Congress Guarantee: 'ನಕಲಿ ಗ್ಯಾರಂಟಿ'ಗಳ ಬಗ್ಗೆ ಎಚ್ಚರ ಇರಲಿ! ಕಾಂಗ್ರೆಸ್‌ಗೆ ಟಾಂಗ್ ಕೊಟ್ಟ ಮೋದಿ


 ಪ್ರಧಾನಿ ನರೇಂದ್ರ ಮೋದಿ

 ಕೇಂದ್ರದ ಬಿಜೆಪಿ ಸರ್ಕಾರದ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ ವಿವಿಧ ರೀತಿಯಲ್ಲಿ 50 ಸಾವಿರ ರೂಪಾಯಿಗಳ ಖಾತರಿ ನೀಡಲಾಗುತ್ತಿದೆ. ಇದು ಬೇರೆ ಪಕ್ಷಗಳು ಕೊಡುವ ನಕಲಿ ಗ್ಯಾರಂಟಿಗಳಲ್ಲ, ಇದು ಮೋದಿ ಗ್ಯಾರಂಟಿ" ಅಂತ ಪ್ರಧಾನಿ ಹೇಳಿದ್ರು.ನವದೆಹಲಿ: ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಗೆ (Congress' guarantee schemes) ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಟಾಂಗ್ ಕೊಟ್ಟಿದ್ದಾರೆ. ನವದೆಹಲಿಯ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ (ಐಇಸಿಸಿ) ನಲ್ಲಿ 17ನೇ ಭಾರತೀಯ ಸಹಕಾರಿ ಕಾಂಗ್ರೆಸ್ ಅನ್ನು ಉದ್ಘಾಟಿಸಿದರು. ಈ ವೇಳೆ ಅಂತರಾಷ್ಟ್ರೀಯ ಸಹಕಾರಿ ದಿನದ ಕಾರ್ಯಕ್ರಮದ್ಲಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಬಿಜೆಪಿ ಸರ್ಕಾರದ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ ವಿವಿಧ ರೀತಿಯಲ್ಲಿ 50 ಸಾವಿರ ರೂಪಾಯಿಗಳ ಖಾತರಿ ನೀಡಲಾಗುತ್ತಿದೆ. ಇದು ಬೇರೆ ಪಕ್ಷಗಳು ಕೊಡುವ ನಕಲಿ ಗ್ಯಾರಂಟಿಗಳಲ್ಲ, ಇದು ಮೋದಿ ಗ್ಯಾರಂಟಿ, ಕೇಂದ್ರ ಸರ್ಕಾರದ ಗ್ಯಾರಂಟಿ ಅಂತ ಕಾಂಗ್ರೆಸ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.ಇದು ಸುಳ್ಳು ಭರವಸೆಯಲ್ಲ, ಮೋದಿ ಭರವಸೆ! ತಮ್ಮ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ಸವಲತ್ತುಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು ಮಾತನಾಡಿದರು. ಕೃಷಿ ಕ್ಷೇತ್ರಕ್ಕೆ 6.5 ಲಕ್ಷ ಕೋಟಿ ರೂಪಾಯಿ ಮೀಸಲಿಡುವುದರೊಂದಿಗೆ ಸರ್ಕಾರವು ಪ್ರತಿ ರೈತರಿಗೆ 50,000 ರೂಪಾಯಿ ವಾರ್ಷಿಕ ಸವಲತ್ತುಗಳನ್ನು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದು ಕೇವಲ ಭರವಸೆಯಲ್ಲ, ಮೋದಿಯವರ ಭರವಸೆ ಎಂದು ಪ್ರತಿಪಾದಿಸಿದರು. ರಸಗೊಬ್ಬರ ಸಬ್ಸಿಡಿ, ಆಹಾರಧಾನ್ಯಗಳ ಸಂಗ್ರಹಣೆ ಮತ್ತು ಪಿಎಂ-ಕಿಸಾನ್‌ಗೆ ಸಂಬಂಧಿಸಿದಂತೆ ರೈತರಿಗೆ ಪ್ರಯೋಜನಗಳನ್ನು ಪ್ರಧಾನಿ ಮೋದಿ ಪಟ್ಟಿ ಮಾಡಿ, ಭಾಷಣದಲ್ಲಿ ಪ್ರಸ್ತಾಪಿಸಿದರುನನ್ನದು ಬರೀ ಭರವಸೆಗಳಲ್ಲ"ಯೇ ಮೋದಿ ಕಿ ಗ್ಯಾರಂಟಿ ಹೈ. ಔರ್ ಮೈನೆ ಜೋ ಕಿಯಾ ಹೈ, ವೋ ಬತಾ ರಹಾ ಹೂ, ವಾದೇ ನಹೀ ಬತಾ ರಹಾ ಹೂಂ (ಇದು ಮೋದಿಯವರ ಗ್ಯಾರಂಟಿ. ನಾನು ಏನು ಮಾಡಿದ್ದೇನೆ ಎಂಬುದರ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ ಮತ್ತು ಭರವಸೆಗಳಲ್ಲ)" ಎಂದು ಪ್ರಧಾನಿ ಹೇಳಿದರು.ಇದನ್ನೂ ಓದಿ: Tomato: ಇಳಿಕೆಯಾಗಲಿದೆ ಟೊಮೆಟೊ ಬೆಲೆ! ಇನ್ನು 15 ದಿನಗಳ ಡೆಡ್‌ಲೈನ್ ಕೊಟ್ಟ ಸರ್ಕಾರಕಾಂಗ್ರೆಸ್‌ ವಿರುದ್ಧ ಗುಡುಗಿದ ಪ್ರಧಾನಿಇನ್ನು ಮತ್ತೊಂದೆಡೆ ರಾಜಸ್ಥಾನದಲ್ಲಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಸೇರಿದಂತೆ ಎಲ್ಲಾ ಕುಟುಂಬ ಕೇಂದ್ರಿತ ಪಕ್ಷಗಳು ಒಟ್ಟಾಗಿವೆ. ಆಸ್ಪತ್ರೆಗಳಲ್ಲಿ ಆಯುಷ್ಮನ್ ಭಾರತ್ ಕಾರ್ಡ್‌ನಿಂದ ರೂ.5 ಲಕ್ಷ ವರೆಗಿನ ಚಿಕಿತ್ಸೆ ಗ್ಯಾರಂಟಿಯಾಗಿ ದೊರೆಯಲಿದೆ. ಇದು ಮೋದಿ ಗ್ಯಾರಂಟಿ ಎಂದು ಕಾಂಗ್ರೆಸ್‌ ಗ್ಯಾರಂಟಿ ಬಗ್ಗೆ ಪರೋಕ್ಷವಾಗಿ ಟೀಕಿಸಿದರು.ಕಾಂಗ್ರೆಸ್‌ನ ಗ್ಯಾರಂಟಿಯಿಂದ ದೇಶಕ್ಕೆ ನಷ್ಟಕಾಂಗ್ರೆಸ್ ಹೊಸ ಗ್ಯಾರಂಟಿ ಸೂತ್ರವನ್ನು ಹೊಂದಿದೆ. ಆದರೆ ಅವರು ತಮ್ಮ ಭರವಸೆಗಳನ್ನು ಪೂರೈಸುತ್ತಿದ್ದಾರೆಯೇ? ಅವರ ಖಾತರಿಗಳು ದೇಶವನ್ನು ದಿವಾಳಿಯಾಗಿಸುತ್ತದೆ ಅಂತ ಮೋದಿ ಆರೋಪಿಸಿದ್ರು.ಇದನ್ನೂ ಓದಿ: Modi-Putin: ಮೇಕ್‌ ಇನ್ ಇಂಡಿಯಾಗೆ ಪುಟಿನ್ ಮೆಚ್ಚುಗೆ, ಮೋದಿ ಬೆಸ್ಟ್ ಫ್ರೆಂಡ್ ಎಂದ ರಷ್ಯಾ ಅಧ್ಯಕ್ಷ!ಕಾಂಗ್ರೆಸ್ ಬಡವರನ್ನು ವಂಚಿಸುತ್ತಿದೆಬಡವರನ್ನು ದಾರಿ ತಪ್ಪಿಸುವುದು ಮತ್ತು ಅವರನ್ನು ವಂಚಿತರನ್ನಾಗಿ ಮಾಡುವುದು ಕಾಂಗ್ರೆಸ್‌ನ ನೀತಿಯಾಗಿದೆ. ಇದರಿಂದ ರಾಜಸ್ಥಾನದ ಜನರು ಸಹ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಅಂತ ಮೋದಿ ಆರೋಪಿಸಿದ್ರು. ಕಾಂಗ್ರೆಸ್‌ನಿಂದ ರಾಜಸ್ಥಾನಕ್ಕೆ ಏನು ಸಿಕ್ಕಿದೆ? ಶಾಸಕರು, ಸಿಎಂ ಮತ್ತು ಮಂತ್ರಿಗಳು ತಮ್ಮ ತಮ್ಮಲ್ಲೇ ಜಗಳವಾಡುತ್ತಾರೆ ಎಂದು ಟೀಕಿಸಿದ್ರು.

Post a Comment

Previous Post Next Post