ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ
ಮಾಗಡಿಯಲ್ಲಿ ಕುಮಾರಸ್ವಾಮಿನ ಅವರಿಗೆ ಬೃಹತ್ ಅವರೇಕಾಳಿನ ಹಾರ ಹಾಕಲಾಯಿತು. 350 ಕೆಜಿ ತೂಕದ ಬೃಹತ್ ಹಾರ ತಯಾರು ಮಾಡಿ ಮಾಗಡಿಯ ಕಲ್ಯಾಗೇಟ್ ಸರ್ಕಲ್ನಲ್ಲಿ ಹಾರ ಹಾಕಿ ಸ್ವಾಗತಿಸಲಾಯ್ತು
ರಾಮನಗರ (Ramanagara) ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ (Panchartna yatre) ಪ್ರಾರಂಭ ಆಗಿದ್ದು, ಮಾಗಡಿಯ ಕೋಟೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಿತು. ಮೊದಲಿಗೆ ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಿಎಂ ಕುಮಾರಸ್ವಾಮಿ (Former CM HD Kumaraswamy) ಪೂಜೆ ಮಾಡುವ ಮೂಲಕ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆಗೆ ಮಾಗಡಿಯಲ್ಲಿ (Magadi) ಚಾಲನೆ ನೀಡಿದರು. ಮಾಗಡಿ ಶಾಸಕ ಎ.ಮಂಜು ಸೇರಿದಂತೆ ಹಲವರು ಉಪಸ್ಥಿತಿಯಲ್ಲಿ ಸಮಾವೇಶ ಅದ್ದೂರಿಯಾಗಿ ನಡೆಯಿತು. ಮಾಗಡಿಯ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ ರಾಜ್ಯದಲ್ಲಿ ಪಂಚರತ್ನ ಯೋಜನೆ ಆರಂಭ ಆಗಿದೆ, ಈಗಾಗಲೇ ಪ್ರವಾಸ ಆರಂಭ ಆಗಿದೆ. ಜನರಿಂದ ನಮಗೆ ಉತ್ತಮ ರೀತಿಯ ಪ್ರೋತ್ಸಾಹ ಸಿಕ್ತಾ ಇದೆ, ಇದು ಮುಂದುವರೆಯಲಿದೆ ಎಂದರು
ಇನ್ನು ರಾಮನಗರ ಮುಗಿಸಿ ಮಂಡ್ಯ ಜಿಲ್ಲೆಗೆ ಹೋಗಲಿದೆ. ಮಾರ್ಚ್ 20 ವರೆಗೆ ನಿರಂತರವಾಗಿ ನಡೆಯಲಿದೆ. ಪ್ರತಿ ಕುಟುಂಬದ ಭವಿಷ್ಯಕ್ಕೆ ಪಂಚರತ್ನ ಯೋಜನೆ ಸಹಕಾರಿಯಾಗಲಿದೆ ಎಂದ
ಇಂದು ಶ್ರೀನಿವಾಸ ಕಲ್ಯಾ
ನನ್ನ ಹುಟ್ಟುಹಬ್ಬ ಪ್ರಯುಕ್ತ ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣ ನಡೆಯಲಿದೆ. ಪಕ್ಷಾತೀತವಾಗಿ ಮಾಡುತ್ತಿರುವ ಕಾರ್ಯಕ್ರಮ ಇದಾಗಿದೆ. ಪಕ್ಷಕ್ಕೂ ಅದಕ್ಕೂ ಸಂಬಂಧ ಇಲ್ಲ. ರಾಮನಗರದಲ್ಲಿ ವಿಶೇಷವಾದ ಕಾರ್ಯಕ್ರಮ ಇದು, ನಾಡಿನ ನಮ್ಮ ಭಾಗದ ಜನತೆಗೆ ಕಲ್ಯಾಣೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ತಿರುಮಲ ದೇವಸ್ಥಾನದಿಂದ 80 ಜನ ಅರ್ಚಕರು ಇರಲಿದ್ದು ಸ್ವತಃ ಅವರೇ ಪೂಜೆ ನೆರವೇರಿಸಲಿದ್ದಾರೆಂದು ತಿಳಿಸಿ
ಇನ್ನು ಯಾವ ಪಕ್ಷದವರಾದರೂ ಭಾಗಿಯಾಗಬಹುದು, ದೇವೇಗೌಡರು ಮತ್ತು ಚೆನ್ನಮ್ಮನವರು ಪೂಜೆಯಲ್ಲಿ ಭಾಗಿಯಾಗ್ತಾರೆಂದರು. ಇನ್ನು ಮಾಗಡಿ ಶಾಸಕ ಎ.ಮಂಜು ಸಕ್ರಿಯವಾಗಿ ಅಭಿವೃದ್ಧಿ ಕಾರ್ಯಗಳಿಗೆ ಶ್ರಮವಹಿಸಿದ್ದಾರೆ. ರಾಜಕೀಯಕ್ಕೆ ಅವಕಾಶ ಕೊಡದೇ ಕೆಲಸ ಮಾಡುತ್ತಿರೋದು ಜನರಿಗೂ ಗೊತ್ತಿದೆ. ಜನರ ಆಶೀರ್ವಾದ ಸದಾ ಮಂಜು ಮೇಲಿದೆ ಎಂದು ಹೆಚ್.ಡಿ.ಕುಮಾರಸ್ವಾಮಿರವರು ತಿಳಿಸಿದರು
