Karnataka BJP: ಯಾರಾಗ್ತಾರೆ ರಾಜ್ಯಾಧ್ಯಕ್ಷ? ವಿಪಕ್ಷಕ್ಕೆ ಲೀಡರ್ ಯಾರು? ಬೊಮ್ಮಾಯಿ, ಯತ್ನಾಳ್​ ಬಿಟ್ಟು ನಾಳೆ ಅಚ್ಚರಿ ಹೆಸರು?


 ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ನಾಳೆ ದೆಹಲಿಗೆ ತೆರಳಿದ್ದು, ಮಧ್ಯಾಹ್ನ ಮೂರು ಗಂಟೆಗೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆಗೆ ಸಭೆ ನಡೆಸಲಿದ್ದಾರೆ.
ಬೆಂಗಳೂರ: ರಾಜ್ಯ ರಾಜಕೀಯದಲ್ಲಿ ಈಗ ವಿರೋಧ ಪಕ್ಷದ ಸ್ಥಾನದಲ್ಲಿರುವವರಿಗೆ ಸುಗ್ಗಿ ಕಾಲ ಅಂತಲೇ ಹೇಳಬಹುದು. ಏಕೆಂದರೆ ಆಡಳಿತ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಲು, ಸರ್ಕಾರದ ವಿರುದ್ದ ಚಾಟಿ ಬೀಸೋಕೆ ದಿನಕ್ಕೆ ಹತ್ತು ವಿಚಾರಗಳು ಸಿಗುತ್ತಿವೆ.
ಆದರೆ ಹಾಗೆ ಚಾಟಿ ಬೀಸಬೇಕಿದ್ದ ಬಿಜೆಪಿ ಪಾಡು ಈಗ ಗೊಂದಲದ ಗೂಡಾಗಿದೆ. ಇದಕ್ಕೆ ಬ್ರೇಕ್​ ಹಾಕಲು ನಾಳೇ ದೆಹಲಿಯಲ್ಲಿ ವರಿಷ್ಠರ ಜೊತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಜೊತೆ ಸಭೆ ನಡೆಸಲಿದ್ದಾರೆ ಅನ್ನೋ ಸುದ್ದಿಯೂ ಇದೆ.
ಬರ ಕರ್ನಾಟಕವನ್ನು ಬರ್ಬಾದ್ ಮಾಡುತ್ತಿದೆ. ಗ್ಯಾರಂಟಿಗಳು ಗೊಂದಲದ ಗೂಡಾಗಿವೆ. ಪಠ್ಯ ಬದಲಾಯಿತು, ಆದರೂ ರಾಜ್ಯ ಬಿಜೆಪಿ ಗಾಢ ನಿದ್ರೆಯಲ್ಲಿದ್ದಂತೆ ಕಾಣಿಸುತ್ತಿದೆ. ಅಧಿಕಾರಾವಧಿ ಮುಗಿದರೂ ಕಟೀಲ್ ರಾಜ್ಯಾಧ್ಯಕ್ಷ ಗಾದಿಯಲ್ಲಿ ಪಟ್ಟಾಭಿಷಿಕ್ತರಾಗಿದ್ದಾರೆ. ಸರ್ಕಾರ ಬಂದು ತಿಂಗಳು ಕಳೆದರೂ ವಿಪಕ್ಷ ನಾಯಕನ ಆಯ್ಕೆಯಾಗಿಲ್ಲ. ಆದರೆ ನಾಳೆ ಹೆಸರು ಘೋಷಿಸ್ತೀವಿ ಅಂತ ಬೊಮ್ಮಾಯಿ ಹೇಳಿದ್ದಾರೆ.
ಈ ನಡುವೆ ಬಿಜೆಪಿ ಕಾಲೆಳೆದಿರುವ ಕಾಂಗ್ರೆಸ್​, ತುರ್ತಾಗಿ ಕರ್ನಾಟಕ ವಿಧಾನಸಭೆಗೆ ವಿರೋಧಪಕ್ಷದ ನಾಯಕ ಬೇಕಾಗಿದ್ದಾರೆ ಎಂದು ಜಾಹೀರಾತು ರೂಪದ ಪೋಸ್ಟರ್ ಹಂಚಿಕೊಂಡಿದೆ.
ಬಿಜೆಪಿ ಶಿಸ್ತು ಕ್ರಮದ ಬಗ್ಗೆ ಪ್ರಸ್ತಾಪಿಸಿ ಪ್ರತಾಪ್ ಸಿಂಹರನ್ನು ಟ್ಯಾಗ್ ಮಾಡಿದ್ದ ಕಾಂಗ್ರೆಸ್‌ಗೆ ಯತ್ನಾಳ್ ಠಕ್ಕರ್ ಕೊಟ್ಟಿದ್ದಾರೆ. ನನ್ನನ್ನು ಟ್ಯಾಗ್ ಮಾಡಿದರೆ ಜಾಡಿಸ್ತೀನಿ ಅಂತ, ಹೆಸರು ಬರೆಯದೇ ತಪ್ಪಿಸಿಕೊಳ್ಳಬೇಡಿ ಎಂದು ಕಿಡಿಕಾರಿದ್ದಾರೆ.
ಇತ್ತ ಬಿಜೆಪಿ ಆಂತರಿಕ ಜಗಳದ ಮಧ್ಯೆ ಯಡಿಯೂರಪ್ಪ ಮನೆಗೆ ತೆರಳಿದ ರೇಣುಕಾಚಾರ್ಯ ಮಾತುಕತೆ ನಡೆಸಿದ್ದಾರೆ. ಅಚ್ಚರಿ ಅಂದರೆ ನೋಟಿಸ್​ ಕೊಟ್ಟಿದ್ದರೂ, ಪಕ್ಷದ ಬಗ್ಗೆ ಮಾತನಾಡಬೇಡಿ ಅಂದರೂ ಯಡಿಯೂರಪ್ಪ ಭೇಟಿ ಬಳಿಕ ಮತ್ತೆ ರೆಬೆಲ್​​​ ಆಗಿದ್ದಾರೆ ಕ್ರಿಯೇಟಿವ್​ ರಾಜಕಾರಣಿ.
ಈ ಎಲ್ಲದರ ನಡುವೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ನಾಳೆ ದೆಹಲಿಗೆ ತೆರಳಿದ್ದು, ಮಧ್ಯಾಹ್ನ ಮೂರು ಗಂಟೆಗೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆಗೆ ಸಭೆ ನಡೆಸಲಿದ್ದಾರೆ. ಈ ವೇಳೆ ವಿಪಕ್ಷ ನಾಯಕನ ಆಯ್ಕೆ, ನೂತನ ರಾಜ್ಯಾಧ್ಯಕ್ಷರ ನೇಮಕ ಸೇರಿದಂತೆ ಪ್ರಸ್ತುತ ರಾಜ್ಯ ಬಿಜೆಪಿಯ ಗೊಂದಲಗಳ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.

Post a Comment

Previous Post Next Post