ಮಾಜಿ ಸಚಿವ ಕೆಎಸ್ ಈಶ್ವರಪ್ಪ
ಇನ್ನೊಂದು ಧರ್ಮವನ್ನ ಓಲೈಸಲು ಮತ್ತೊಂದು ಧರ್ಮದ ಭಾವನಗೆ ಧಕ್ಕೆ ತರಬೇಡಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ಕಿಡಿಕಾರಿದ್ದಾರೆ.ಬೆಂಗಳೂರು: ಬಿಜೆಪಿ (BJP) ಪಕ್ಷಕ್ಕೆ ಕಾಂಗ್ರೆಸ್ನಿಂದ (Congress) ಬಂದ ನಾಯಕರಿಂದಲೇ ಪಕ್ಷದಲ್ಲಿ ಅಶಿಸ್ತು ಉಂಟಾಗುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಅವರು ಇಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ನಾನು ಬಾಂಬೆ ಬಾಯ್ಸ್ (Bombay Boys) ಎಂಬ ಮಾತನ್ನೂ ಬಳಸಿಲ್ಲ. ಅವರು ಬಂದಿದ್ದರಿಂದಲೇ ಸರ್ಕಾರ (Govt) ಬಂದಿದೆ ಅಂತ ಹೇಳಿದ್ದೇನೆ, ಅವರಿಂದ ಯಾವ ಅಶಿಸ್ತು ನಡೆದಿಲ್ಲ. ಅವರ ಬಗ್ಗೆ ಯಾವುದೇ ಕಾರಣಕ್ಕೂ ಒಂದೇ ಒಂದು ಆಪಾದನೆ ಮಾಡಿಲ್ಲ, ಮಾಡೋದು ಇಲ್ಲ ಎಂದು ಹೇಳಿದ್ದಾರೆ.ಕಾಂಗ್ರೆಸ್‌ನ ಮೋಸ್ ಗ್ಯಾರೆಂಟಿಗಳುಒಂದು ರೀತಿಯಲ್ಲಿ ವರ್ಕೌಟ್ ಆಯ್ತು, ಫಲಿತಾಂಶವನ್ನ ಕೆಟ್ಟ ಕನಸು ಅಂದುಕೊಂಡಿದ್ದೇವೆ. ಮುಂದೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದು ಮೋದಿ ಪ್ರಧಾನಿ ಮಾಡುವುದು ನಮ್ಮ ಗುರಿ. ಪಕ್ಷ ಸಂಘಟನೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಸಾಕಷ್ಟು ಶ್ರಮ ಹಾಕ್ತೀವಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬರುವವರೆಗೂ ವಿಶ್ರಮಿಸುವುದಿಲ್ಲ. ಅಲ್ಲಲ್ಲಿ ಒಬ್ಬರು ನಾಯಕರು ಆಂತರಿಕ ವಿಚಾರ ಮಾತನಾಡಿರುವ ಬಗ್ಗೆ ಬೇಸರ ಇದೆ.ಇದನ್ನೂ ಓದಿ: Cauvery water: ಮಳೆ ಬರ್ತಿಲ್ಲ, ಕಾವೇರಿ ಖಾಲಿ; ರಾಜಧಾನಿ ಬೆಂಗಳೂರಿಗೆ ಕಾವೇರಿ ನೀರಿನ ಅಭಾವ!