ನೀರನ ಅಭಾವ
ಜನರು ಒಮ್ಮೇಲೆ ಮೂರು-ನಾಲ್ಕು ಕ್ಯಾನ್ ಕುಡಿಯುವ ನೀರು ಒಯ್ಯುತ್ತಿದ್ದಾರೆ. ಬೋರ್ ವೇಲ್ ಬತ್ತಿದ್ದು, ಶುದ್ಧ ನೀರಿನ ಘಟಕಗಳಲ್ಲಿ ನೀರಿಲ್ಲದೇ ಪರದಾಟ ಶುರುವಾಗಿದೆ. ಹೀಗಾಗಿ ಒಬ್ಬರಿಗೆ ಒಂದೇ ಕ್ಯಾನ್ ನೀರು ಎಂಬ ನಿಯಮ ಜಾರಿಯಾಗಿದೆ. ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Silicon City Bengaluru) ದಿನಬಳಕೆಗಲ್ಲ, ಕುಡಿಯುವ ನೀರಿಗೂ (Drinking Water) ಹಾಹಾಕಾರ ಶುರುವಾಗಿದೆ. ಇದೀಗಂತೂ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಒಬ್ಬರಿಗೆ ಒಂದೇ ಕ್ಯಾನ್ ನೀರು ರೂಲ್ಸ್ ಜಾರಿ ಆಗಿದೆ. ಈ ನಡುವೆ ಬೆಂಗಳೂರು ಅಭಿವೃದ್ಧಿ ಸಚಿವ ಡಿಸಿಎಂ ಡಿಕೆ ಶಿವಕುಮಾರ್ (Bengaluru Development Minister DK Shivakumar) ಸಭೆ ಮಾಡಿದ್ದಾರೆ. ಬೇಸಿಗೆ ಆರಂಭ ಆಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಬೋರ್ ವೆಲ್ ನೀರು ಬರ್ತಿಲ್ಲ. ಕಾವೇರಿ ನೀರು ಸಿಗ್ತಿಲ್ಲ. ಆರ್ ಓ ಪ್ಲಾಂಟ್‌ನಲ್ಲಿ ಕುಡಿಯೋ ನೀರು ತರೋಣ ಅಂದ್ರೆ ಅಲ್ಲೂ ನೀರಿನ ಅಭಾವ ಎದುರಾಗಿದೆ. ಅದೇ ಕಾರಣಕ್ಕೆ ರಾಜರಾಜೇಶ್ವರಿ ನಗರದಲ್ಲಿ ಒಬ್ಬರಿಗೆ ಒಂದೇ ಕ್ಯಾನ್ ಎಂಬ ಸೂತ್ರ ಅಳವಡಿಸಿಕೊಳ್ಳಲಾಗಿದೆ. ಒಬ್ಬರಿಗೆ ಒಂದೇ ಕ್ಯಾನ್ ನೀರು ಎಂಬ ನಿಯಮಸಂಬಂಧಿತ ಸುದ್ದಿPro Pak Slogans: ಮೂವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶBengaluru Water Crisis: ನೀರು ಪೂರೈಕೆಗೆ ಬಿಬಿಎಂಪಿಯಿಂದ ಕಂಟ್ರೋಲ್ ರೂಂ; ಹೆಲ್ಪ್‌ಲೈನ್ ಸಂಖ್ಯೆ ನೋಡಿಶುಕ್ರವಾರ ರಿಸೈನ್, ಸೋಮವಾರ ಪಶ್ಚಾತಾಪ: ಗೂಗಲ್ನಲ್ಲಿ 10 ವರ್ಷ ದುಡಿದ ಮಹಿಳೆಯ ದುಃಖಕ್ಕೇನು ಕಾರಣRameshwaram Cafe Blast Case: NIA ಗೆ ವರ್ಗಾವಣೆಯಾದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್ಇದೇ ರೀತಿ ನಗರದ ಹಲವು ಘಟಕಗಳ ಮುಂದೆ ಒಬ್ಬರಿಗೆ ಒಂದೇ ಕ್ಯಾನ್ ಬೋರ್ಡ್ ಹಾಕಲಾಗಿದೆ. ಜನರು ಒಮ್ಮೇಲೆ ಮೂರು-ನಾಲ್ಕು ಕ್ಯಾನ್ ಕುಡಿಯುವ ನೀರು ಒಯ್ಯುತ್ತಿದ್ದಾರೆ. ಬೋರ್ ವೇಲ್ ಬತ್ತಿದ್ದು, ಶುದ್ಧ ನೀರಿನ ಘಟಕಗಳಲ್ಲಿ ನೀರಿಲ್ಲದೇ ಪರದಾಟ ಶುರುವಾಗಿದೆ. ಹೀಗಾಗಿ ಒಬ್ಬರಿಗೆ ಒಂದೇ ಕ್ಯಾನ್ ನೀರು ಎಂಬ ನಿಯಮ ಜಾರಿಯಾಗಿದೆ. Ro ಪ್ಲಾಂಟ್‌ಗಳಿಗೆ ಬೆಳಗ್ಗೆ 2 ಗಂಟೆ, ಸಂಜೆ 2 ಗಂಟೆ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಆರ್ ಓ ಪ್ಲಾಂಟ್‌ನಲ್ಲಿ ನೀರಿಲ್ಲದೆ ಬಂದ್ ಆಗಿವೆ. ಟ್ಯಾಂಕರ್ ಮಾಫಿಯಾಗೆ ಬ್ರೇಕ್ ಹಾಕಲು ಚರ್ಚೆಬೆಂಗಳೂರಿಗೆ ಎದುರಾಗಿರುವ ನೀರಿನ ಅಭಾವ ನೀಗಿಸಲು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹೈವೋಲ್ಟೆಜ್ ಸಭೆ ಮಾಡಲಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ ಶಿವಕುಮಾರ್, ಟ್ಯಾಂಕರ್ ಮಾಫಿಯಾಗೆ ಬ್ರೇಕ್ ಹಾಕಲು ಚರ್ಚೆ ಮಾಡಲಾಗಿದೆ. ಡಿಸಿಎಂ ಸಭೆಯಲ್ಲಿ ಪಾಲಿಕೆ ಅಧಿಕಾರಿಗಳು, ಬೆಸ್ಕಾಂ, ಬಿಡಿಎ, ಜಲ ಮಂಡಳಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಅಭಾವ, ನೀರು ಸರಬರಾಜು ಕುರಿತು ಕೆಲ ನಿರ್ಣಯ ಕೈಗೊಳ್ಳಲಾಯಿತು.ನಗರದಲ್ಲಿ ನೀರಿನ ಸಮಸ್ಯೆಗೆ ಮುಖ್ಯವಾಗಿ 6997 ಬೋರ್‌ವೆಲ್ ಬತ್ತಿ ಹೋಗಿದ್ದು ಕಾರಣವಾಗಿದೆ. ಇದರ ಜೊತೆಗೆ ಕೆರೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದೆ ಇದ್ದು, ಬೆಂಗಳೂರಿನ ಅಂತರ್ಜಲ ಮಟ್ಟ ಕುಸಿದು ಹೋಗಿದ್ದು ಕಾರಣವಾಗಿದೆ. ಇದನ್ನು ಪುನಶ್ಚೇತಗೊಳಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಯಿತು.: ಇದನ್ನೂ ಓದಿ: Karnataka Lok sabha Election: ಸೋಮಣ್ಣ ವಿರುದ್ಧ ತುಮಕೂರಲ್ಲಿ ಮಾಧುಸ್ವಾಮಿ ರೆಬೆಲ್! ಕಾಂಗ್ರೆಸ್ ಅಭ್ಯರ್ಥಿ ಆಗ್ತಾರಾ ಶಾಮನೂರು ಸೊಸೆ?ನೀರು ಪೂರೈಸಲು ಕಂಟ್ರೋಲ್ ರೂಮ್ನೀರಿನ ಸಮಸ್ಯೆಗೆ ಟ್ಯಾಂಕರ್ ಅಸೋಸಿಯೇಷನ್ ಜೊತೆ ಸಭೆ ನಡೆಸಿ ಕಿಲೋ ಮೀಟರ್ ಲೆಕ್ಕಾಚಾರದಲ್ಲಿ ದರ ನಿಗದಿ ಮಾಡಲಾಗುತ್ತದೆ. ಸದ್ಯ 2,500 ಟ್ಯಾಂಕರ್‌ಗಳು ಇದ್ದು, ಕೂಡಲೇ ಖಾಸಗಿ ವಾಟರ್ ಟ್ಯಾಂಕರ್ ಮಾಲೀಕರು ನೋಂದಣಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಟ್ಯಾಂಕರ್ ಸೀಜ್ ಮಾಡುವ ಎಚ್ಚರಿಕೆ ನೀಡಲಾಗಿದೆ. ಕುಡಿಯೋ ನೀರಿಗೆ ಹಾಲಿನ ಟ್ಯಾಂಕರ್ ಬಳಸೋಕು ಸೂಚನೆ ಕೊಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ನೀರು ಪೂರೈಸಲು ಕಂಟ್ರೋಲ್ ರೂಮ್ ತೆರೆಯಲು ತೀರ್ಮಾನ ಮಾಡಲಾಗಿದೆ.ಮುಂದಿನ 2 ತಿಂಗಳ ಕಾಲ ನೀರಿನ ಅಭಾವ ನೀಗಿಸಲು ತಮಿಳುನಾಡಿನಿಂದ ಬೋರ್ ವೆಲ್ ಕೊರೆಯುವ ಯಂತ್ರವನ್ನು ತರಿಸಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಇರುವ ಖಾಸಗಿ ಬೋರ್‌ವೆಲ್ ವಶಕ್ಕೆ ಪಡೆಯಲು ಸೂಚಿಸಲಾಗಿದೆ. ಬೇಸಿಗೆಯಲ್ಲಿ ನೀರು ಪೂರೈಕೆಗೆ ಒಟ್ಟು 556 ಕೋಟಿ ಮೀಸಲಿಡಲಾಗಿದೆ.
Post a Comment