ್ವರಿಗೆ ಹೋಗಿ ಒಂದು ಕೈ ಮುಗಿಯಬೇಕು ಎಂದ ಡಿಕೆ ಶಿವಕುಮಾರ್, ಬಹಳ ಕಡಿಮೆ ಅಂತರದಲ್ಲಿ ನಮ್ಮ ಅಭ್ಯರ್ಥಿ ಸೋತ್ರು. ಡಿ ಕೆ ಸುರೇಶ್ ಮಾಡಿದ ಕೆಲಸ, ಮಾನವೀಯತೆ ಜನರಿಗೆ ಈಗ ಅರ್ಥ ಆಗಿದೆ. ನಮ್ಮ ತಮ್ಮ ಅನ್ನುವುದು ಪಕ್ಕಕ್ಕೆ ಇಡಿ, ಕರೋನ ಸಂದರ್ಭದಲ್ಲಿ ಯಾರು ಆಚೆಗೆ ಬರಲಿಲ್ಲ. ಕುಮಾರಸ್ವಾಮಿ ಮನೆಯಿಂದ ಹೊರಗೆ ಬರಲಿಲ್ಲ. ಡಿಕೆ ಸುರೇಶ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ರು. ತರಕಾರಿಗೆ ಬೆಲೆ ಸಿಗಬೇಕು ಅಂತ ಹೋರಾಡಿದ್ರು, ಮನೆ ಮನೆಗೆ ಹೋಗಿ ಸುರೇಶ್ ಕೆಲಸ ಮಾಡಿದ್ರು ಎಂದರು.ಇದನ್ನೂ ಓದಿ: Congress Star Campaigner: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ, ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ ಗೊತ್ತಾ?ಇನ್ನು, ಬಿಜೆಪಿ ಗೊಂದಲದ ಗೂಡಾಗಿದೆ ಎಂದ ಡಿಸಿಎಂ ಡಿಕೆ ಶಿವಕುಮಾರ್, ನಳಿನ್ ಕುಮಾರ್ ಕಟೀಲ್ ಅಧ್ಯಕ್ಷ ಆಗಿದ್ರು, ಏನ್ ಕೆಲಸ ಮಾಡಿದ್ರು? ಕೆಲಸ ಮಾಡದವರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ, ಏಕಾಏಕಿ ಡ್ರಾಪ್ ಮಾಡಿ ವೀಕ್ ಸ್ಟ್ಯಾಟರ್ಜಿ ಬಿಜೆಪಿ ಮಾಡಿದೆ. ನಾವು ಯುವಕರಿಗೆ ಮಣೆ ಹಾಕಿದ್ದೇವೆ. ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಲು ಮುಂದಾಗಿದೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಒಂದು ಮಾಡಲು ರೋಡ್ ಶೋ ಮಾಡುತ್ತಿದ್ದಾರೆ. ದಿನಂಪ್ರತಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಕಿತ್ತಾಡುತ್ತಿದ್ದಾರೆ. ಕಾರ್ಯಕರ್ತರು ಒಂದಾಗಿ ಸಭೆ ಯಾಕೆ ಮಾಡಲಿಲ್ಲ? ಇವರಿಬ್ಬರ ಮೈತ್ರಿ ನೋಡಿ ನಾಚಿಕೆಯಾಗುತ್ತಿದೆ ಎಂನ್ನು ಕೋಲಾರ ಕಾಂಗ್ರೆಸ್ ನಾಯಕರಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಉಂಟಾಗಿರುವ ಅಸಮಾಧಾನದ ಬಗ್ಗೆಯೂ ಮಾತನಾಡಿದ ಡಿಕೆ ಶಿವಕುಮಾರ್, ಕೋಲಾರ ನಾಯಕರ ಅಸಮಾಧಾನ ಒಂದೇ ದಿನಕ್ಕೆ ಎಲ್ಲವೂ ಠುಸ್ ಆಗಿದೆ. ಎಲ್ಲರೂ ವಿಜಯ ಪತಾಕೆ ಹಿಡಿದು ಹೊರಟ್ಟಿದ್ದಾರೆ. ಗೆಲ್ಲಿಸಿಕೊಂಡು ಬರ್ತವೆ ಎಂದು ಸಂಕಲ್ಪ ಮಾಡಿದ್ದಾರೆ. ಮುನಿಯಪ್ಪ, ರಮೇಶ್ ಕುಮಾರ್ ಮತ್ತು ಎಲ್ಲಾ ಶಾಸಕರು ಸಂಕಲ್ಪ ಮಾಡಿದ್ದಾರೆ. ನೋಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರ್ತಾರೆ. ಒಳಶಕ್ತಿ ಅಲ್ಲ, ಹೊರಗಡೆ ಶಕ್ತಿ ನೋಡಬೇಕು. ನಾವು ಕೊಟ್ಟ ಅಭ್ಯರ್ಥಿಗಳು, ನಮ್ಮ ಒಗ್ಗಟು, ಕಾರ್ಯಕ್ರಮಗಳನ್ನು ನೋಡಿ ಎಂದು ಹೇಳಿದರು.

Post a Comment