ಜೋಶಿ, ಕಟೀಲ್ ಎಲ್ಲರೂ ಕುಳಿತು ಮಾತನಾಡಿದ್ದಾರೆ. ನಮ್ಮಲ್ಲಿ ಗೊಂದಲದ ಗೂಡಾಗಿರುವುದು ಇಂದು ಮುಕ್ತಾಯವಾಗಿದೆ. ಯಾರೂ ಬಹಿರಂಗವಾಗಿ ಹೇಳಿಕೆ ಕೊಡುವಂತಿಲ್ಲ. ನಮ್ಮ ಪಕ್ಷದಲ್ಲಿ ಇನ್ಮುಂದೆ ಅಶಿಸ್ತು ಇರುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಅಕ್ಕಿ ಕೊಡಲಿಕ್ಕೆ ಆಗಲ್ಲ ಅಂದಮೇಲೆ ಕೇಂದ್ರ ಕೊಡುವ ಅಕ್ಕಿಯನ್ನ ನಿಮ್ಮ ಪ್ರಣಾಳಿಕೆಗೆ ಏಕೆ ಸೇರಿಸಿದ್ರಿ, ಕೇಂದ್ರ ಕೊಡುವ ಐದು ಕೆಜಿಗೂ ನಿಮಗೂ ಸಂಬಂಧವಿಲ್ಲ. ಮಾತಿನಂತೆ ಹತ್ತು ಕೆಜಿ ಅಕ್ಕಿಯ ಹಣವನ್ನ ಜನರಿಗೆ ಕೊಡಿ. ಹಣದ ಮೂಲಕ ರಾಜ್ಯದ ಜನರಿಗೆ ಟೋಪಿ ಹಾಕಬೇಕು.ಐದು ಕೆಜಿ ಅಕ್ಕಿ, ಐದು ಕೆಜಿಅಕ್ಕಿ ಹಣ ಕೊಡೋದು ಜನರಿಗೆ ಮಾಡುವ ಮೋಸ. ಗೃಹಲಕ್ಷ್ಮಿ ಯೋಜನೆಯ ಮನೆಯೊಡತಿಗೆ ಮೋಸ ಮಾಡಿದ್ದೀರಿ. ಉಚಿತ ಪ್ರಯಾಣದಲ್ಲಿ ಗ್ರಾಮೀಣ ಮಹಿಳೆಯರಿಗೆ ಮೋಸ ಮಾಡಿದ್ದೀರಿ. ಗ್ರಾಮೀಣ ಭಾಗಕ್ಕೆ ಸರಿಯಾಗಿ ಬಸ್ ಸೌಲಭ್ಯವಿಲ್ಲ. ಎಲ್ಲಿ ನೋಡಿದರೂ ನೂಕು ನುಗ್ಗಲು. ಆಟೋ ಡ್ರೈವರ್‌ಗಳ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಎಳೆದಿದ್ದೀರಾ. ಇದನ್ನ ನೋಡಿದರೆ ಚುನಾವಣೆಯಲ್ಲಿ ಮೋಸ ಮಾಡಿ ಆಡಳಿತಕ್ಕೆ ಬಂದಿರುವುದು ಸತ್ಯ ಎಂದು ವಾಗ್ದಾಳಿ ನಡೆಸಿದರು.ನಾವು ಸೋಲನ್ನು ಒಪ್ಪಿಕೊಳ್ಳುತ್ತೇವೆ, ಆದರೆ ನೀವು ಕೊಟ್ಟ ಭರವಸೆ ಈಡೇರಿಸುವವರೆಗೂ ಬಿಡಲ್ಲ. ಸದನದ ಒಳಗೆ ಶಾಸಕರು ಹೋರಾಟ ಮಾಡುತ್ತಾರೆ. ಗಾಂಧಿ ಪ್ರತಿಮೆ ಎದುರು ನಾವು ಬಿಎಸ್‌ವೈ ಧರಣಿ ಕೂರ್ತೀವಿ. ರಾಜ್ಯದ ಜನ ಮೋಸಗಾರರಿಗೆ ಮತ್ತೆ ಬೆಂಬಲ ನೀಡುತ್ತಾರೆ ಎಂದುಕೊಳ್ಳಬೇಡಿ.ನೀವು ಕೊಟ್ಟಿರುವ ಐದೂ ಗ್ಯಾರೆಂಟಿಗಳನ್ನ ವಿತ್ ಡ್ರಾ ಮಾಡಿ. ಮತಾಂತರ ನಿಷೇಧ ಕಾಯ್ದೆ ವಾಪಾಸ್ ಪಡೆಯಬೇಡಿ, ಯಾರನ್ನೋ ಸಂತೃಪ್ತಿ ಪಡಿಸಲು ಧರ್ಮ ವಿರೋಧಿ ಮಾಡಬೇಡಿ. ಎಲ್ಲದರಲ್ಲೂ ದ್ವೇಷದ ರಾಜಕಾರಣ ಮಾಡಬೇಡಿ. ಇನ್ನೊಂದು ಧರ್ಮವನ್ನ ಓಲೈಸಲು ಮತ್ತೊಂದು ಧರ್ಮದ ಭಾವನಗೆ ಧಕ್ಕೆ ತರಬೇಡಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ಕಿಡಿಕಾರಿದರು

Post a Comment