Maharashtra Politics: ಎನ್‌ಸಿಪಿ ವಿರುದ್ಧ ಸಿಡಿದೆದ್ದ ಅಜಿತ್ ಪವಾರ್ ಶಿಂಧೆ ಸರ್ಕಾರಕ್ಕೆ ಸೇರ್ಪಡೆ, ಡಿಸಿಎಂ ಆಗಿ ಪ್ರಮಾಣವಚನ ಸ್ವೀಕಾರ!


 ಅಜಿತ್ ಪವಾರ್ ಪ್ರವಾಣ ವಚನ ಎನ್​ಸಿಪಿ ನಾಯಕ ಅಜಿತ್ ಪವಾರ್​ 30 ಎನ್​ಸಿಪಿ ಶಾಸಕರ ಬೆಂಬಲದೊಂದಿಗೆ ಭಾನುವಾರ ಮಹಾರಾಷ್ಟ್ರ ಸರ್ಕಾರ ಸೇರಿದ್ದಾರೆ. ಅವರು​ ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಮತ್ತೊಮ್ಮೆ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಎನ್​ಸಿಪಿ ನಾಯಕ ಶರದ್​ ಪವಾರ್ (Sharad Pawar) ಅವರ ಸೋದರ ಅಳಿಯ ಅಜಿತ್ ಪವಾರ್ (Ajit Pawar)​ ಅವರು ತಮ್ಮ ಪಕ್ಷದ ವಿರುದ್ಧವೇ ಬಂಡಾಯ ಎದ್ದಿದ್ದು, ಹಲವು ಶಾಸಕರ ಬೆಂಬಲದೊಂದಿಗೆ ಭಾನುವಾರ ಮಹಾರಾಷ್ಟ್ರ ಸರ್ಕಾರವನ್ನು ಸೇರಿದ್ದಾರೆ. ಅಜಿತ್​ ಏಕನಾಥ್ ಶಿಂಧೆ (Eknath Shinde) ಸರ್ಕಾರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಇಂದು 30 ಎನ್​ಸಿಪಿ ಶಾಸಕರೊಂದಿಗೆ ಶಿಂಧೆ ಸಂಪುಟ ಸೇರಿದ್ದಾರೆ. ಅವರು ಬಿಜೆಪಿಯ ದೇವೇಂದ್ರ ಪಡ್ನವೀಸ್ (Devendra Fadnavis)​ ಅವರೊಂದಿಗೆ ಉಪಮುಖ್ಯಮಂತ್ರಿ ಸ್ಥಾನ ಪಡೆದುಕೊಂಡಿದ್ದಾರೆ.9 ಎನ್​ಸಿಪಿ ಶಾಸಕರಿಗೆ ಸಚಿವ ಸ್ಥಾನಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಶಾಸಕ ಅಜಿತ್ ಪವಾರ್ ಅವರು ಪಕ್ಷದ ವಿರುದ್ಧ ಬಂಡಾಯವೆದ್ದು ಭಾನುವಾರ ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸೇರ್ಪಡೆಗೊಂಡರು. ರಾಜಭವನದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ ಜೊತೆಗೆ 8 ಎನ್‌ಸಿಪಿ ನಾಯಕರು ಕೂಡ ಶಿಂಧೆ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.ಇದನ್ನೂ ಓದಿ: Supriya Sule: ಇನ್ನು ಹದಿನೈದೇ ದಿನದಲ್ಲಿ ಒಂದಲ್ಲಾ ಎರಡು ರಾಜಕೀಯ ಭೂಕಂಪನ! ಶರದ್ ಪವಾರ್ ಪುತ್ರಿ ಭವಿಷ್ಯವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆಸಾರ್ವಜನಿಕವಾಗಿ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಯುವ ಇಚ್ಛೆ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಪವಾರ್ ಈ ಹೆಜ್ಜೆ ಇಟ್ಟಿದ್ದಾರೆ. ಅಜಿತ್ ಪವಾರ್ ತಮ್ಮ ಬೆಂಬಲಿತ ಶಾಸಕರ ಜೊತೆ ತುರ್ತು ಸಭೆ ನಡೆಸಿ ರಾಜಭವನಕ್ಕೆ ಆಗಮಿಸಿ, ಛಗನ್ ಭುಜಬಲ್, ಧನಂಜಯ್ ಮುಂಡೆ ಹಾಗೂ ಇತರ ಎನ್ಸಿಪಿ ಶಾಸಕರೊಂದಿಗೆ ಸರ್ಕಾರದ ಜೊತೆ ಕೈಜೋಡಿಸಿದ್ದಾರೆ. ಅಜಿತ್​ ಹಣಕಾಸು ಸಚಿವ ಸ್ಥಾನ ಅಲಂಕರಿಸಲಿದ್ದಾರೆ ಎನ್ನಲಾಗಿದೆ. ಅಜಿತ್ ಪವಾರ್ ಅವರು 30 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದ್ದಾರೆ. ಅಜಿತ್ ಪವಾರ್ ಅವರೊಂದಿಗೆ ಛಗನ್ ಭುಜಬಲ್, ಧನಂಜಯ್ ಮುಂಡೆ, ದಿಲೀಪ್ ವಲ್ಸೆ ಪಾಟೀಲ್, ಕಿರಣ್ ಮತ್ತು ಹಸನ್ ಮುಶ್ರಿಫ್ ಇದ್ದಾರೆ.ಇದನ್ನೂ ಓದಿ: Explained: NCPಗೆ ಇಬ್ಬರು ಕಾರ್ಯಾಧ್ಯಕ್ಷರು, ಈ ನಡೆ ಹಿಂದಿನ ರಹಸ್ಯವೇನು? ಇಲ್ಲಿದೆ ನೋಡಿ ಪವಾರ್​ ಮಾಸ್ಟರ್​ ಪ್ಲಾನ್​ಅಸಮಾಧಾನಕ್ಕೆ ಕಾರಣ?ಕೆಲ ದಿನಗಳ ಹಿಂದೆ ಎನ್‌ಸಿಪಿಯಲ್ಲಿ ನಾಯಕತ್ವ ಬದಲಾವಣೆ ಆಗಿತ್ತು. ಪಕ್ಷದ ಕಾರ್ಯಾಧ್ಯಕ್ಷರಾಗಿ ಶರದ್​ ಪವಾರ್​ ಮಗಳಾದ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಾಟೇಲ್ ಅವರನ್ನು ನೇಮಿಸಲಾಗಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಅಜಿತ್ ಪವಾರ್ ಬಂಡಾಯವೆದ್ದಿದ್ದರು. ಇದೀಗ ತಮ್ಮ 30 ಶಾಸಕರ ಬೆಂಬಲದೊಂದಿಗೆ ಅಜಿತ್ ಪವಾರ್ ಎನ್​ಡಿಎ ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ.ಏಕನಾಥ್ ಶಿಂಧೆ 40 ಸೇನಾ ಶಾಸಕರೊಂದಿಗೆ ಹೊರನಡೆದು ಬಿಜೆಪಿ ಬೆಂಬಲದೊಂದಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇವಲ ಒಂದು ವರ್ಷದ ನಂತರ ಎನ್‌ಸಿಪಿಯಲ್ಲಿನ ಬಿಕ್ಕಟ್ಟು ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆಯ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯನ್ನು ದುರ್ಬಲಗೊಳಿಸಿದೆ.

Post a Comment

Previous Post Next Post