ಕಾಂಗ್ರೆಸ್ ಹೈಕಮಾಂಡ್ ಸಂದೇಶ (ಸಾಂದರ್ಭಿಕ ಚಿತ್ರ)
Congress High Command: ಒಂದು ವೇಳೆ ಗೌತಮ್ ಸೋತರೆ ಇಬ್ಬರನ್ನು ಸಂಪುಟದಿಂದ ಕೊಕ್ ಕೊಡುವ ಎಚ್ಚರಿಕೆ ಕೊಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು: ಕೋಲಾರಕ್ಕೆ ಅಭ್ಯರ್ಥಿ ಘೋಷಣೆ ಬಳಿಕ ಕಾಂಗ್ರೆಸ್ ಹೈಕಮಾಂಡ್ (Congress High Command) ಇಬ್ಬರು ಸಚಿವರಿಗೆ ಖಡಕ್ ಸಂದೇಶವನ್ನು ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೋಲಾರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆವಿ ಗೌತಮ್ (Congress Candidate KV Gowtham) ಸೋತರೆ ನಿಮ್ಮಿಬ್ಬರ ತಲೆದಂಡ ಫಿಕ್ಸ್ ಎಂಬ ಎಚ್ಚರಿಕೆಯನ್ನು ಇಬ್ಬರು ಸಚಿವರಿಗೆ ರವಾನಿಸಲಾಗಿದೆ ಎನ್ನಲಾಗಿದೆ. ಕೋಲಾರ ಭಾಗದ ಸಚಿವರಾದ ಕೆಹೆಚ್ ಮುನಿಯಪ್ಪ (KH Muniyappa) ಮತ್ತು ಡಾ. ಎಂಸಿ ಸುಧಾಕರ್ (Dr MC Sudhakar) ಅವರಿಗೆ ವಾರ್ನಿಂಗ್ ನೀಡಲಾಗಿದ್ದು, ಇಬ್ಬರು ಜೊತೆಯಾಗಿ ನಿಂತು ಅಭ್ಯರ್ಥಿ ಪರವಾಘಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.ಅಭ್ಯರ್ಥಿಗೆ ಯಾರೂ ಕೂಡ ಒಳೇಟು ನೀಡೋ ಪ್ರಯತ್ನ ಮಾಡಬಾರದು. ಒಂದು ವೇಳೆ ಗೌತಮ್ ಸೋತರೆ ಇಬ್ಬರನ್ನು ಸಂಪುಟದಿಂದ ಕೊಕ್ ಕೊಡುವ ಎಚ್ಚರಿಕೆ ಕೊಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಸಂಬಂಧಿತ ಸುದ್ದಿನನ್ನದು ಕನ್ನಡಿಗರ ರಕ್ತದ ಕಣಕಣದಲ್ಲಿರುವ ಸ್ವಾಭಿಮಾನ; HDD ಗರ್ವಭಂಗ ಹೇಳಿಕೆಗೆ ಸಿಎಂ ತಿರುಗೇಟುKolar Politics: ಇಬ್ಬರ ಕಿತ್ತಾಟದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದ ಕೆವಿ ಗೌತಮ್ ಯಾರು?ಮಾಜಿ ಕ್ರಿಕೆಟಿಗ, ಟಿಎಂಸಿ ಅಭ್ಯರ್ಥಿ ಯೂಸುಫ್ ಪಠಾಣ್ಗೆ ಚುನಾವಣಾ ಆಯೋಗ ಖಡಕ್ ವಾರ್ನಿಂಗ್Sumalatha Ambareesh: ಮಂಡ್ಯಕ್ಕೆ ಬರ್ತೀನಿ, ನೋಯಿಸುವ ನಿರ್ಧಾರ ಪ್ರಕಟ ಮಾಡಲ್ಲ ಎಂದ ಸುಮಲತಾಪಕ್ಷವೇ ನನ್ನನ್ನು ಗುರುತಿಸಿ ಟಿಕೆಟ್ ನೀಡಿದೆಕೋಲಾರ ಕ್ಷೇತ್ರಕ್ಕೆ ಚಿಕ್ಕಪೆದ್ದಣ್ಣ ಟಿಕೆಟ್ ಬೇಡ ಎಂದಿದ್ದಕ್ಕೆ ನಮಗೆ ಸಿಕ್ಕಿದ್ದಲ್ಲ .ಪಕ್ಷವೇ ನನ್ನನ್ನು ಗುರುತಿಸಿ ಅವಕಾಶ ನೀಡಿದೆ. ಕ್ಷೇತ್ರ ಹೊಸದಲ್ಲ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗಿನಿಂದಲೂ ಕ್ಷೇತ್ರದಲ್ಲಿ ಸಂಘಟನೆಯಲ್ಲಿ ತೊಡಗಿದ್ದೇನೆ. ಪಕ್ಷದ ಅಭ್ಯರ್ಥಿಯಾಗಿದ್ದೇನೆ. ಎಲ್ಲರನ್ನು ಒಟ್ಟಾಗಿ ಕರೆದೊಯ್ಯುತ್ತೇನೆ. ಎಲ್ಲರ ಜತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ತೇನೆ ಎಂದು ಅಭ್ಯರ್ಥಿ ಕೆವಿ ಗೌತಮ್ ಹೇಳಿದ್ದಾರೆ.