ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
Karnataka BJP: ಇಂದು ವಿಧಾನಸಭೆ ವಿಪಕ್ಷ ಸ್ಥಾನಕ್ಕೆ ನಾಯಕ ಮತ್ತು ಉಪನಾಯನ ಆಯ್ಕೆ ಅಂತಿಮವಾಗಲಿದೆ ಎಂದು ಹೇಳಲಾಗುತ್ತಿದೆಬೆಂಗಳೂರು: ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಂಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಮತ್ತೊಮ್ಮೆ ಬಿಜೆಪಿ ಹೈಕಮಾಂಡ್ಗೆ (BJP High Command) ಅನಿವಾರ್ಯ ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ಹಿಂದೆ ಎರಡು ಬಾರಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದ ಬಿಜೆಪಿಗೆ (BJP) ಉತ್ತಮ ಫಲಿತಾಂಶ ಸಿಕ್ಕಿತ್ತು. ಆದ್ರೆ ಈ ಬಾರಿ ಅಧಿಕಾರದಲ್ಲಿದ್ರೂ, ಹೊಸ ಮುಖಗಳಿಗೆ ಟಿಕೆಟ್ ನೀಡಿದರೂ ಬಿಜೆಪಿ ಸೋತಿದೆ. ಚುನಾವಣೆ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ಮಾಧ್ಯಮಗಳ ಮುಂದೆ ಬಹಿರಂಗವಾಗುತ್ತಿದೆ. ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದ್ರೂ ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ. ಈಗಾಗಲೇ ಈ ಸ್ಥಾನದ ಮೇಲೆ ಹಲವರು ಟವೆಲ್ ಸಹ ಹಾಕಿದ್ದಾರೆ.ವಿಪಕ್ಷ ನಾಯಕನ ಆಯ್ಕೆ ಸಂಬಂಧ ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಯಡಿಯೂರಪ್ಪ ಇಂದು ದೆಹಲಿಗೆ ತೆರಳಿದ್ದಾರೆ. ಅಂದು ಬೇಡವಾಗಿದ್ದ ಯಡಿಯೂರಪ್ಪ ಇಂದು ಮತ್ತೆ ಬೇಕಾಗಿದ್ದಾರೆ ಎಂದು ಮಾಜಿ ಸಿಎಂ ಆಪ್ತರು ಮಾತನಾಡಿಕೊಳ್ಳುತ್ತಿದ್ದಾರೆ.ಇಂದೇ ಆಯ್ಕೆ ಸಾಧ್ಯತೆ!ಇಂದು ವಿಧಾನಸಭೆ ವಿಪಕ್ಷ ಸ್ಥಾನಕ್ಕೆ ನಾಯಕ ಮತ್ತು ಉಪನಾಯನ ಆಯ್ಕೆ ಅಂತಿಮವಾಗಲಿದೆ ಎಂದು ಹೇಳಲಾಗುತ್ತಿದೆ. ಮಾಜಿ ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ಬಳಿಕ ಹೈಕಮಾಂಡ್ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿಬಹುತೇಕ ವಿಧಾನಸಭೆ ವಿಪಕ್ಷ ನಾಯಕನಾಗಿ ಬಸವರಾಜ್ ಬೊಮ್ಮಾಯಿಯೇ ಆಯ್ಕೆ ಸಾಧ್ಯತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ವಿಪಕ್ಷ ಸ್ಥಾನಕ್ಕೆ ಬೊಮ್ಮಾಯಿ ಹಾಗೂ ಉಪ ನಾಯಕ ಸ್ಥಾನಕ್ಕೆ ಆರ್ ಅಶೋಕ್ ಹೆಸರು ಸೂಚಿಸುವ ಸಾಧ್ಯತೆಗಳಿವೆ. ಮೇಲ್ಮನೆ ವಿಪಕ್ಷ ನಾಯಕನ ಸ್ಥಾಇನ್ನೂ ಮೇಲ್ಮನೆ ವಿಪಕ್ಷ ಸ್ಥಾನಕ್ಕೂ ಇಂದೇ ಆಯ್ಕೆಯಾಗುವ ಸಾಧ್ಯತೆಗಳಿವೆ. ಮೇಲ್ಮನೆ ಸ್ಥಾನಕ್ಕೆ ಕುರುಬ ಸಮುದಾಯದ ಸದಸ್ಯ ರಘುನಾಥ್ ಮಲ್ಕಾಪುರೇ ನೇಮಕ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಈ ರೇಸ್ನಲ್ಲಿ ಹಿರಿಯ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಇದ್ದಾರೆ. ಅಲ್ಲದೇ ಮತ್ತೊಮ್ಮ ಸದಸ್ಯ ಚಲವಾದಿ ನಾರಯಣಸ್ವಾಮಿ ಕೂಡ ಹೆಸರು ಚರ್ಚೆಗೆ ಬಂದಿದೆ. ಇದನ್ನೂ ಓದಿ: Karnataka BJP: ಯಾರಾಗ್ತಾರೆ ರಾಜ್ಯಾಧ್ಯಕ್ಷ? ವಿಪಕ್ಷಕ್ಕೆ ಲೀಡರ್ ಯಾರು? ಬೊಮ್ಮಾಯಿ, ಯತ್ನಾಳ್ ಬಿಟ್ಟು ಅಚ್ಚರಿ ಹೆಸರು?ಇತ್ತೀಚೆಗೆ ಪಕ್ಷದಲ್ಲಿ ಉಂಟಾಗಿರುವ ಗೊಂದಲಗಳು, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರಮಣಕಾರಿ ಹೋರಾಟದ ಬಗ್ಗೆ ಹೈಕಮಾಂಡ್ ಜೊತೆ ಯಡಿಯೂರಪ್ಪ ಅವರು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

Post a Comment