Karnataka Budget 2023: 14ನೇ ಬಾರಿ ಬಜೆಟ್‌ ಮಂಡಿಸ್ತಿರೋ ಏಕೈಕ ಸಿಎಂ ಸಿದ್ದು, ಇದು ಟಗರು ಖದರು!


 ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ, ಹಣಕಾಸು ಸಚಿವರಾಗಿ 1995-96 ರಲ್ಲಿ ಮಂಡಿಸಿದ ಮೊದಲ ಬಾರಿಗೆ ಬಜೆಟ್‌ ಮಂಡಿಸಿದ್ದರು. ಸಿಎಂ ಸಿದ್ದರಾಮಯ್ಯವರು 14ನೇ ದಾಖಲೆಯ ಆಯವ್ಯಯ ಮಂಡಿಸಲಿದ್ದಾರೆ. ಕಾಂಗ್ರೆಸ್‌ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ ಈ ಬಜೆಟ್‌ ಸಾಕಷ್ಟು ಕುತೂಹಲ ಮೂಡಿಸಿದೆ.ಹಿಂದಿನ ಬಜೆಟ್‌ಗಳಲ್ಲಿ ಇಟ್ಟ ದಿಟ್ಟ ಹೆಜ್ಜೆಗಳ ಹಿನ್ನೋಟ ಇಲ್ಲಿದೆ. ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ, ಹಣಕಾಸು ಸಚಿವರಾಗಿ 1995-96 ರಲ್ಲಿ ಮಂಡಿಸಿದ ಮೊದಲ ಬಾರಿಗೆ ಬಜೆಟ್‌ ಮಂಡಿಸಿದ್ದರು.ಮೊದಲ ಮುಖ್ಯಮಂತ್ರಿ ಅವಧಿಯ ಕೊನೆಯ ಹಾಗೂ 2018-19ರಲ್ಲಿ ತಮ್ಮ 13ನೇ ಬಜೆಟ್‌ ಮಂಡಿಸಿದ್ದರು ಸಿದ್ದರಾಮಯ್ಯ. ಅಂದಿನಿಂದ ಇಂದಿನವರೆಗೂ ಅವರ ಎಲ್ಲ ಬಜೆಟ್‌ನಲ್ಲೂ ಬಸವಣ್ಣ, ಡಾ.ಬಿ.ಆರ್ ಅಂಬೇಡ್ಕರ್, ರಾಮ ಮನೋಹರ ಲೋಹಿಯಾ ಹಾಗೂ ದೇವರಾಜ ಅರಸರ ನೆರಳು ಸ್ಪಷ್ಟವಾಗಿ ದಾಖಲಾಗಿವೆ.1995-96 ರಿಂದ 2013-14ರ ವರೆಗೂ ಮಂಡಿಸಿದ ಏಳು ಆಯವ್ಯಯಗಳಲ್ಲಿ ಸಮಾಜವಾದಿ ಆಶಯಗಳು, ಚಿಂತನೆಗಳು, ಕಾಳಜಿಗಳು ಎದ್ದು ಕಾಣಿಸಿದರೆ, 2013-14 ರಿಂದ 2018-19ರವರೆಗಿನ ಆರು ಆಯವ್ಯಯಗಳಲ್ಲಿ ಆಗಷ್ಟೆ ಎದೆ ಎತ್ತಿದ್ದ ಅಹಿಂದ ಚಳಚಳಿಯ ತತ್ವ ಮತ್ತು ಆದರ್ಶಗಳು ಸಿದ್ದರಾಮಯ್ಯರ ಕೈ ಹಿಡಿದು ನಡೆಸಿದ್ದಕ್ಕೆ ಸ್ಪಷ್ಟ ಕುರುಹುಗಳು ಮತ್ತು ದಾಖಲೆಗಳಿವೆ. ಈಗ 14ನೇ ಆಯವ್ಯಯದಲ್ಲಿ ಎಲ್ಲಾ ಜಾತಿ, ಜನವರ್ಗಗಳ ಬದುಕಿನ ಸಂಕಷ್ಟಗಳಿಗೆ ತಕ್ಕ ಮಟ್ಟಿನ ಸಮಾಧಾನ ನೀಡುವ ಐದು ಗ್ಯಾರಂಟಿಗಳ ಪ್ರಭಾವ ದಟ್ಟವಾಗಿರುತ್ತದೆ ಎನ್ನುವುದು ಮುಖ್ಯಮಂತ್ರಿಗಳ ಆಶಯವಾಗಿದೆ.2018ರ ಫೆಬ್ರವರಿಯಲ್ಲಿ 13ನೇ ಆಯವ್ಯಯ ಮಂಡಿಸಿ ರಾಮಕೃಷ್ಣ ಹೆಗಡೆಯವರ ದಾಖಲೆಯನ್ನು ಸಿದ್ದರಾಮಯ್ಯ ಅವರು ಸರಿಗಟ್ಟಿದ್ದರು. ಮತ್ಯಾರೂ ತಮ್ಮನ್ನು ಸರಿಗಟ್ಟಲು ಸಾಧ್ಯವಾಗದ ಮಟ್ಟದ ದಾಖಲೆಯನ್ನು ಸಿದ್ದು ದಾಖಲಿಸುತ್ತಿದ್ದಾರೆ.ಸಿದ್ದರಾಮಯ್ಯ ಅವರು ಮಂಡಿಸಿದ ಮೊದಲ ಆಯವ್ಯಯದ ಗಾತ್ರ 12,616 ಕೋಟಿ ಆಗಿದ್ದರೆ 13 ನೇ ಆಯವ್ಯಯದ ಗಾತ್ರ 2,09,181 ಕೋಟಿ ಆಗಿತ್ತು. 14 ನೇ ಆಯವ್ಯಯದ ಗಾತ್ರ 3,35,000 ಕೋಟಿ‌ ಆಗಬಹುದು ಎಂದು ಮುಖ್ಯಮಂತ್ರಿಗಳೇ ಅಂದಾಜಿಸಿದ್ದಾರೆ.

Post a Comment

Previous Post Next Post