Karnataka Budget 2023: ಸಿದ್ದರಾಮಯ್ಯ ಲೆಕ್ಕ -2023ರಲ್ಲಿ ಮೀನುಗಾರಿಕಾ ವಲಯಕ್ಕೆ ಸಿಕ್ಕಿದ್ದೇನು? ಇಲ್ಲಿದೆ ಡೀಟೇಲ್ಸ್‌


ಸಿದ್ದರಾಮಯ್ಯ

ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮೀನುಗಾರಿಕಾ ವಲಯಕ್ಕೂ ಅನುದಾನವನ್ನು ಘೋಷಣೆ ಮಾಡಿದೆ. ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್‌ ಅನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ್ದಾರೆ.ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್‌ ಅನ್ನು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮೀನುಗಾರಿಕಾ ವಲಯಕ್ಕೂ (Fishing Sector ) ಅನುದಾನವನ್ನು ಘೋಷಣೆ ಮಾಡಿದೆ.ಈ ಬಾರಿ ಮೀನುಗಾರ ಮಹಿಳೆಯರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯದ ಮಿತಿಯನ್ನು ಹೆಚ್ಚಿಸಲಾಗಿದ್ದು, ಮೀನುಗಾರ ಮಹಿಳೆಯರಿಗೆ ಬ್ಯಾಂಕ್‌ಗಳಲ್ಲಿ ನೀಡಲಾಗುತ್ತಿದ್ದ ಬಡ್ಡಿ ರಹಿತ ಸಾಲದ ಮಿತಿಯನ್ನು ಮೂರು ಲಕ್ಷ ರೂಪಾಯಿಗೆ ಏರಿಸಲಾಗಿದೆ. ಇನ್ನು, ಮೀನುಗಾರಿಕಾ ದೋಣಿಗಳಿಗೆ ನೀಡಲಾಗುತ್ತಿದ್ದ ರಿಯಾಯಿತಿ ದರದ ಡೀಸೆಲ್‌ನ ಮಿತಿಯನ್ನು 2 ಲಕ್ಷ ಕಿಲೋ ಮೀಟರ್‌ವರೆಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ 250 ಕೋಟಿ ರೂಪಾಯಿ ಅನುದಾನವನ್ನು ನಿಗದಿಪಡಿಸಲಾಗಿದೆ.ಇದನ್ನೂ ಓದಿ: Karnataka Budget 2023: ಹೃದಯಾಘಾತ ತಡೆಯಲು ‘ಅಪ್ಪು’ ಹೆಸರಿನಲ್ಲಿ ಸ್ವಯಂಚಾಲಿತ 'ಆರೋಗ್ಯ ಯಂತ್ರ' ಘೋಷಣೆಇನ್ನು ಮೀನುಗಾರಿಕಾ ದೋಣಿಗಳ ಸೀಮೆ ಎಣ್ಣೆ ಇಂಜಿನ್‌ಗಳನ್ನು ಪೆಟ್ರೋಲ್ ಅಥವಾ ಡೀಸೆಲ್‌ ಇಂಜಿನ್‌ಗಳನ್ನಾಗಿ ಪರಿವರ್ತಿಸಲು ತಲಾ 50 ಸಾವಿರ ರೂಪಾಯಿ ಸಹಾಯಧನ ಕೊಡಲಾಗುವುದು. ಇದಕ್ಕಾಗಿ 5 ಕೋಟಿ ರೂಪಾಯಿ ಅನುದಾನವನ್ನು ನಿಗಪಡಿಸಲಾಗಿದೆ.ಬೆಂಗಳೂರಿಗೆ ಭರ್ಜರಿ ಬಂಪರ್ಇನ್ನು ಈ ಬಾರಿಯ ಬಜೆಟ್‌ನಲ್ಲಿ ಬೆಂಗಳೂರಿಗೆ ಭರ್ಜರಿ ಯೋಜನೆಗಳನ್ನು ನೀಡಲಾಗಿದ್ದು, ಆ ಪೈಕಿ ನಗರದ ಪ್ರಯಾಣ ಜನದಟ್ಟಣೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ಮತ್ತು ಉಪನಗರ ಯೋಜನೆಗೆ ಭಾರೀ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ನೂತನ ಮೆಟ್ರೋ ಮಾರ್ಗದ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದ್ದು, ಬೈಯಪ್ಪನಹಳ್ಳಿಯಿಂದ ಕೆಆರ್ ಪುರಂ, ಕೆಂಗೇರಿಯಿಂದ ಚಲ್ಲಘಟ್ಟ ಮತ್ತು ನಾಗಸಂದ್ರದಿಂದ ಮಾದಾವರ ಭಾಗಕ್ಕೆ ನೂತನ ಮೆಟ್ರೋವನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: Karnataka Budget 2023: ಬಜೆಟ್‌ಗೂ ಮುನ್ನ ಟೆಂಪಲ್‌ ವಿಸಿಟ್‌ ಪದ್ಧತಿಗೆ ಬ್ರೇಕ್‌ ಹಾಕಿದ ಸಿಎಂ ಸಿದ್ದರಾಮಯ್ಯಇನ್ನು ಬೆಂಗಳೂರು ನಗರದ ಮೂಲಸೌಕರ್ಯಕ್ಕೆ 12 ಸಾವಿರ ಕೋಟಿ ಘೋಷಿಸಲಾಗಿದ್ದು, ನಮ್ಮ ಮೆಟ್ರೋ ಮತ್ತು ಬೆಂಗಳೂರು ಉಪನಗರ ಯೋಜನೆಗೆ 30000 ಕೋಟಿ ಘೋಷಣೆ ಮಾಡಿದರೆ, ವೈಟ್ ಟ್ಯಾಪಿಂಗ್‌ಗೆ 800 ಕೋಟಿ ಘೋಷಣೆ ಮಾಡಲಾಗಿದೆ.ಮುಂದಿನ ಮೂರು ವರ್ಷಗಳಲ್ಲಿ ಸದ್ಯ 70 ಕಿಲೋ ಮೀಟರ್ ಇರುವ ಮೆಟ್ರೋವನ್ನು 176 ಕಿಲೋ ಮೀಟರ್‌ಗೆ ವಿಸ್ತರಣೆ ಮಾಡಲಾಗುವುದು. ಹೆಬ್ಬಾಳದಿಂದ ಸರ್ಜಾಪುರವರೆಗಿನ 37 ಕಿಲೋ ಮೀಟರ್‌ ಉದ್ದದ ಮೆಟ್ರೋ ಯೋಜನೆಯನ್ನು, 15 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸಲುವಾಗಿ ಕೇಂದ್ರ ಸರ್ಕಾರಕ್ಕೆ ಅನುಮೋದನೆ ಸಲ್ಲಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

Post a Comment

Previous Post Next Post