France Riots: 17ರ ಬಾಲಕನ ಹತ್ಯೆಯಿಂದ ಫ್ರಾನ್ಸ್ ಧಗಧಗ! ಇದುವರೆಗೂ 13 ಸಾವಿರ ಮಂದಿ ಅರೆಸ್ಟ್!


 ಫ್ರಾನ್ಸ್ ಗಲಾಟೆ (ಕೃಪೆ: Internet)

17 ವರ್ಷದ ಬಾಲಕನ ಹತ್ಯೆಯಿಂದ ಫ್ರಾನ್ಸ್ ದೇಶ ಧಗ ಧಗ ಹೊತ್ತಿ ಉರಿಯುತ್ತಿದೆ. ಹಲವೆಡೆ ಪೊಲೀಸ್ ಬ್ಯಾರಿಕೇಡ್ಗಳನ್ನು ಮುರಿದು ಹಾಕಿ, ಸಿಕ್ಕ ಸಿಕ್ಕ ವಾಹನಗಳಿಗೆ ಹಾಗೂ ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.ಪ್ಯಾರಿಸ್, ಫ್ರಾನ್ಸ್: 17 ವರ್ಷದ ಬಾಲಕನ ಹತ್ಯೆಯಿಂದ ಫ್ರಾನ್ಸ್ (France) ದೇಶ ಧಗ ಧಗ ಹೊತ್ತಿ ಉರಿಯುತ್ತಿದೆ. 17 ವರ್ಷದ ವಲಸಿಗ ಬಾಲಕ ನಹೆಲ್ (Nahel) ಎಂಬಾತನ ಸಾವಿನಿಂದ ಫ್ರಾನ್ಸ್‌ನಲ್ಲಿ ಗಲಾಟೆ ಶುರುವಾಗಿದೆ. ಟ್ರಾಫಿಕ್ ನಿಲುಗಡೆಯ ಸಮಯದಲ್ಲಿ ನಾಂಟೆರ್ರೆಯಲ್ಲಿ ಫ್ರೆಂಚ್ ಪೋಲೀಸ್ (French police) ಅಧಿಕಾರಿಯೊಬ್ಬರು ಬಾಲಕ ನಹೆಲ್‌ಗೆ ಕಾರು (car) ನಿಲ್ಲಿಸುವಂತೆ ಸೂಚಿಸಿದ್ದಾರೆ. ಆತ ಕಾರು ನಿಲ್ಲಿಸದೇ ಹೋದಾಗ ಪೊಲೀಸ್ ಅಧಿಕಾರಿ ಆತನ ಮೇಲೆ ಗುಂಡು ಹಾರಿಸಿದ್ದಾನೆ. ಹೀಗಾಗಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಇದರಿಂದಾಗಿ ಉಂಟಾದ ಗಲಾಟೆ, ಇದೀಗ ದೇಶವ್ಯಾಪಿ ಹಬ್ಬಿದೆ. ದೇಶಾದ್ಯಂತ ಪ್ರತಿಭಟನೆ (nationwide protest) ಇಂದು 4ನೇ ದಿನಕ್ಕೆ ಕಾಲಿಟ್ಟಿದೆ. ನಗರದ ಪ್ರಮುಖ ಬೀದಿ ಬೀದಿಗಳಲ್ಲಿ ದಂಗೆಕೋರರು ಗಲಾಟೆ ನಡೆಸುತ್ತಿದ್ದಾರೆ. ಹಲವೆಡೆ ಪೊಲೀಸ್‌ ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿ, ಸಿಕ್ಕ ಸಿಕ್ಕ ವಾಹನಗಳಿಗೆ ಹಾಗೂ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. 45 ಸಾವಿರ ಪೊಲೀಸರ ನಿಯೋಜನೆಪ್ಯಾರಿಸ್‌ನ ಉಪನಗರವಾದ ನಾಂಟೆರೆಸ್‌ನಲ್ಲಿ ಅಲ್ಜೀರಿಯನ್ ಮೂಲದ ನಹೆಲ್ ಎಂಬ 17 ವರ್ಷದ ಹದಿಹರೆಯದ ಬಾಲಕನ ಹತ್ಯೆಯಿಂದ ಪರಿಸ್ಥಿತಿ ಬಿಗಡಾಯಿಸಿದೆ. ಫ್ರೆಂಚ್ ಸರ್ಕಾರವು ಪರಿಸ್ಥಿತಿ ಕಂಟ್ರೋಲ್ ಮಾಡಲು ಹೆಣಗಾಡುತ್ತಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಸುಮಾರು 45,000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 2 ಸಾವಿರ ವಾಹನಗಳು