ರಾಹುಲ್ ಗಾಂಧಿ (ಸಂಗ್ರಹ ಚಿತ್ರ) ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ದೋಷ ನಿರ್ಣಯಕ್ಕೆ ನ್ಯಾಯಾಲಯವು ತಡೆ ನೀಡಿದರೆ ಲೋಕಸಭೆ ಸದಸ್ಯತ್ವದಿಂದ ಅವರ ಅನರ್ಹತೆಯನ್ನು ಹಿಂದೆಗೆದುಕೊಳ್ಳಬಹುದು. ಆದರೆ ತೀರ್ಪು ತನಗೆ ಪೂರಕವಾಗಿರದಿದ್ದರೆ ಗುಜರಾತ್ ಹೈಕೋರ್ಟ್‌ನ ಮೇಲಿನ ಪೀಠದ ಮುಂದೆ ಮೇಲ್ಮನವಿಯನ್ನು ಸಲ್ಲಿಸಬಹುದು. ನವದೆಹಲಿ: ಮೋದಿ ಸರ್‌ನೇಮ್ (Modi Surname) ಕುರಿತು ಮಾಡಿದ ಟೀಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ (Defamation Case) ಪ್ರಕರಣದಲ್ಲಿ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯ ತೀರ್ಪನ್ನು ಗುಜರಾತ್‌ನ ಉಚ್ಛ ನ್ಯಾಯಾಲಯ (Gujarath High Court) ಇಂದು ಪ್ರಕಟ ಮಾಡಲಿದೆ.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ವಿಚಾರಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಧ್ಯಂತರ ರಕ್ಷಣೆಯನ್ನು ನಿರಾಕರಿಸಿದ್ದ ನ್ಯಾಯಾಲಯವು ಅವರ ಮನವಿಯನ್ನು ಪರಿಗಣನೆಯಲ್ಲಿ ಕಾಯ್ದಿರಿಸಿತ್ತು. ಇದೀಗ ರಾಹುಲ್ ಗಾಂಧಿ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯ ತೀರ್ಪನ್ನು ಗುಜರಾತ್‌ನ ಉಚ್ಛ ನ್ಯಾಯಾಲಯ ಇಂದು (ಶುಕ್ರವಾರ) ಪ್ರಕಟ ಮಾಡಲಿದೆ.ಇದನ್ನೂ ಓದಿ: Love Jihad: 2 ಹಿಂದೂ ಮಹಿಳೆಯರನ್ನು ಮದ್ವೆಯಾಗಿ ಟಾರ್ಚರ್, 3ನೇ ಬೇಟೆಗೆ ಸಜ್ಜಾದ ಕಾಮುಕ! ಮುಸ್ಲಿಂ ವ್ಯಕ್ತಿ ಅಂದರ್‌ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ದೋಷ ನಿರ್ಣಯಕ್ಕೆ ನ್ಯಾಯಾಲಯವು ತಡೆ ನೀಡಿದರೆ ಲೋಕಸಭೆ ಸದಸ್ಯತ್ವದಿಂದ ಅವರ ಅನರ್ಹತೆಯನ್ನು ಹಿಂದೆಗೆದುಕೊಳ್ಳಬಹುದು. ಆದರೆ ತೀರ್ಪು ತನಗೆ ಪೂರಕವಾಗಿರದಿದ್ದರೆ ಗುಜರಾತ್ ಹೈಕೋರ್ಟ್‌ನ ಮೇಲಿನ ಪೀಠದ ಮುಂದೆ ಮೇಲ್ಮನವಿಯನ್ನು ಸಲ್ಲಿಸುವ ಆಯ್ಕೆಯನ್ನು ರಾಹುಲ್ ಗಾಂಧಿ ಹೊಂದಿದ್ದಾರೆ. ಈ ಹಿಂದೆ ಮೋದಿ ಸರ್‌ನೇಮ್ ಕುರಿತ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಗುಜರಾತ್ ಹೈಕೋರ್ಟ್ 2 ವರ್ಷದ ಶಿಕ್ಷೆಯನ್ನು ವಿಧಿಸಿತ್ತು. ಇದರ ಬೆನ್ನಲ್ಲೇ ತರಾತುರಿಯಾಗಿ ಲೋಕಸಭಾ ಸ್ಪೀಕರ್ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಿ ಅನರ್ಹಗೊಳಿಸಿದ್ದರು.ಒಂದು ವೇಳೆ ಅವರ ಶಿಕ್ಷೆಗೆ ಕೋರ್ಟ್ ತಡೆಯಾಜ್ಞೆ ನೀಡಿದಲ್ಲಿ ಅವರ ಅನರ್ಹತೆ ಕೂಡ ರದ್ದಾಗಲಿದೆ.

Post a Comment