ಡಾ.ಕೆ ಸುಧಾಕರ್
ಇನ್ನೂ ಎರಡು ಮೂರು ಬಾರಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನ ಕನ್ವಿನ್ಸ್ ಮಾಡುವ ಪ್ರಯತ್ನ ಮಾಡ್ತೀನಿ ಎಂದಿರುವ ಡಾ ಕೆ ಸುಧಾಕರ್, ಇದೊಂದೇ ಚುನಾವಣೆ ಕೊನೆಯಲ್ಲ, ಮುಂದೆಯೂ ನಾವು ಜೊತೆಯಾಗಿ ಸಾಗಬೇಕಾಗುತ್ತೆ ಎಂದರುಯಲಹಂಕ: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯೊಳಗಿನ (BJP) ಬಂಡಾಯ ದಿನೇ ದಿನೇ ಹೆಚ್ಚುತ್ತಿದ್ದು, ರಾಜ್ಯ ಬಿಜೆಪಿ ಮತ್ತು ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಚಿತ್ರದುರ್ಗ, ಶಿವಮೊಗ್ಗ ಬಿಜೆಪಿಯಲ್ಲಿನ ಬಂಡಾಯದ ನಂತರ ಇದೀಗ ಚಿಕ್ಕಬಳ್ಳಾಪುರದಲ್ಲೂ ಕೂಡ ಅಸಮಾಧಾನ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ.ಈ ಸಂಬಂಧ ಸಿಂಗನಾಯಕನಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್, ಕ್ಷೇತ್ರದ 7 ಕಡೆ ಪ್ರಚಾರ ಆರಂಭವಾಗಿದೆ. ಆದ್ರೆ ಯಲಹಂಕದಲ್ಲಿ ಇನ್ನೂ ಪ್ರಚಾರ ಆರಂಭ ಮಾಡಲು ಆಗಿಲ್ಲ. ಎಲ್ಲರಿಗೂ ಗೊತ್ತಿರುವಂತೆ ಶಾಸಕ ಎಸ್ ಆರ್ ವಿಶ್ವನಾಥ್ ಅವರಿಗೆ ಮೊದಲಿನಿಂದಲೂ ಬೇಸರವಿದೆ. ಹಲವು ಬಾರಿ ವಿಶ್ವನಾಥ್ ಅವರಿಗೆ ಕರೆ ಮಾಡಿ ಮೆಸೇಜ್ ಸಹ ಮಾಡಿದ್ದೆ. ಆದ್ರೆ ಅವರು ಯಾವುದಕ್ಕೂ ಉತ್ತರ ಕೊಡಲಿಲ್ಲ. ಹೀಗಾಗಿ ನಾನೇ ಖುದ್ದು ಇಂದು ಅವರ ಮನೆಗೆ ಭೇಟಿ ಮಾಡಲು ಬಂದಿದ್ದೇನೆ. ಆದ್ರೆ ಅವರು ಮನೆಯಲಿಲ್ಲ ಅಂತ ವಾಚ್ ಮ್ಯಾನ್ ಹೇಳ್ತಿದ್ದಾರೆ ಎಂದರು.ಸಂಬಂಧಿತ ಸುದ್ದಿ
Sumalatha Ambareesh: ನಿರ್ಧಾರ ಪ್ರಕಟಕ್ಕೂ ಮುನ್ನವೇ ಸುಮಲತಾಗೆ ಬಿಗ್ ಶಾಕ್
‘ಪಾಪ ಅವರಿಗೆ ವಯಸ್ಸಾಗಿದೆ’; ಮಹಿಳೆ ಅಡುಗೆ ಮನೆಗೆ ಲಾಯಕ್ಕು ಎಂಬ ಶಾಮನೂರು ಹೇಳಿಕೆಗೆ ಡಿಕೆಶಿ ಖಂಡನೆ
ಅಪ್ಪ-ಮಗಳು ದೂರ ಆಗ್ಬಾರ್ದು ಅಂತ ಸುಮ್ನಿದ್ದೇನೆ, ನಿಶಾ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ತಡೆ
ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ, ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ?
ಇದನ್ನೂ ಓದಿ: Lok Sabha Election: ಚಿತ್ರದುರ್ಗದಲ್ಲಿ ಬಿಜೆಪಿಗೆ ಆತಂಕ ತಂದ ಬಂಡಾಯ! ಕಾಂಗ್ರೆಸ್ ಶಾಸಕರ ಜೊತೆ MLA ಚಂದ್ರಪ್ಪ ಗೌಪ್ಯ ಮೀಟಿಂಗ್?
