ಸಾಂದರ್ಭಿಕ ಚಿತ್ರ
ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿರುವ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಟಿ ನಜೀರ್, ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಕೈದಿಗಳ ಬ್ರೈನ್ ವಾಶ್ ಮಾಡಿ ಅವರನ್ನೇ ಕೃತ್ಯಗಳಿಗೆ ಬಳಸುತ್ತಿದ್ದ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಜೈಲು ಕೈದಿಗಳ ಆಮೂಲಾಗ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಮುಂಜಾನೆ 7 ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎನ್‌ಐಎ ವಕ್ತಾರರು, ತನಿಖಾಧಿಕಾರಿಗಳು 17 ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿರುವ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಟಿ ನಜೀರ್, ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಕೈದಿಗಳ ಬ್ರೈನ್ ವಾಶ್ ಮಾಡಿ ಅವರನ್ನೇ ಹಿಂಸಾತ್ಮಕ ಕೃತ್ಯಗಳಿಗೆ ಬಳಸುತ್ತಿದ್ದ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ.ಸಂಬಂಧಿತ ಸುದ್ದಿ
Shivaratri: ಶಿವರಾತ್ರಿ ದಿನ ಈ ರೀತಿ ಪೂಜೆ ಮಾಡಿ, ನಿಮ್ಮ ಎಲ್ಲಾ ಕಷ್ಟಗಳಿಗೂ ಸಿಗುತ್ತೆ ಪರಿಹಾರ!
CM Siddaramaiah: ಸಿಎಂ ವ್ಯಾಸಂಗ ಮಾಡಿದ ಶಾಲೆಗೆ 10 ಲಕ್ಷ ರೂಪಾಯಿ ದೇಣಿಗೆ
Bengaluru BMTC: ಶಿವಾಜಿನಗರ-ಶ್ರೀರಾಂಪುರ ಪ್ರಯಾಣಿಕರಿಗೆ ಸಿಹಿ ಸುದ್ದಿ; ಈ ರೂಟ್‌ನಲ್ಲಿ ಬಸ್ ಸಂಚಾರ!
Guest Lecturers: ಅತಿಥಿ ಉಪನ್ಯಾಸಕರ ಮಾಸಿಕ ಗೌರವ ಧನ ಹೆಚ್ಚಳ!
ಇದನ್ನೂ ಓದಿ: Lok Sabha Election: ಅಗ್ನಿವೀರ್ ಯೋಜನೆ ರದ್ದು, ರೈಲ್ವೆ ಪ್ರಯಾಣ ದರ ಇಳಿಕೆ, ₹450ಕ್ಕೆ ಗ್ಯಾಸ್! ಹೀಗಿರಲಿದೆ ಕಾಂಗ್ರೆಸ್ ಪ್ರಣಾಳಿಕೆ
ಬೆಂಗಳೂರು ನಗರ ಪೊಲೀಸರು ಏಳು ಪಿಸ್ತೂಲ್‌ಗಳು, ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳು, ಒಂದು ಮ್ಯಾಗಜೀನ್, 45 ಲೈವ್ ರೌಂಡ್‌ಗಳು ಮತ್ತು ನಾಲ್ಕು ವಾಕಿ-ಟಾಕಿಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ ತಿಂಗಳಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಎನ್‌ಐಎ ತಂಡ ಮೊಹಮ್ಮದ್ ಉಮರ್, ಮೊಹಮ್ಮದ್ ಫೈಸಲ್ ರಬ್ಬಾನಿ, ತನ್ವೀರ್ ಅಹ್ಮದ್ ಮತ್ತು ಮೊಹಮ್ಮದ್ ಫಾರೂಕ್ ಮತ್ತು ಪರಾರಿಯಾಗಿರುವ ಜುನೈದ್ ವಾಸವಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿ ಹಲವಾರು ಡಿಜಿಟಲ್ ಸಾಧನಗಳು, ದೋಷಾರೋಪಣೆ ದಾಖಲೆಗಳು ಮತ್ತು 7.3 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿತ್ತು.
ಉಮರ್, ರಬ್ಬಾನಿ, ಅಹಮದ್, ಫಾರೂಕ್ ಮತ್ತು ಜುನೈದ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿರುವ ಲಷ್ಕರ್-ಎ-ತೊಯ್ಬಾ ಕಾರ್ಯಕರ್ತ ಮತ್ತು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಟಿ ನಜೀರ್‌ನೊಂದಿಗೆ ಸಂಪರ್ಕಕ್ಕೆ ಬಂದಿದ್ದರು ಎಂದು ಎನ್‌ಐಎ ಸಂಸ್ಥೆಯ ವಕ್ತಾರರು ಈ ಹಿಂದೆ ಬಹಿರಂಗಪಡಿಸಿದ್ದರು.
ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದ ನಂತರ, ಐವರು ಆರೋಪಿಗಳು ಎಲ್ಲಾ ಪೂರ್ವ ತಯಾರಿಗಳನ್ನು ನಡೆಸಿ ನಜೀರ್ ಸೂಚನೆಯ ಮೇರೆಗೆ ಅಹ್ಮದ್ ನೇತೃತ್ವದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು ಎಂದು ವಕ್ತಾರರು ತಿಳಿಸಿದ್ದಾರೆ.ಇದನ್ನೂ ಓದಿ: Anant Ambani: ಮಗ ತನ್ನ ಅನಾರೋಗ್ಯದ ಬಗ್ಗೆ ಮಾತನಾಡುತ್ತಿದ್ದಂತೆ ವೇದಿಕೆಯಲ್ಲೇ ಕಣ್ಣೀರಾದ ಮುಕೇಶ್ ಅಂಬಾನಿ!
2021ರಲ್ಲಿ ರಕ್ತ ಚಂದನದ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಜುನೈದ್, ಎನ್‌ಕ್ರಿಪ್ಟೆಡ್ ಸಂವಹನ ವೇದಿಕೆಗಳ ಮೂಲಕ ಇತರ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಇತರರಿಗೆ ನೀಡಲು ಮದ್ದುಗುಂಡುಗಳನ್ನು ತನ್ನ ಬಳಿ ಸುರಕ್ಷಿತವಾಗಿ ಇರಿಸಿಕೊಂಡಿದ್ದ. ನಂತರ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವಂತೆ ಹೇಳಿದ್ದ ಎಂಬುದಾಗಿ ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯ ಸಂದರ್ಭದಲ್ಲಿ ಈ ದಾಳಿಗೂ ಮತ್ತು ಜೈಲಿನಲ್ಲೇ ಕೈದಿಗಳನ್ನು ಬ್ರೈನ್ ವಾಶ್ ಮಾಡಿ ಸ್ಫೋಟಕ್ಕೆ ಸಂಚು ರೂಪಿಸಿರುವುದು ಸೇರಿದಂತೆ ವಿವಿಧ ಆಂಗಲ್‌ಗಳಲ್ಲಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
Post a Comment