ಹಿರಿಯರು, ಕಿರಿಯರು, ಎಲ್ಲರ ಜತೆ ಚೆರ್ಚೆ ನಡೆಸುತ್ತೇನೆ. ನಾನು ಪಕ್ಷದ ಅಭ್ಯರ್ಥಿ. ಯಾವುದೋ ಬಣದ ಅಭ್ಯರ್ಥಿ ಅಲ್ಲ. ನನಗೆ ಮುನಿಯಪ್ಪ ಬಣ, ರಮೇಶ್ ಕುಮಾರ್ ಬಣ, ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಎಲ್ಲರದ್ದೂ ಬೆಂಬಲ ವಿಶ್ವಾಸದಿಂದ ಕೆಲಸ ಮಾಡುತ್ತೇನೆ. ಕೋಲಾರ ಕ್ಷೇತ್ರ ಬಗ್ಗೆ ಹಲವು ಕನಸುಗಳಿವೆ ಅದನ್ನೆಲ್ಲಾ ಸಾಧ್ಯವಷ್ಟು ಪೂರೈಸುವ ಕೆಲಸ ಮಾಡ್ತೇನೆ ಎಂದ ತಿಳಿಸಿದರು.ಕೆಹೆಚ್ ಮುನಿಯಪ್ಪ ಹೇಳಿದ್ದೇನು?ಗೌತಮ್ ಗೆ ಟಿಕೆಟ್ ಘೋಷಣೆ ಸ್ವಾಗತ ಮಾಡುತ್ತೇನೆ. ನಾನು ಕೇಳಿದ್ದೆ ಆದರೆ ಎಲ್ಲಾ ಶಾಸಕರು ಒಗ್ಗಟ್ಟಾಗಿ ಬರೋದಿಕ್ಕೆ ಆಗಲಿಲ್ಲ. ನಾವೆಲ್ಲ ಒಗ್ಗಟ್ಟಾಗಿ ಬರದ ಕಾರಣ ಬೇರೆಯವರಿಗೆ ಅನಿವಾರ್ಯವಾಗಿ ಟಿಕೆಟ್ ಕೊಟ್ಟಿದ್ದಾರೆ. ಗೌತಮ್ಗೆ ರಾಜಕೀಯ ಹಿನ್ನಲೆ ಹೊಂದಿದ್ದು, ಅವರ ತಂದೆ ಮೇಯರ್ ಆಗಿದ್ದವರು. ಕಾಂಗ್ರೆಸ್ ಗೆಲುವಿಗೆ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಸಚಿವ ಕೆಹೆಚ್ ಮುನಿಯಪ್ಪ ಹೇಳಿದ್ದಾರೆ. 7 ಬಾರಿ ಎಂಪಿ, 10 ವರ್ಷ ಕೇಂದ್ರದ ಮಂತ್ರಿ, ಸಿಡಬ್ಲ್ಯೂಸಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಲೋಕಸಭೆ ಸೋತ ಬಳಿಕ ಶಾಸಕನಾಗಿ ಮಾಡಿ ಮಂತ್ರಿ ಮಾಡಿದ್ದಾರೆ. ಇನ್ನೇನು ಮಾಡಬೇಕು ನನಗೆ? ಯಾವಾಗಲೇ ಪ್ರಚಾರ ಆರಂಭ ಮಾಡಿದ್ರು ಕೆಲಸ ಮಾಡುತ್ತೇನೆ ಎಂದು ಮುನಿಯಪ್ಪ ಹೇಳಿದರು.ಯಾರು ಈ ಕೆವಿ ಗೌತಮ್?48 ವರ್ಷದ ಗೌತಮ್ ತಂದೆ ವಿಜಯಕುಮಾರ್ ಬೆಂಗಳೂರಿನ ಮೇಯರ್ ಆಗಿದ್ದವರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ (Mallikarjun Kharge) ಬೆಂಬಲಿಗರಾಗಿರುವ ವಿಜಯಕುಮಾರ್ ಭಾರತಿನಗರ ವಿಧಾನಸಭೆ ಕ್ಷೇತ್ರದಿಂದ ಒಮ್ಮೆ ಸ್ಪರ್ಧಿಸಿ ಸೋತಿದ್ದರು. ಇದನ್ನೂ ಓದಿ: Sumalatha Ambareesh: ಮಂಡ್ಯಕ್ಕೆ ಬರ್ತೀನಿ, ನೋಯಿಸುವ ನಿರ್ಧಾರ ಪ್ರಕಟ ಮಾಡಲ್ಲ ಎಂದ ಸುಮಲತಾ ಅಂಬರೀಶ್ಪರಿಶಿಷ್ಟ ಎಡಗೈಗೆ ಸೇರಿರುವ ಗೌತಮ್, ಎನ್ಎಸ್ಯುಐ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇದರ ಜೊತೆಗೆ ಸದ್ಯ ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
Post a Comment