ಇನ್ನೂ ಎರಡು ಮೂರು ಬಾರಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನ ಕನ್ವಿನ್ಸ್ ಮಾಡುವ ಪ್ರಯತ್ನ ಮಾಡ್ತೀನಿ ಎಂದ ಡಾ ಕೆ ಸುಧಾಕರ್, ಇದೊಂದೇ ಚುನಾವಣೆ ಕೊನೆಯಲ್ಲ, ಮುಂದೆಯೂ ನಾವು ಜೊತೆಯಾಗಿ ಸಾಗಬೇಕಾಗುತ್ತೆ. ಶಾಸಕ ಎಸ್ ಆರ್ ವಿಶ್ವನಾಥ್ ಜೊತೆ ಮಾತನಾಡುವುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಭರವಸೆ ಕೊಟ್ಟಿದ್ದಾರೆ. ಅಮಿತ್ ಶಾ ಅವರು ಬಂದಾಗ ಅವರ ಹಂತದಲ್ಲಿ ಬಗೆಹರಿಯುವ ಭರವಸೆ ಇದೆ ಎಂದು ಹೇಳಿದರರಾಜಕಾರಣದಲ್ಲಿ ಎಲ್ಲವೂ ಸರಾಗವಾಗಿ ಇದ್ದರೆ ಅದು ರಾಜಕಾರಣ ಅನ್ನಿಸಿಕೊಳ್ಳಲ್ಲ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ ಸುಧಾಕರ್, ಅಲ್ಲಿ ಮುಳ್ಳಿನ ಹಾದಿ ಇರುತ್ತೆ, ಕೆಂಪು ಗುಲಾಬಿ ಹಾದಿ ಇರಲ್ಲ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡ್ತೀವಿ. ಅವರಿಗೂ ನಮಗೂ ಯಾವುದೇ ವೈಯುಕ್ತಿಕ ಭಿನ್ನಾಬಿಪ್ರಾಯಗಳಿಲ್ಲ ಎಂದು ಹೇಳಿದರು.ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಇನ್ನೂ ಶಮನವಾಗಿಲ್ಲ. ಈ ಹಿನ್ನೆಲೆ ಭಿನ್ನಮತ ಶಮನಕ್ಕೆ ಮುಂದಾಗಿರುವ ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ಗೆ ಮತ್ತೆ ನಿರಾಸೆಯಾಗಿದ್ದು, ಅಸಮಾಧಾನಗೊಂಡಿರುವ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಮನೆಗೆ ಬಂದ್ರು ಸಹ ಡೋರ್ ತೆಗೆಯದೆ ವಾಪಸ್ ಕಳುಹಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಮನೆಗೆ ಬಂದರೂ ಮನೆಯಲ್ಲಿ ಶಾಸಕರಿಲ್ಲ ಅಂತ ಗೇಟ್‌ನಿಂದಲೇ ಸಿಬ್ಬಂದಿ ವಾಪಸ್ ಕಳುಹಿಸಿದ್ದು, ಇದರಿಂದ ಡಾ ಕೆ ಸುಧಾಕರ್‌ಗೆ ತೀವ್ರ ಮುಜುಗರ ಉಂಟಾಗಿದೆ.ಇದನ್ನೂ ಓದಿ: Heat Wave: ಕರಾವಳಿಯಲ್ಲಿ ಜೀವ ಹಿಂಡುತ್ತಿದೆ ಬಿಸಿಲಿನ ತಾಪ! ಸುಡು ಬಿಸಿಲಿನಿಂದ ಪಾರಾಗಲು ಮನೆ ಮೇಲೆ ಸ್ಪ್ರಿಂಕ್ಲರ್ ಅಳವಡಿಕೆ!ಲೋಕಸಭಾ ಚುನಾವಣೆ ಹಿನ್ನೆಲೆ ಗೆಲ್ಲಲು ತಂತ್ರ ರೂಪಿಸುವ ಭಾಗವಾಗಿ ಪಕ್ಷದೊಳಗಿನ ಭಿನ್ನಮತ ಶಮನ ಮಾಡಲು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಜೊತೆ ಚರ್ಚೆ ನಡೆಸಲು ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಆಗಮಿಸಿದ್ದರು. ಆದರೆ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮನೆಯಿಂದ ಹೊರಗಡೆ ಹೋಗಿದ್ದಾರೆ ಎಂದು ಹೇಳಿ ಸಿಬ್ಬಂದಿ ಮನೆ ಗೇಟ್‌ನಿಂದಲೇ ವಾಪಸ್ ಕಳುಹಿಸಿದ್ದಾರೆ.ಮಗನಿಗೆ ಟಿಕೆಟ್ ಕೈ ತಪ್ಪಿದಕ್ಕೆ ಬೇಸರಗೊಂಡಿರುವ ಯಲಹಂಕ ಶಾಸಕ ವಿಶ್ವನಾಥ್, ಬಿಜೆಪಿ ನಾಯಕರಲ್ಲಿ ಮುನಿಸುಗೊಂಡಿದ್ದರು. ಇದೀಗ ಸುಧಾಕರ್ ಭೇಟಿಗೂ ಅವಕಾಶ ನೀಡದೆ ಬೆಳಗ್ಗೆಯೆ ಹೊರಗಡೆ ಹೋಗಿ ಸುಧಾಕರ್‌ಗೆ ನಿರಾಸೆಯುಂಟು ಮಾಡಿದ್ದಾರೆ.

Post a Comment