Karnataka Budget 2023: ಡಿಸಿಎಂ ಡಿಕೆ ಶಿವಕುಮಾರ್ ಇಲಾಖೆಗೆ ಸಿಎಂ ಶಾಕ್


 ಸಿಎಂ ಸಿದ್ದರಾಮಯ್ಯ/ ಡಿಸಿಎಂ ಡಿಕೆ ಶಿವಕುಮಾರ್

ಈಗಾಗಲೇ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸಿದ್ದು, ಇಲಾಖೆಗಳಿಗೆ ಅನುಸಾರವಾಗಿ ಅನುದಾನ ಘೋಷಿಸಿದ್ದಾರೆ. ಹೀಗಿದ್ದರೂ ಡಿಸಿಎಂ ಡಿಕೆ ಶಿವಕುಮಾರ್ ಇಲಾಖೆಗೆ ಸಿಎಂ ಶಾಕ್ ಕೊಟ್ಟಿದ್ದಾರೆ. ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್​ ಸರ್ಕಾರಕ್ಕೆ ತಾನು ಕೊಟ್ಟಿದ್ದ ಭರವಸೆಗಳಾದ ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಸವಾಲಾಗಿದೆ. ಹೀಗಿರುವಾಗ ಇಂದಿನ ಬಜೆಟ್​ ಭಾರೀ ನಿರೀಕ್ಷೆಗಳನ್ನು ಗರಿಗೆದರಿಸಿದೆ. ಇಡೀ ರಾಜ್ಯದ ಜನತೆಯ ಗಮನ ಬಜೆಟ್​ ಮೇಲಿದೆ. ಇನ್ನು ಈಗಾಗಲೇ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸಿದ್ದು, ಇಲಾಖೆಗಳಿಗೆ ಅನುಸಾರವಾಗಿ ಅನುದಾನ ಘೋಷಿಸಿದ್ದಾರೆ. ಹೀಗಿದ್ದರೂ ಡಿಸಿಎಂ ಡಿಕೆ ಶಿವಕುಮಾರ್ ಇಲಾಖೆಗೆ ಸಿಎಂ ಶಾಕ್ ಕೊಟ್ಟಿದ್ದಾರೆ.ಹೌದು ಸಿಎಂ ಸಿದ್ದರಾಮಯ್ಯ ಬಜೆಟ್​ನಲ್ಲಿ ಜಲಸಂಪನ್ಮೂಲ ಇಲಾಖೆಗೆ ಹೆಚ್ಚುವರಿ ಅನುದಾನ ಘೋಷಣೆ ಮಾಡಿಲ್ಲ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತು ಉಲ್ಲಂಘನೆ ಮಾಡಲಾಗಿದೆ. ಜಲಸಂಪನ್ಮೂಲ, ನಗರಾಭಿವೃದ್ಧಿ ಹಾಗೂ ಲೋಕೋಪಯೋಗಿ ಸೇರಿದಂತೆ ಹಲವು ಇಲಾಖೆಗಳ ಕಾಮಗಾರಿ ಕಾಮಗಾರಿಗಳಿಗೆ ವಿತ್ತೀಯ ನೀತಿ ಮೀರಿ ಅನುಮೋದನೆ ಮಾಡಲಾಗಿದೆ.2022-23ರ ಅಂತ್ಯಕ್ಕೆ 2,55,102 ಕೋಟಿ ರೂ ಕಾಮಗಾರಿ ಬಾಕಿ ಇದೆ. ಇದನ್ನ ಪೂರ್ಣಗೊಳಿಸಲು ಆರು ವರ್ಷಗಳ ಕಾಲ ಬೇಕು. ಹಾಗಾಗಿ ಈ ಸರ್ಕಾರಕ್ಕೆ ಹೊಸ ಯೋಜನೆಗಳನ್ನ ಹಮ್ಮಿಕೊಳ್ಳುವುದು ಸವಾಲಾಗಿದೆ. ಹೀಗಾಗಿ ಪರೋಕ್ಷವಾಗಿ ಹೊಸ ನೀರಾವರಿ, ರಸ್ತೆ ಯೋಜನೆಗಳಿಲ್ಲ ಎಂದು ಸಿಎಂ ಬಜೆಟ್​ನಲ್ಲಿ ತಿಳಿಸಿದ್ದಾರೆ.

Post a Comment

Previous Post Next Post