2022 ರಲ್ಲಿ ಕನ್ನಡ ಚಿತ್ರರಂಗದ ಹಿರಿ ಪ್ರತಿಭಾವಂತ ಕಲಾವಿದರು ನಿಧನರಾಗಿದ್ದಾರೆ. ಬಣ್ಣದ ಲೋಕದಿಂದ ಕಣ್ಮರೆಯಾಗಿದ್ದಾರೆ.ಫೆಬ್ರವರಿ 14 ರಂದು ಕನ್ನಡ ಚಿತ್ರರಂಗದ ಹಿರಿಯ ನಟಿ ಹಾಗೂ ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಭಾರ್ಗವಿ ಅವರಿಗೆ 84 ವರ್ಷ ವಯಸ್ಸಾಗಿತ್ತು. ಭಾರ್ಗವಿ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.ಫೆ.19ರಂದು 89 ವರ್ಷದ ಕಲಾತಪಸ್ವಿ ರಾಜೇಶ್ ನಿಧನರಾಗಿದ್ದಾರೆ. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ರಾಜೇಶ್ ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.90 ವರ್ಷದ ಟಿ.ಆರ್.ಅಶ್ವತ್ಥನಾರಾಯಣ ಸಹ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಸಿನಿಮಾ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಮಿಂಚಿದ್ದರು.ಮೇ 6ರಂದು ಹಾಸ್ಯ ನಟ ಮೋಹನ್ ಜುನೇಜಾ ಲಿವರ್ ಸಮಸ್ಯೆಯಿಂದಾಗಿ ನಿಧನರಾಗಿದ್ದಾರೆ. ನೂರಾರು ಕನ್ನಡ ಸಿನಿಮಾದಲ್ಲಿ ಜನರನ್ನು ನಗಿಸಿದ್ದ ಕಲಾವಿದ ಇವರು.ಆಗಸ್ಟ್ 11ರಂದು 76 ವರ್ಷದ ಸ್ಯಾಂಡಲ್‍ವುಡ್ ನಿರ್ಮಾಪಕ ನರ್ಗೀಸ್ ಬಾಬು ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.ನವೆಂಬರ್ 8ರಂದು ಹಿರಿಯ ನಟ ಲೋಹಿತಾಶ್ವ ಅವರು ನಿಧನರಾದರು. ವಯೋಸಹಜ ಕಾಯಿಲೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 500ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.ನವೆಂಬರ್ 15ರಂದು ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಮುರಳಿ ಕೃಷ್ಣ ಅವರು ನಿಧನರಾದರು. ಹೃದಯಾಘಾತದಿಂದ ತಮ್ಮ ಬಾಳ ಪಯಣ ಮುಗಿಸಿದ್ದಾರೆ.ಕೆಜಿಎಫ್ ಸಿನಿಮಾ ಮೂಲಕ ಜನಪ್ರಿಯತೆ ಪಡೆದಿದ್ದ ತಾತಾ, ನಟ ಕೃಷ್ಣ ಜಿ. ರಾವ್ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಇದೇ ತಿಂಗಳು 7ರಂದು ನಿಧನರಾದರು.ಕನ್ನಡ ಚಿತ್ರರಂಗದ ಹಿರಿಯ ವಸ್ತ್ರ ವಿನ್ಯಾಸಕ, ಹಾಸ್ಯ ನಟ ಗಂಡಸಿ ನಾಗರಾಜ್ ಅವರು ಡಿ.12ರಂದು ನಿಧನರಾದರು. ನೂರಾರು ಸಿನಿಮಾಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದರು. ಗಂಡಸಿ ನಾಗರಾಜ್ ಅವರ ಎರಡು ಕಿಡ್ನಿಗಳು ಫೇಲ್ ಆಗಿದ್ದವು.

Post a Comment