Siddaramaiah ಸರ್ಕಾರದ ವಿರುದ್ಧ YST ಬಾಂಬ್ ಹಾಕಿದ ಹೆಚ್​ಡಿಕೆ


 ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ: HD Kumaraswamy Allegation: ಸ್ವಾಭಿಮಾನವನ್ನ ಮರೆತು ಜನ ಕೈಯೊಡ್ಡುವ ಪರಿಸ್ಥಿತಿಯನ್ನು ಎಷ್ಟು ವರ್ಷ ಮಾಡ್ತೀರಾ? ಜನರನ್ನ ಭಿಕ್ಷುಕರಾಗಿ ಮಾಡಿ ರಾಜಕೀಯ ಮಾಡ್ತಾರೆ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಕಿಡಿಕಾರಿದರು.ಬೆಂಗಳೂರು: ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy), ಇಷ್ಟು ದಿನ ತೆರಿಗೆಯಲ್ಲಿ ಜಿಎಸ್​​‌ಟಿ (GST) ಅಂತ ಇತ್ತು, ಈಗ ವೈಎಸ್​​ಟಿ ತೆರಿಗೆ ಆಗಿದೆ. ವೈಎಸ್​​ಟಿ ಟ್ಯಾಕ್ಸ್ (YST Tax) ಬಂದಿದೆ ಎಂದು ಜನರು ಮಾತನಾಡುತ್ತಿರೋದನ್ನು ಇಲ್ಲಿ ಪ್ರಸ್ತಾಪ ಮಾಡಿದ್ದೇನೆ. ನನಗೆ ಯಾವುದೇ ಮುಜುಗರ ಇಲ್ಲ. ಯಾರ ಬಳಿನೂ 5 ರೂಪಾಯಿ ತಗೊಂಡಿಲ್ಲ. ನನಗೆ ನೈತಿಕತೆ ಇದೆ ಎಂದು ಪರೋಕ್ಷವಾಗಿ ಸಿಎಂ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ (Yathindra Siddaramaiah)‌ ಹಸ್ತಕ್ಷೇಪದ ಬಗ್ಗೆ ಗಂಭೀರ ಆರೋಪ ಮಾಡಿದರು. ಇಲ್ಲಿ ಹಲವಾರು ಜನ ಸಿಎಂ ಇದ್ದಾರೆ. ಸಿದ್ದರಾಮಯ್ಯ ಒಬ್ಬರೆನಾ ಸಿಎಂ ಎಂದು ವ್ಯಂಗ್ಯ ಮಾಡಿದ ಕುಮಾರಸ್ವಾಮಿ, ಅಕ್ಕಿ ಕೊಡುವ ವಿಚಾರದಲ್ಲಿ 15 ದಿನದಲ್ಲಿ ದುಡ್ಡು ಕೊಡ್ತೀವಿ ಎಂದು ಸಿದ್ದರಾಮಯ್ಯ ಹೇಳ್ತಾರೆ. ಸತೀಶ್ ಜಾರಕಿಹೊಳಿ ಆಗಸ್ಟ್ ಅಂತಾರೆ. ಹಾಗಾದ್ರೆ ಎಷ್ಟು ಸಿಎಂಗಳಿದ್ದೀರಾ? ಎಷ್ಟು ಜನ ಮಾತನಾಡೋದು? ನಿಮ್ಮ ಹೈಕಮಾಂಡ್ ಎಷ್ಟು ಜನಕ್ಕೆ ಅಧಿಕಾರ ನೀಡಿದೆ ಎಂದು ಪ್ರಶ್ನಿಸಿದರು. ಸರ್ಕಾರ ರಚನೆಯಾಗಿ 50 ದಿನಗಳಾಗಿದೆ. ಶಾಸಕರು, ನಾಯಕರು ಜೊತೆ ಪಕ್ಷದ ನಿಲುವು ಯಾವ ರೀತಿ ಇರಬೇಕು ಅಂತ ಸಭೆ ಇಂದು ಮಾಡ್ತಿದ್ದೇವೆ. ನೂತನ ಪದಾಧಿಕಾರಿಗಳು, ವಿವಿಧ ಜಿಲ್ಲೆಯ ಮುಖಂಡರು ಸಭೆಯಲ್ಲಿ ಭಾಗಿಯಾಗ್ತಿದ್ದಾ


ರೆಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ನಾಯಕರ ಜೊತೆ ಚರ್ಚೆಈ ಸರ್ಕಾರದ ಮೇಲೆ ಜನಾಭಿಪ್ರಾಯ ಹೇಗಿದೆ ಅಂತ ನಾಯಕರ ಜೊತೆ ಚರ್ಚೆ ಮಾಡಿ ಅಭಿಪ್ರಾಯ ಪಡೆದುಕೊಳ್ಳುತ್ತೇವೆ. ಅದರ ಆಧಾರವಾಗಿ ಸದನದಲ್ಲಿ ಯಾವ ನಿಲುವು ತೆಗೆದುಕೊಳ್ಳಬೇಕು ಎಂದು ಚರ್ಚಿಸುತ್ತೇವೆ ಎಂದು ಹೇಳಿದರು. ಕಡಿಮೆ ಸಂಖ್ಯೆಯಿದ್ದರೂ ಜವಾಬ್ದಾರಿಯುತ ವಿಪಕ್ಷವಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಚರ್ಚೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹೇಳಿದರು.ಎಷ್ಟು ದಿನ ಹೀಗೆ ಮಾಡ್ತೀರಿ?ಸದನದಲ್ಲಿ ಯಾವೆಲ್ಲಾ ವಿಚಾರ ಪ್ರಸ್ತಾಪ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ, ಪಾಪ ಗ್ಯಾರಂಟಿ ಕೊಡ್ತಿದ್ದಾರೆ. ಕೊಡಲಿ ನಾನೇನೂ ಚರ್ಚೆ ಮಾಡಲ್ಲ. ಸ್ವಾತಂತ್ರ್ಯ ಬಂದು 70 ವರ್ಷ ಆಯ್ತು. ಜನರನ್ನು ಇನ್ನು ಎಷ್ಟು ವರ್ಷ ಹೀಗೆ ಸರ್ಕಾರದ ಮುಂದೆ ಕೈಯೊಡ್ಡಿ ನಿಲ್ಲಸ್ತೀರಾ ಎಂದು ಪ್ರಶ್ನೆ ಮಾಡಿದರು.ಸ್ವಾಭಿಮಾನವನ್ನ ಮರೆತು ಜನ ಕೈಯೊಡ್ಡುವ ಪರಿಸ್ಥಿತಿಯನ್ನು ಎಷ್ಟು ವರ್ಷ ಮಾಡ್ತೀರಾ? ಜನರನ್ನ ಭಿಕ್ಷುಕರಾಗಿ ಮಾಡಿ ರಾಜಕೀಯ ಮಾಡ್ತಾರೆ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಕಿಡಿಕಾರಿದರು. ಸಿದ್ದರಾಮಯ್ಯಗೆ ತಿರುಗೇಟುಇನ್ನು ವರ್ಗಾವಣೆ ಕುರಿತು ಪ್ರತಿಕ್ರಿಯಿಸಿ ಸಿಎಂ ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದರು. ನಾನು ಸಿಎಂ ಆಗಿದ್ದಾಗ ನಿಮ್ಮ ಸಚಿವರು ಯಾವ ರೀತಿ ನಡೆದುಕೊಂಡರು. ಒಳ್ಳೆಯ ಇಲಾಖೆಗಳಿದ್ರೂ ಯಾವ ಟ್ರಾನ್ಸ್‌ಫರ್ ಮಾಡುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ ಎಂದು ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ತಮ್ಮ ಮೇಲೆ ಒತ್ತಡ ಹಾಕಿತ್ತು ಎಂದು ಹೇಳಿದರು.ಇದನ್ನೂ ಓದಿ: Bengaluru News: ತನ್ನ ಮನೆ ಮುಂದೆ ಕಾರು ನಿಲ್ಲಿಸಿದ ನೆರೆಮನೆಯವನಿಗೆ ಪ್ರೀತಿಯ ಪತ್ರ; ಅಂತಹದ್ದೇನಿದೆ ಲೆಟರ್‌ನಲ್ಲಿ?ಬೆಂಗಳೂರು ಪ್ರಾಧಿಕಾರಕ್ಕೆ ಡಿಮ್ಯಾಂಡ್ ಮಾಡಿದವರನ್ನು ಆಚೆ ಇಟ್ಟಿದ್ದೆ. ಯಲಹಂಕ ತಹಶೀಲ್ದಾರರ ಕಚೇರಿಗೆ 1.5 ಕೋಟಿ ಕೊಡ್ತೀನಿ ಅಂದವರನ್ನು ಹೊರಗೆ ಇಟ್ಟಿದ್ದೆ ಎಂದರು.

Post a Comment

Previous Post Next Post