ಹೆಚ್ ಡಿ ಕುಮಾರಸ್ವಾಮಿ / ಸಿದ್ದರಾಮಯ್ಯ
Siddaramaiah Fans: ಸಿದ್ದರಾಮಯ್ಯ ರೈಟ್ ಚಾಯ್ಸ್ ಫಾರ್ ಸಿಎಂ ಹೆಸರಿನ ಫೇಸ್ಬುಕ್ ಪೇಜ್ ಮೂಲಕ ಕುಮಾರಸ್ವಾಮಿ ಅವರ ಕಾಲೆಳೆಯಲಾಗಿದೆ.ಬೆಂಗಳೂರು: ನೊಂದ ಜೀವ ಮತ್ತಷ್ಟು ನೋಯಿಸಬೇಡಿ ಎಂಬ ಹೆಸರಿನಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (Former CM HD Kumaraswamy) ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು (CM Siddaramaiah Fans) ತಿರುಗೇಟು ನೀಡಿದ್ದಾರೆ. ಕಳೆದ ಒಂದು ವಾರದಿಂದ ಕಾಂಗ್ರೆಸ್ ವಿರುದ್ಧ ರಾಜಕೀಯ ಸಮರಕ್ಕೆ ಮುಂದಾಗಿರುವ ಕುಮಾರಸ್ವಾಮಿ, ಸಾಲು ಸಾಲು ಆರೋಪಗಳನ್ನು ಮಾಡುತ್ತಿದ್ದಾರೆ. ವೈಎಸ್ಟಿ ಟ್ಯಾಕ್ಸ್ (YST Tax), ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ನಿನ್ನೆ ಪೆನ್ಡ್ರೈವ್ ಪ್ರದರ್ಶಿಸಿ, ಇದರಲ್ಲಿ ವರ್ಗಾವಣೆ ಮಾಡಿಸಲು ಸಚಿವರೊಬ್ಬರು ಹಣ ಕೇಳಿರುವ ಆಡಿಯೋ ಇದೆ ಎಂದು ಹೇಳಿದ್ರು. ಸಿದ್ದರಾಮಯ್ಯ ರೈಟ್ ಚಾಯ್ಸ್ ಫಾರ್ ಸಿಎಂ ಹೆಸರಿನ ಫೇಸ್ಬುಕ್ ಪೇಜ್ ಮೂಲಕ ಕುಮಾರಸ್ವಾಮಿ ಅವರ ಕಾಲೆಳೆಯಲಾಗಿದೆ.ಮಾನ್ಯ ಕುಮಾರಸ್ವಾಮಿ ಅವರ ಹೊಟ್ಟೆ ನೋವಿಗೆ ಕಾರಣಕರ್ತರುಸಿದ್ದರಾಮಯ್ಯ - ಎಷ್ಟೇ ಪಿತೂರಿ ,ವಿರೋಧ ಮಾಡಿದ್ರು ಎರಡು ಬಾರಿ ದಾಖಲೆ ಬಹುಮತ ಸಿಎಂ ಆಗಿರುವುದು..2.ಚಲುವರಾಯಸ್ವಾಮಿ - 47 ಸಾವಿರದಲ್ಲಿ ಸೋಲಿಸಿ ಡೆಡ್ ಹಾರ್ಸ್ ಎಂದು ಅವಮಾನಿಸಿದ್ದರು ಸಹ ಗೆದ್ದು ಮಂತ್ರಿ ಆಗಿರುವುದು. 3.ಯತೀಂದ್ರ - ತನ್ನ ಪುತ್ರನಿಗೆ ಇರದ ವಿದ್ಯೆ, ಬುದ್ದಿ, ತಾಳ್ಮೆಯ ವ್ಯಕ್ತಿತ್ವ ಮತ್ತು ತಂದೆಗೆ ಹೊಸ ರಾಜಕಾರಣದ ಶೈಲಿ ಬಗ್ಗೆ ಸಹಾಯ ಮಾಡುತ್ತಿರುವುದು. 4.ಡಿಕೆ ಶಿವಕುಮಾರ್ - ಇದೇ ಸ್ಪೀಡ್ ಅಲ್ಲಿ ಹೋಗಿ ಮುಂದೆ ಸಿಎಂ ಆದರೆ ಜಾತಿ ಹಿಡಿತ ಕೈ ತಪ್ಪಿ ತೋಟದ ಮನೆ ಸೇರುವ ಭಯ. 5.ಜಮೀರ್ ಅಹಮದ್ - ತಮ್ಮ ಎಲ್ಲ ಒಳ ಹೊರ ಆಟಗಳನ್ನು ಬಲ್ಲವನಾಗಿದ್ದು ಯಾವುದೇ ಸಮಯದಲ್ಲಿ ತಿರುಗಿ ಬೀಳುವ ಆತಂಕ.6.ಕೆ ಎನ್ ರಾಜಣ್ಣ - ದೇವೇಗೌಡರಿಗೆ 2 ಡೋಸ್ ಕೊಟ್ಟು ಕಳೆದ ಬಾರಿ ಮೂರನೇ ಡೋಸ್ ಕೊಟ್ಟು ಇವಾಗ ಹಾಸನದ ಉಸ್ತುವಾರಿ ಆಗಿ ಅಡ್ಜಸ್ಟ್ ಮೆಂಟ್ ಆದಾಯಕ್ಕೆ ಬ್ರೇಕ್ ಹಾಕಿರೋದು.7.ಶಿವಲಿಂಗೇಗೌಡ - ಮರ್ಯಾದೆ ಬಿಟ್ಟು ತನ್ನ ಸರ್ಕಾರವನ್ನೇ ಕೆಡವಿದ 'ಸಂತೋಷ 'ನ ನಿಲ್ಲಿಸಿದ್ದರೂ ಗೆದ್ದು ಸದನದಲ್ಲಿ ಗುಮ್ಮುತ್ತಿರುವುದು8.ವಾಸು & ಬಾಲಕೃಷ್ಣ - ಎದುರು ಬಾಯಿ ಬಿಟ್ಟರೆ ಬಣ್ಣಗೇಡು ಮಾಡುತ್ತಾರೆ ಎಂಬ ಅಂಜಿಕೆ9.ರೇವಣ್ಣ ಕುಟುಂಬ - ಅಣ್ಣನ ಮಕ್ಕಳು ಮುಂದೆ ಪಕ್ಷ ಹಿಡಿತಕೆ ತೆಗೆದುಕೊಂಡು ಸೋತಿರುವ ಮಗನ ರಾಜಕೀಯ ಭವಿಷ್ಯಕ್ಕೆ ಮುಳುವಾಗುವ ಸಾಧ್ಯತೆ. ಇದನ್ನೂ ಓದಿ: Karnataka Rains: ಲೇಟ್ ಆದ್ರೂ ಅಬ್ಬರಿಸಿ ಬಂದ ಮಳೆರಾಯ, ಬೆಂಗಳೂರಲ್ಲಿ ಹೀಗಿರಲಿದೆ ವಾತಾವರಣಅರ್ಥ ಮಾಡಿಕೊಳ್ಳಿ ನೊಂದ ಜೀವ ಮತ್ತಷ್ಟು ನೋಯಿಸಬೇಡಿ ಎಂದು ಬರೆದು ಅಂತಿಮವಾಗಿ #ಹೊಟ್ಟೆಕಿಚ್ಚು ಎಂಬ ಟ್ಯಾಗ್ ಬಳಸಲಾಗಿದೆ.

Post a Comment