ಬಿಎಸ್ ಯಡಿಯೂರಪ್ಪ
Araga Jnanendra: ಸಮರ್ಥ ಅಂತ ಕೊಟ್ರೆ ನಿಭಾಯಿಸ್ತೀನಿ ಎಂದು ಹೇಳಿದೆ. ಇದೇ ವೇಳೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುರತ್ತೇನೆ ಅಂತ ಹೇಳಿದರು.ಬೆಂಗಳೂರು: ಹೈಕಮಾಂಡ್ ಬುಲಾವ್ ಹಿನ್ನೆಲೆ ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ದೆಹಲಿಗೆ ಪ್ರಯಾಣ ಬೆಲೆ ಸಿದ್ದಾರೆ. ದೆಹಲಿಯಲ್ಲಿಂದು (Delhi) ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ (BJP President JP Nadda) ಅವರನ್ನು ಭೇಟಿಯಾಗಲಿರುವ ಬಿಎಸ್ ಯಡಿಯೂರಪ್ಪ, ವಿಧಾನಸಭೆ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರ (Opposition Leader Selection) ಆಯ್ಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಹಿನ್ನೆಲೆ ಆಕಾಂಕ್ಷಿಗಳಿಂದ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು. ಬೆಳಗ್ಗೆ ಮಾಜಿ ಸಿಎಂ ನಿವಾಸಕ್ಕೆ ಆಗಮಿಸಿದ ಮಾಜಿ ಸಚಿವ ಆರಗ ಜ್ಞಾನೇಂದ್ರ (Former Minister Araga Jnanendra) ವಿಪಕ್ಷ ನಾಯಕನಾಗುವ ಆಸೆಯನ್ನು ಪರೋಕ್ಷವಾಗಿ ಬಿಚ್ಚಿಟ್ಟರು.ಯಡಿಯೂರಪ್ಪ ಅವರ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆರಗ ಜ್ಞಾನೇಂದ್ರ, ನಾನು ಯಾವ ಸ್ಥಾನದ ಆಕಾಂಕ್ಷಿ ಅಲ್ಲ. ಸಮರ್ಥ ಅಂತ ಕೊಟ್ರೆ ನಿಭಾಯಿಸ್ತೀನಿ ಎಂದು ಹೇಳಿದೆ. ಇದೇ ವೇಳೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುರತ್ತೇನೆ ಅಂತ ಹೇಳಿದರು.ಯಡಿಯೂರಪ್ಪ ಅವರ ಮನೆಗೆ ಭೇಟಿ ಕೊಟ್ಟಿದ್ದಕ್ಕೆ ಬೇರೆ ಅರ್ಥ ಇಲ್ಲ. ಬೆಂಗಳೂರಿಗೆ ಬಂದಾಗೆಲ್ಲ ಯಡಿಯೂರಪ್ಪ ಮನೆಗೆ ಬಂದು ಹೋಗೋದು ನನ್ನ ಕ್ರಮ. ಯಾವಾಗಲೂ ನಾನು ಅವರನ್ನು ದರ್ಶನ ಮಾಡಿಯೇ ಹೋಗೋದು. ಹೀಗಾಗಿ ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದೇನೆ ಎಂದು ತಿಳಿಸಿದರು.ವಿಪಕ್ಷ ನಾಯಕನ ರೇಸ್ನಲ್ಲಿ ನನ್ನ ಹೆಸರು ಇದೆ ಎಂಬುದರ ಕುರಿತ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದ್ರೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.ನ್ನನ್ನ ಕಡೆಗಣಿಸಬೇಡಿ ಎಂದ ಶಶಿಲ್ ನಮೋಶಿ ನಾನು ಪರಿಷತ್ ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿ. ಕಲ್ಯಾಣ ಕರ್ನಾಟಕಕ್ಕೆ ಒಂದು ಸ್ಥಾನವನ್ನ ನೀಡಬೇಕು ಎಂದು ಬಿಎಸ್‌ವೈ ಭೇಟಿ ಬಳಿಕ ಪರಿಷತ್ ಸದಸ್ಯ ಶಶಿಲ್ ನಮೋಶಿ ಹೇಳಿದ್ದಾರೆ.ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಪರಿಷತ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಒಂದು ಸ್ಥಾನಮಾನ ಕೊಟ್ಟಿಲ್ಲ.ಕೆಲಸ ಮಾಡಲು ನಾನು ಸಿದ್ಧನಾನು ಈ ಹುದ್ದೆಗೆ ಸರಿಸಮಾನವಾಗಿದ್ದೀನಿ, ಹಿರಿಯನಾಗಿದ್ದೇನೆ. ನನ್ನನ್ನ ಕಡೆಗಣಿಸಬೇಡಿ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡಲಿಕ್ಕೆ ರೆಡಿಯಾಗಿದ್ದೇನೆ ಎಂದು ಶಶಿಲ್ ನಮೋಶಿ ಹೇಳಿದ್ದಾರೆ.ಇದನ್ನೂ ಓದಿ: Vande Bharat Express: ದಾವಣಗೆರೆಯಲ್ಲಿ ವಂದೇ ಭಾರತ್ ರೈಲಿಗೆ ಕಲ್ಲುಕೇಂದ್ರ ನಾಯಕರು ಸಮರ್ಥವಾಗಿದ್ದಾರೆ. ರಾಜ್ಯಕ್ಕೆ ಏನ್ ಒಳ್ಳೆಯದು ಆಗುತ್ತದೆ ಅದನ್ನು ಮಾಡುತ್ತಾರೆ. ಎಲ್ಲವೂ ಬ್ಯಾಲೆನ್ಸ್ ಮಾಡಿ ಹುದ್ದೆ ಹಂಚಿಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.

Post a Comment