ಸಿದ್ದರಾಮಯ್ಯ ಬಜೆಟ್
ರಾಜ್ಯ ಕಾಂಗ್ರೆಸ್ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು ನೂತನ ಸರ್ಕಾರದ ಮೊದಲ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಲಾಗಿದೆ.ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್ (Karnataka Budget 2023) ಅನ್ನು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಸಹಜವಾಗಿಯೇ ಜನರಿಂದ ಗ್ಯಾರಂಟಿ ಯೋಜನೆಗಳಿಗೆ (Congress Guarantee) ನೀಡಲಾಗುವ ಅನುದಾನದ ಬಗ್ಗೆ ಹತ್ತಾರು ಪ್ರಶ್ನೆಗಳು ಮೂಡಿದ್ದವು.ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು ನೂತನ ಸರ್ಕಾರದ ಮೊದಲ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳ ಪೈಕಿ ಗೃಹ ಜ್ಯೋತಿ ಯೋಜನೆಗೆ ವಾರ್ಷಿಕ ಅಂದಾಜು 13,910 ಕೋಟಿ ರೂಪಾಯಿ ವ್ಯಯವಾಗುವ ನಿರೀಕ್ಷೆಯಿದ್ದು, ಅನ್ನಭಾಗ್ಯ ಯೋಜನೆಗೆ ವಾರ್ಷಿಕ 10,000 ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು, ಗೃಹ ಲಕ್ಷ್ಮೀ ಯೋಜನೆಗೆ ವಾರ್ಷಿಕ 30,000 ಕೋಟಿ ಮತ್ತು ಶಕ್ತಿ ಯೋಜನೆಗೆಗಾಗಿ ವಾರ್ಷಿಕವಾಗಿ ಸುಮಾರು 4,000 ಕೋಟಿ ವೆಚ್ಚವಾಗುವ ನೀರಿಕ್ಷೆ ಇಡಲಾಗಿದೆಇದನ್ನೂ ಓದಿ: Karnataka Budget 2023: ಹೃದಯಾಘಾತ ತಡೆಯಲು ‘ಅಪ್ಪು’ ಹೆಸರಿನಲ್ಲಿ ಸ್ವಯಂಚಾಲಿತ 'ಆರೋಗ್ಯ ಯಂತ್ರ' ಘೋಷಣೆಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಜಾರಿಗೆ ಐದು ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದ್ದು, ಗೃಹ ಲಕ್ಷ್ಮಿ ಯೋಜನೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,166 ಕೋಟಿ ನಿಗದಿಪಡಿಸಲಾಗಿದೆ. ಉಚಿತ ವಿದ್ಯುತ್ ‘ಗೃಹಜ್ಯೋತಿ’ ಯೋಜನೆಗಾಗಿ ಇಂಧನ ಇಲಾಖೆಗೆ 22,773 ಕೋಟಿ ರೂಪಾಯಿ ಅನುದಾನ ನಿಗದಿ ಮಾಡಲಾಗಿದೆ. ಇನ್ನು ಅನ್ನಭಾಗ್ಯದ ಹತ್ತು ಕೆಜಿ ಅಕ್ಕಿ ಯೋಜನೆಗಾಗಿ ಆಹಾರ ಇಲಾಖೆಗೆ 10,460 ಕೋಟಿ ನಿಗದಿಪಡಿಸಲಾಗಿದೆ. ಇನ್ನು ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ಗಾಗಿ ಸಾರಿಗೆ ಇಲಾಖೆಗೆ 16,638 ಕೋಟಿ ರೂ ನಿಗದಿ ಪಡಿಸಲಾಗಿದ್ದು, ಯುವಭತ್ಯೆ ಯೋಜನೆಗೆ ಕೌಶಲ್ಯಾಭಿವೃದ್ಧಿ ಇಲಾಖೆಗೆ (ಇತರೆ ವರ್ಗದಲ್ಲಿ) ಅನುದಾನ ಸೇರಿಸಲಾಗಿದೆ ಯೋಜನಾ ವೆಚ್ಚಗಳಿಗೆ ಸಂಪನ್ಮೂಲ ಕ್ರೋಢೀಕರಣ ಎಲ್ಲಿಂದ? ಎಷ್ಟು?ಗ್ಯಾರಂಟಿ ಮತ್ತು ಯೋಜನಾ ವೆಚ್ಚಗಳಿಗೆ ಸಂಪನ್ಮೂಲ ಕ್ರೋಢೀಕರಣದ ಲೆಕ್ಕಾಚಾರವನ್ನೂ ಮಾಡಲಾಗಿದ್ದು, ರಾಜ್ಯ ತೆರಿಗೆ ಆದಾಯದಿಂದ - 54%, ಸಾಲದಿಂದ - 26%, ಕೇಂದ್ರದ ತೆರಿಗೆ ಪಾಲಿನಿಂದ - 12%, ಕೇಂದ್ರ ಸರ್ಕಾರದ ಸಹಾಯ ಧನದಿಂದ - 4% ಮತ್ತು ರಾಜ್ಯ ತೆರಿಗೆಯೇತರ ರಾಜಸ್ವದಿಂದ - 4% ಸಂಪನ್ಮೂಲ ಕ್ರೋಢೀಕರಣವನ್ನು ನಿರೀಕ್ಷೆ ಮಾಡಲಾಗಿದೆ.ಇದನ್ನೂ ಓದಿ: Karnataka Budget 2023: ಸಿದ್ದರಾಮಯ್ಯ ಲೆಕ್ಕ -2023ರಲ್ಲಿ ಮೀನುಗಾರಿಕಾ ವಲಯಕ್ಕೆ ಸಿಕ್ಕಿದ್ದೇನು? ಇಲ್ಲಿದೆ ಡೀಟೇಲ್ಸ್‌ಮೀನುಗಾರಿಕಾ ವಲಯಕ್ಕೂ ಅನುದಾನಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮೀನುಗಾರಿಕಾ ವಲಯಕ್ಕೂ ಅನುದಾನವನ್ನು ಘೋಷಣೆ ಮಾಡಿದೆ. ಈ ಬಾರಿ ಮೀನುಗಾರ ಮಹಿಳೆಯರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯದ ಮಿತಿಯನ್ನು ಹೆಚ್ಚಿಸಲಾಗಿದ್ದು, ಮೀನುಗಾರ ಮಹಿಳೆಯರಿಗೆ ಬ್ಯಾಂಕ್‌ಗಳಲ್ಲಿ ನೀಡಲಾಗುತ್ತಿದ್ದ ಬಡ್ಡಿ ರಹಿತ ಸಾಲದ ಮಿತಿಯನ್ನು ಮೂರು ಲಕ್ಷ ರೂಪಾಯಿಗೆ ಏರಿಸಲಾಗಿದೆ. ಇನ್ನು, ಮೀನುಗಾರಿಕಾ ದೋಣಿಗಳಿಗೆ ನೀಡಲಾಗುತ್ತಿದ್ದ ರಿಯಾಯಿತಿ ದರದ ಡೀಸೆಲ್‌ನ ಮಿತಿಯನ್ನು 2 ಲಕ್ಷ ಕಿಲೋ ಮೀಟರ್‌ವರೆಗೆ ಹೆಚ್ಚಿಸಲಾಗಿದೆ. ಇದಕ್ಕಾಗಿ 250 ಕೋಟಿ ರೂಪಾಯಿ ಅನುದಾನವನ್ನು ನಿಗದಿಪಡಿಸಲಾಗಿದೆ. ಇನ್ನು ಮೀನುಗಾರಿಕಾ ದೋಣಿಗಳ ಸೀಮೆ ಎಣ್ಣೆ ಇಂಜಿನ್‌ಗಳನ್ನು ಪೆಟ್ರೋಲ್ ಅಥವಾ ಡೀಸೆಲ್ ಇಂಜಿನ್‌ಗಳನ್ನಾಗಿ ಪರಿವರ್ತಿಸಲು ತಲಾ 50 ಸಾವಿರ ರೂಪಾಯಿ ಸಹಾಯಧನ ಕೊಡಲಾಗುವುದು. ಇದಕ್ಕಾಗಿ 5 ಕೋಟಿ ರೂಪಾಯಿ ಅನುದಾನವನ್ನು ನಿಗಪಡಿಸಲಾಗಿದೆ.

Post a Comment