ವಾಹನ ಪ್ರಯಾಣಿಕರು (ಸಾಂದರ್ಭಿಕ ಚಿತ್ರ)
ವಾಹನ ದಂಡ ಕಟ್ಟಲು ಬರೋಬ್ಬರಿ 50 ಶೇಕಡಾ ರಿಯಾಯಿತಿ ಘೋಷಣೆ ಮಾಡಲಾಗಿದೆ. ದಂಡದ ಅರ್ಧದಷ್ಟು ಹಣ ತುಂಬಲು ವಾಹನ ಸವಾರರಿಗೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು: ಟ್ರಾಫಿಕ್ ದಂಡ ಪಾವತಿ (Traffic Fine) ಮಾಡಲು ಸಾರಿಗೆ ಇಲಾಖೆ ಮತ್ತೊಮ್ಮೆ ರಿಯಾಯಿತಿ (Traffic Fine Discount) ಘೋಷಿಸಿ ಆದೇಶಿಸಿದೆ. ಈ ಮೂಲಕ ರಾಜ್ಯದ ವಾಹನ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.
ವಾಹನ ದಂಡ ಕಟ್ಟಲು ಬರೋಬ್ಬರಿ 50 ಶೇಕಡಾ ರಿಯಾಯಿತಿ ಘೋಷಣೆ ಮಾಡಲಾಗಿದೆ. ದಂಡದ ಅರ್ಧದಷ್ಟು ಹಣ ತುಂಬಲು ವಾಹನ ಸವಾರರಿಗೆ ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 9ರವರೆಗೆ ಟ್ರಾಫಿಕ್ ದಂಡ ಪಾವತಿ ಮಾಡಲು ರಿಯಾಯಿತಿ ಘೋಷಣೆ ಮಾಡಲಾಗಿದೆ.
ಆನ್ಲೈನ್ನಲ್ಲೂ ಕಟ್ಟಬಹುದು ದಂಡ
ನೀವು ಆನ್ಲೈನ್ನಲ್ಲೂ ಕೂಡ ನಿಮ್ಮ ಟ್ರಾಫಿಕ್ ದಂಡವನ್ನು ಕಟ್ಟಬಹುದು. ಸಾಮಾನ್ಯವಾಗಿ ನಮಗೆ ಸಾರಿಗೆ ನಿಯಮ ಉಲ್ಲಂಘನೆ ಮಾಡಿದಾಗ ಹಾಕಲಾಗುವ ದಂಡ ಚಲನ್ ನಮಗೆ ಆನ್‌ಲೈನ್ ಮೂಲಕವೂ ಲಭ್ಯವಾಗಲಿದೆ.
ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಲು ಬಾಕಿ ಇರುವವರು ಮತ್ತು ಪ್ರಕರಣ ಕೋರ್ಟ್ನಲ್ಲಿ ಇದ್ದರೆ ಅಂತಹವರಿಗೆ ಸಾರಿಗೆ ಇಲಾಖೆ ಭರ್ಜರಿ ರಿಯಾಯಿತಿ ನೀಡಿದೆ.
ಇದನ್ನೂ ಓದಿ: Bengaluru News: ಮೆಟ್ರೋದಲ್ಲಿ ಮದ್ಯ ಸಾಗಿಸಬಹುದೇ? ಇಲ್ಲಿದೆ ಮಾಹಿತಿ
ಇಲೆಕ್ಟ್ರಾನಿಕ್ ಚಲನ್ ಸಿಸ್ಟಮ್ ಬಳಸಿಕೊಂಡು ಈ ದಾಖಲೆಯನ್ನು ಜನರೇಟ್ ಮಾಡಲಾಗಿರುತ್ತದೆ. ನಾಗರಿಕರಿಗೆ ದಂಡ ಪಾವತಿ ವಿಚಾರದಲ್ಲಿಯೂ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆನ್‌ಲೈನ್ ದಂಡ ಪಾವತಿ ವ್ಯವಸ್ಥೆಯನ್ನು ಆರಂಭ ಮಾಡಿದೆ.
ಮೊದಲು ನೀವು ಸಾರಿಗೆ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಬೇಕು. ವೆಬ್ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ. ನಂತರ ನಿಮ್ಮ ಚಲನ್ ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕು.
ಇದನ್ನೂ ಓದಿ: Bengaluru News: ʼಬ್ರ್ಯಾಂಡ್ ಬೆಂಗಳೂರುʼ ಅಭಿಪ್ರಾಯ ನೀಡಲು ಅವಧಿ ವಿಸ್ತರಣೆ; ಛಾನ್ಸ್ ಮಿಸ್ ಮಾಡ್ಬೇಡಿ!
ಟ್ರಾಫಿಕ್ ನಿಯಮ ಉಲ್ಲಂಘನೆಯ ಮಾಹಿತಿ, ಚಲನ್ ಪರಿಶೀಲನೆ ಮಾಡಿ.ಕೊನೆಯದಾಗಿ ದಂಡ ಪಾವತಿಸಲು proceed ಮೇಲೆ ಕ್ಲಿಕ್ ಮಾಡಿ ದಂಡ ಪಾವತಿಸಿ. ಮತ್ತೆ ದಂಡ ಕಟ್ಟೋದು ಸುಲಭ ಅಂತ ಮತ್ತೆ ಮತ್ತೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಬೇಡಿ.

Post a Comment