Billionaire: 40 ಸಾವಿರ ಕೋಟಿ ಆಸ್ತಿ ಬಿಟ್ಟು ಮಠ ಸೇರಿಕೊಂಡ ಬಿಲಿಯನೇರ್‌ ಪುತ್ರ


 ಅಜಾನ್ ಸಿರಿಪಾನ್ಯೋ

 ಇಂದು ನಾವು 40,000 ಕೋಟಿ ರೂಗಳನ್ನು ದಾನ ಮಾಡಿ ಸನ್ಯಾಸಿಯಾದ ಶ್ರೀಮಂತನೊಬ್ಬನ ಕಥೆಯನ್ನು ಹೇಳುತ್ತಿದ್ದೇವೆ. ಈ ಸನ್ಯಾಸಿಯ ಹೆಸರು ಸಿರಿಪಾನ್ಯೊ. ಇವರು ಕೋಟ್ಯಾಧಿಪತಿ ಆನಂದ ಕೃಷ್ಣನ್ ಅವರ ಏಕೈಕ ಪುತ್ರರಾಗಿದ್ದಾರೆ.ಕೆಲವರು ಯಾವ ಸಮಯದಲ್ಲಿ ಏನಾಗುತ್ತಾರೆ ಎಂದು ಹೇಳಲು ಸಾಧ್ಯವೇ ಇಲ್ಲ.ಅದೇ ರೀತಿ ಇಲ್ಲೊಬ್ಬರ ಸುದ್ದಿ ಇದೆದೆ ನೋಡಿ. ಇವತ್ತು ನಾವು ನಿಮಗೆ 40,000 ಕೋಟಿ ರೂಗಳನ್ನು ದಾನ ಮಾಡಿ ಸನ್ಯಾಸಿಯಾದ (Monk) ಶ್ರೀಮಂತನೊಬ್ಬನ(Rich) ಕಥೆಯನ್ನು ಹೇಳುತ್ತಿದ್ದೇವೆ. ಈ ಸನ್ಯಾಸಿಯ ಹೆಸರು ಸಿರಿಪಾನ್ಯೊ (Ajahn Siripanyo). ಇವರು ಕೋಟ್ಯಾಧಿಪತಿ ಆನಂದ ಕೃಷ್ಣನ್ (Ananda Krishnan) ಅವರ ಏಕೈಕ ಪುತ್ರರಾಗಿದ್ದಾರೆ.ಸನ್ಯಾಸತ್ವ ಸ್ವೀಕರಿಸಿದ ಬಿಲಿಯನೇರ್‌ ಪುತ್ರ ಆನಂದ ಕೃಷ್ಣನ್ ಅವರು ಒಬ್ಬ ಯಶಸ್ವಿ ಉದ್ಯಮಿ ಆಗಿದ್ದು, ಅವರ ಮಗ ಸಿರಿಪಾನ್ಯೊ ಕೇವಲ 18 ನೇ ವಯಸ್ಸಿನಲ್ಲಿ ಬೌದ್ಧ ಸನ್ಯಾಸಿಯಾಗಲು ನಿರ್ಧರಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದರು.ಐಷಾರಾಮಿ ಜೀವನವನ್ನು ತ್ಯಜಿಸಿದ ಸಿರಿಪಾನ್ಯೋ ಅವರಿಗೆ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗುವ ಎಲ್ಲ ಸೌಕರ್ಯಗಳು ಮತ್ತು ಸೌಲಭ್ಯಗಳು ಇತ್ತು. ಎಲ್ಲರಿಗೂ ತಿಳಿದಂತೆ ವೆನ್ ಅಜಾನ್ ಸಿರಿಪಾನ್ಯೋ ಒಬ್ಬ ಬಿಲಿಯನೇರ್ ಮಗ. ಅವರ ತಂದೆ ಆನಂದ ಕೃಷ್ಣನ್ ಅವರು ರೂ 40,000 ಕೋಟಿ ($ 5 ಬಿಲಿಯನ್) ನಿವ್ವಳ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇದನ್ನೂ ಓದಿ: ಅಂದು ಹಾಗೆ, ಇಂದು ಹೀಗೆ! ನಿತ್ಯಾನಂದನ ಕೈಲಾಸಕ್ಕೆ ನಟಿ ರಂಜಿತಾನೇ ಪ್ರಧಾನಿ!