ಬಿಬಿಎಂಪಿಯಿಂದ ಕಂಟ್ರೋಲ್ ರೂಂ
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾದ್ದಲ್ಲಿ ಬಿಬಿಎಂಪಿ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ.ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ತಮಿಳುನಾಡಿನಿಂದ ಮೆಷಿನ್‌ಗಳನ್ನು ತರಿಸಿಕೊಂಡು ಬೋರ್‌ವೆಲ್ (Borewell) ಕೊರೆಯಲು ನಿರ್ಧರಿಸಿದೆ. ಬೆಂಗಳೂರಿನ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬೋರ್‌ವೆಲ್ ಸರಕಾರ ಮುಂದಾಗಿದೆ. ಅಷ್ಟೇ ಅಲ್ಲ, ನೀರಿನ ಪೂರೈಕೆಗೆ ಬಿಬಿಎಂಪಿಯಲ್ಲಿ (BBMP) ಕಟ್ರೋಲ್ ರೂಂ ಕೂಡಾ ತೆರೆಯಲಾಗಿದೆ.2 ತಿಂಗಳ ನೀರಿನ ಸಮಸ್ಯೆ!ಮುಂದಿನ ಎರಡು ತಿಂಗಳ ಕಾಲ ನೀರಿನ ಸಮಸ್ಯೆ ಆಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಬೆಂಗಳೂರಿನಲ್ಲಿ 15 ಸಾವಿರ ಬೋರ್‌ವೆಲ್‌ಗಳು ಇವೆ. ಅದರಲ್ಲಿ 6 ಸಾವಿರ ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಸದ್ಯ 7 ಸಾವಿರ ಬೋರ್‌ವೆಲ್ ನಿಂದ ನೀರು ಪೂರೈಕೆ ಆಗ್ತಿದೆ.ಸಂಬಂಧಿತ ಸುದ್ದಿAncestors Rising: ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಮುಖ ಗ್ರಾಮವಾಗಿತ್ತು ಉತ್ತರ ಕನ್ನಡದ ಈ ಊರು!Belagavi News: ಒಣ ಮೇವು ಹುಲ್ಲಿಗೆ ಭಾರೀ ಬೇಡಿಕೆ; ದುಪ್ಪಟ್ಟು ದರದಲ್ಲಿ ಮಹಾರಾಷ್ಟ್ರಕ್ಕೆ ಮಾರಾಟ!Mandya News: ಸಕ್ಕರೆನಾಡಿನಲ್ಲಿ ಹಸುವಿಗೆ ಸೀಮಂತ ಕಾರ್ಯ; ಶಾಸ್ತ್ರೋಕ್ತವಾಗಿ ಹೇಗೆ ನಡೆಯಿತು ನೋಡಿ!Positive Story: ಅಂಕೋಲಾ ಮಹಿಳೆಯರ ಉಪಾಯ, 100ಕ್ಕೂ ಹೆಚ್ಚು ಕುಟುಂಬಕ್ಕೆ ಬೇಸಿಗೆಯಲ್ಲೂ ಸಿಕ್ಕ ಜೀವಜಲ!ಬಿಬಿಎಂಪಿಯಿಂದ ಕಂಟ್ರೋಲ್ ರೂಂ!ನೀರು ಅಭಾವ ಬಿದ್ದಾಗ ಸರ್ಕಾರ ಖಾಸಗಿ ವೋರ್ ವೆಲ್, ಬಾವಿಯನ್ನು ವಶಕ್ಕೆ ಪಡೆಯುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಸದ್ಯ 219 ವಾಟರ್ ಟ್ಯಾಂಕರ್‌ಗಳು ರಿಜಿಸ್ಟ್ರೇಶನ್ ಮಾಡಿಕೊಂಡಿದ್ದು, ಅವುಗಳಲ್ಲಿ ನೀರನ್ನು ಪೂರೈಕೆ ಮಾಡಲಾಗುತ್ತದೆ. ಇದನ್ನೂ ಓದಿ: BMTC New Buses: ಈ ಮಾರ್ಗಗಳಲ್ಲಿ ಹೊಸದಾಗಿ ಮೆಟ್ರೋ ಫೀಡರ್ ಬಸ್ ಆರಂಭಿಸಿದ ಬಿಎಂಟಿಸಿ ಇದನ್ನೂ ಓದಿ: Indian Railways: ಮೈಸೂರು-ಬಾಗಲಕೋಟೆ, ಮಂಗಳೂರು-ವಿಜಯಪುರ ರೈಲುಗಳಲ್ಲಿ ಮಹತ್ವದ ಬದಲಾವಣೆಬಿಬಿಎಂಪಿ ವತಿಯಿಂದ ಕಂಟ್ರೋಲ್ ರೂಂ ತೆರೆಯಲಾಗಿದ್ದು, ನೀರಿನ ಸಮಸ್ಯೆ ಎದುರಿಸುವವರು 1916ಗೆ ಕರೆ ಮಾಡಿದ್ದಲ್ಲಿ ಅಂತಹವರ ಮನೆ ಬಾಗಿಲಿಗೆ ನೀರು ತಲುಪಿಸುವ ಕೆಲಸವನ್ನು ಬಿಬಿಎಂಪಿ ಮಾಡಲಿದೆ.
Post a Comment