ಸುಟ್ಟು ಭಸ್ಮಕನಿಷ್ಠ 492 ಕಟ್ಟಡಗಳು ಹಾನಿಗೊಳಗಾಗಿವೆ, 2,000 ವಾಹನಗಳು ಸುಟ್ಟುಹೋಗಿವೆ. ಇನ್ನು 3,880 ಪ್ರದೇಶಗಳಲ್ಲಿ ಬೆಂಕಿ ಹೊತ್ತಿ ಉರಿದಿದೆ ಎಂದು ಫ್ರೆಂಚ್ ಸರ್ಕಾರ ಹೇಳಿದೆ. ಇದನ್ನೂ ಓದಿ: Teesta Setalvad: ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್, ಶರಣಾಗುವಂತೆ ತೀಸ್ತಾ ಸೆಟಲ್ವಾಡ್‌ಗೆ ಆದೇಶಸುಮಾರು 13 ಸಾವಿರ ಮಂದಿ ಬಂಧನಸತತ ನಾಲ್ಕನೇ ರಾತ್ರಿ ಗಲಭೆಯಲ್ಲಿ ರಾಷ್ಟ್ರವ್ಯಾಪಿ ಸುಮಾರು 13 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಫ್ರೆಂಚ್ ಸರ್ಕಾರ ಶನಿವಾರ ಹೇಳಿದೆ.ಹಳೆ ಬಂದರು ಪ್ರದೇಶದಲ್ಲಿ ಸ್ಫೋಟಮಾರ್ಸಿಲ್ಲೆಯ ಹಳೆಯ ಬಂದರು ಪ್ರದೇಶದಲ್ಲಿ ಸ್ಫೋಟ ನಡೆಸಲಾಗಿದೆ ಅಂತ ವರದಿಯಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ನಗರ ಅಧಿಕಾರಿಗಳು ಹೇಳಿದ್ದಾರೆ. ಸೆಂಟ್ರಲ್ ಮಾರ್ಸಿಲ್ಲೆಯಲ್ಲಿ ಗಲಭೆಕೋರರು ಬಂದೂಕು ಅಂಗಡಿಯನ್ನು ಲೂಟಿ ಮಾಡಿದರು ಮತ್ತು ಕೆಲವು ಬೇಟೆಯ ರೈಫಲ್‌ಗಳನ್ನು ಕದ್ದಿದ್ದಾರೆ. ಆದರೆ ಅದರಲ್ಲಿ ಯಾವುದೇ ಮದ್ದುಗುಂಡುಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನೂ ಓದಿ: Modi-Putin: ಮೇಕ್‌ ಇನ್ ಇಂಡಿಯಾಗೆ ಪುಟಿನ್ ಮೆಚ್ಚುಗೆ, ಮೋದಿ ಬೆಸ್ಟ್ ಫ್ರೆಂಡ್ ಎಂದ ರಷ್ಯಾ ಅಧ್ಯಕ್ಷ!ಇಮ್ಯಾನುಯೆಲ್ ಮ್ಯಾಕ್ರನ್ ಸರ್ಕಾರಕ್ಕೆ ಸಂಕಷ್ಟಹದಿಹರೆಯದವರ ಮೇಲೆ ಮಾರಣಾಂತಿಕ ಪೊಲೀಸ್ ಗುಂಡಿನ ದಾಳಿಯ ನಂತರ ಫ್ರಾನ್ಸ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಹೆಚ್ಚಾಗಿವೆ. ಈ ಹಿಂದೆ 2018 ರಲ್ಲಿ ಪ್ರಾರಂಭವಾದ ಹಳದಿ ವೆಸ್ಟ್ ಪ್ರತಿಭಟನೆಯ ನಂತರ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ನಾಯಕತ್ವದ ಸರ್ಕಾರವು ಇದೀಗ ತೀವ್ರ ಬಿಕ್ಕಟ್ಟಿಗೆ ಸಿಲುಕಿವೆ. ಮಾರ್ಸೆಲ್ಲೆ, ಲಿಯಾನ್, ಟೌಲೌಸ್, ಸ್ಟ್ರಾಸ್‌ಬರ್ಗ್ ಮತ್ತು ಲಿಲ್ಲೆ ಮತ್ತು ಪ್ಯಾರಿಸ್‌ನಂತಹ ಹಲವಾರು ಫ್ರೆಂಚ್ ನಗರಗಳಲ್ಲಿ ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ.

Post a Comment

Previous Post Next Post