ಎಕೆ ಎಂದು ಕರೆಯಲ್ಪಡುವ ಅವರು ಟೆಲಿಕಾಂ ಉದ್ಯಮ ಜಗತ್ತಿನಲ್ಲಿ ಹೆಸರುವಾಸಿ ಆಗಿದ್ದು, ಅವರು ಭಾರತೀಯ ಫೋನ್ ಕಂಪನಿ ಏರ್‌ಸೆಲ್‌ನ ಮಾಲೀಕರಾಗಿದ್ದರು, ಇದು ಹಿಂದೊಮ್ಮೆ ಕ್ರಿಕೆಟ್ ದಂತಕಥೆ ಎಂಎಸ್ ಧೋನಿ ನೇತೃತ್ವದ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ ಪ್ರಾಯೋಜಕತ್ವ ನೀಡುತ್ತಿತ್ತು. ಒಟ್ಟಾರೆಯಾಗಿ, ಕೃಷ್ಣನ್ ಕನಿಷ್ಠ 9 ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ. ಅವರು ಗಳಿಸಿದ ಬೃಹತ್ ಸಂಪತ್ತು ಅವರನ್ನು ಮಲೇಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಆನಂದ್ ಕೃಷ್ಣನ್ ಅವರು ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತರಾಗಿದ್ದಾರೆ.ಅಜಾನ್ ಸಿರಿಪಾನ್ಯೋತಮಿಳು ಮೂಲದ ಟೆಲಿಕಾಂ ಉದ್ಯಮಿಯಾಗಿರುವ ಆನಂದ ಕೃಷ್ಣನ್ ಗೆ ಜನಿಸಿದ ಸಿರಿಪಾನ್ಯೊಗೆ ಲೌಕಿಕ ಜಗತ್ತಿನ ಆಗುಹೋಗುಗಳ ಕುರಿತು ಯಾವುದೇ ಆಸಕ್ತಿ ಇರಲಿಲ್ಲ. ಆದರೆ ಅವರನ್ನು ಟೆಲಿಕಾಂ, ಮಾಧ್ಯಮ, ತೈಲ ಮತ್ತು ಅನಿಲ, ರಿಯಲ್ ಎಸ್ಟೇಟ್ ಮತ್ತು ಉಪಗ್ರಹಗಳಲ್ಲಿ ವ್ಯಾಪಾರ ಆಸಕ್ತಿಗಳನ್ನು ಒಳಗೊಂಡಿರುವ ಆನಂದ್ ಕೃಷ್ಣನ್ ಅವರ ಮೆಗಾ-ಬಿಲಿಯನ್-ಡಾಲರ್ ಟೆಲಿಕಾಂ ಸಾಮ್ರಾಜ್ಯವನ್ನು ಮುನ್ನಡೆಸಲು ತರಬೇತಿ ನೀಡಿ ಸಿದ್ಧಗೊಳಿಸಲಾಗುತ್ತಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ವಿಧಿ ನಿರ್ಣಯ ಬೇರೆ ಆಗಿತ್ತು. ಅವರು ತಮ್ಮ ಐಷಾರಾಮಿ ಜೀವನವನ್ನು ತ್ಯಜಿಸಿ ಒಬ್ಬ ಭೌದ್ಧ ಸನ್ಯಾಸಿ ಆದರು.ಆನಂದ ಕೃಷ್ಣನ್ ಒಬ್ಬ ಬೌದ್ಧ ಧರ್ಮೀಯರು ಮತ್ತು ಸ್ವತಃ ಪ್ರಮುಖ ಲೋಕೋಪಕಾರಿ ಆಗಿದ್ದಾರೆ , ಶಿಕ್ಷಣ, ಆರೋಗ್ಯ, ಮಾನವೀಯ ಕಾರ್ಯಗಳು ಹೀಗೆ ಹತ್ತು ಹಲವಾರು ಕಾರಣಗಳಿಗೆ ಅಪಾರ ಪ್ರಮಾಣದ ದೇಣಿಗೆ ನೀಡುತ್ತಿದ್ದಾರೆ. ಇಂತಹ ಲೋಕೊಪಕಾರಿಯಾದ ಆನಂದ್ ಕೃಷ್ಣನ್ ಅವರ ಮಗ ಸಿರಿಪಾನ್ಯೊ ಕೇವಲ 18 ನೇ ವಯಸ್ಸಿನಲ್ಲಿ ಬೌದ್ಧ ಸನ್ಯಾಸಿಯಾಗಿ ಐಷಾರಾಮಿ ಬದುಕಿಗೆ ವಿದಾಯ ಹೇಳಿದರು. ಸನ್ಯಾಸಿ ಆಗುವ ಅವರ ನಿರ್ಧಾರವು ಸಂಪೂರ್ಣವಾಗಿ ಅವರ ವೈಯಕ್ತಿಕ ವಿಷಯವಾಗಿತ್ತು. . ತನ್ನ ತಂದೆಯ ಬಹುಕೋಟಿ ಸಾಮ್ರಾಜ್ಯವನ್ನು ನಡೆಸುವ ಬದಲು, ಸಿರಿಪನ್ಯೋ ಭಿಕ್ಷೆ ಬೇಡುತ್ತಾ ಸರಳತೆಯಿಂದ ಬದುಕಲು ನಿರ್ಧರಿಸಿದ್ದರು. ಆಸ್ತಿ ಎಲ್ಲಾ ತೊರೆದ ಸಿರಿಪಾನ್ಯೊಈಗಾಗಲೇ ಸಿರಿಪಾನ್ಯೊ ಅವರು ಪಿತ್ರಾರ್ಜಿತವಾಗಿ ಹೊಂದಿದ್ದ ಎಲ್ಲಾ ಸಂಪತ್ತನ್ನು ತ್ಯಜಿಸಿ ಸನ್ಯಾಸಿಯಾಗಿ ಕಾಡಿನಲ್ಲಿ ವಾಸಿಸಲು ನಿರ್ಧರಿಸಿ 2 ದಶಕಗಳು ಕಳೆದಿವೆ. ಅವರು ಥಾಯ್ಲೆಂಡ್‌ನ ಡಿಟಾವೊ ದಮ್ ಮಠದ ಮಠಾಧೀಶರಾಗಿದ್ದಾರೆ. ಸನ್ಯಾಸಿಯು ತನ್ನ ತಾಯಿಯ ಕಡೆಯಿಂದ ಥಾಯ್ ರಾಜಮನೆತನದ ವಂಶಸ್ಥನೆಂದು ಹೇಳಲಾಗಿದೆ. ಸಿರಿಪಾನ್ಯೊ ಅವರ ಹಿಂದಿನ ಜೀವನದ ಬಗ್ಗೆ ಹೆಚ್ಚಿನ ವಿವರಗಳಿಲ್ಲ ಆದರೆ ಅವರು ಯುಕೆಯಲ್ಲಿ ತನ್ನ 2 ಸಹೋದರಿಯರೊಂದಿಗೆ ಬೆಳೆದರು ಮತ್ತು 8 ಭಾಷೆಗಳನ್ನು ಮಾತನಾಡಬಲ್ಲರು ಎಂದು ವರದಿಯಾಗಿದೆ. ಇವರು ತಮಿಳು,ಥಾಯ್ ಇಂಗ್ಲೀಷ್ ಭಾಷೆ ಸೇರಿದಂತೆ ಒಟ್ಟು ಎಂಟು ಭಾಷೆಗಳನ್ನು ಸರಳವಾಗಿ ಸ್ಪಷ್ಟವಾಗಿ ಮಾತನಾಡುತ್ತಾರೆ.ನಲವತ್ತು ಸಾವಿರರೂಗಳಷ್ಟು ಆಸ್ತಿ ಇದ್ದರೂ ಅದನ್ನು ತ್ಯಾಗ ಮಾಡಿ ಸನ್ಯಾಸಿ ಆದ ಸಿರಿಪಾನ್ಯೊ ಈಗ ಒಂದು ಭೌದ್ಧ ಮಠದ ಮಠಾಧೀಶರಾಗಿದ್ದಾರೆ.

Post a Comment

Previous Post Next Post