ಬೃಹತ್ ಅವರೇಕಾಳಿನ
ಮಾಗಡಿಯಲ್ಲಿ ಕುಮಾರಸ್ವಾಮಿನ ಅವರಿಗೆ ಬೃಹತ್ ಅವರೇಕಾಳಿನ ಹಾರ ಹಾಕಲಾಯಿತು. 350 ಕೆಜಿ ತೂಕದ ಬೃಹತ್ ಹಾರ ತಯಾರು ಮಾಡಿ ಮಾಗಡಿಯ ಕಲ್ಯಾಗೇಟ್ ಸರ್ಕಲ್ನಲ್ಲಿ ಹಾರ ಹಾಕಿ ಸ್ವಾಗತಿಸಲಾಯ್ತು
ಶ್ರೀಪತಿಹಳ್ಳಿಯ ಮಾತೃಶ್ರೀ ಕೃಷ್ಣಪ್ಪರಿಂದ ಬೃಹತ್ ಹಾರ ಹಾಕಿದ್ದು ಕುಮಾರಣ್ಣ ಸಿಎಂ ಆಗಲಿ. ಹಾಗಾಗಿ ಈ ಹಾರ ಹಾಕುತ್ತಿದ್ದೇವೆ. ಇದುಕಿದ ಅವರೇಕಾಳು ಮಾಗಡಿಯಲ್ಲಿ ಪ್ರಸಿದ್ಧಿ. ಹಾಗಾಗಿ ಕುಮಾರಣ್ಣಗೆ ಇದೇ ಹಾರ ಹಾಕ್ತಿದ್ದೇವೆ ಎಂದು ಹೇಳಿದ
ಪಟ್ಟಣದ ಕಲ್ಯಾಗೇಟ್ ಸರ್ಕಲ್ ನಿಂದ ಮಾಗಡಿಯ ಕೆಂಪೇಗೌಡರ ಕೋಟೆಯವರೆಗೆ ರೋಡ್ ಶೋ ನಡೆಸಿದರು. ಮಾಗಡಿ ಶಾಸಕ ಎ.ಮಂಜು ಬೃಹತ್ ಸಮಾವೇಶ ಆಯೋಜನೆ ಮಾಡಿದ್ದ ಕಾರಣ ರಾತ್ರಿಯಾದರೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿ ಬೆಂಬಲ ನೀಡಿದ
ಎರಡು ಕಿಲೋ ಮೀಟರ್ ರೋಡ್
2 KM ರೋಡ್ ಶೋ ಮೂಲಕ ಕುಮಾರಸ್ವಾಮಿ ಭರ್ಜರಿ ಪ್ರಚಾರ ಮಾಡಿ ನಂತರ ಕೋಟೆ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. 50 ಸಾವಿರಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಅನಿತಾ ಕುಮಾರಸ್ವಾಮಿ, ಸಾ.ರಾ.ಮಹೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದ
ನಾನು ಕಣ್ಣೀರು ಹಾಕುವುದು ರಾಜಕೀಯವಾಗಿ ಅಲ್ಲ. ನಾನು ಭಾವನಾತ್ಮಕ ಜೀವಿ. ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ. ಮಂಜಣ್ಣನಿಗೆ ಮಾಗಡಿಯ ಜನ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿಕೊಂಡ
ಇದನ್ನೂ ಓದಿ: Rewards for Police Informer: ಕ್ರೈಮ್ ಬಗ್ಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಿ, 5 ಲಕ್ಷ ರೂಪಾಯಿ ಬಹುಮಾನ ಪಡೆಯಿ
ಶಾಸಕ ಹೆಚ್.ಸಿ.ಬಾಲಕೃಷ್ಣಗೆ ಟಾಂ
ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಬನ್ನಿ, ಖಾಲಿ ಡಬ್ಬ ಅಲ್ಲಾಡಿಸಬೇಡಿ ಎಂದು ಶಾಸಕ ಎ.ಮಂಜು ವೇದಿಕೆಯಲ್ಲಿ ವಾಗ್ದಾಳಿ ನಡೆಸಿದರು. ಮಾಗಡಿಯಲ್ಲಿ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇವೆ. ಆದರೆ ಕೆಲವರು ಕುಮಾರಣ್ಣನ ಬೆನ್ನಿಗೆ ಚೂರಿ ಹಾಕಿದರು. ನಾವು ಆ ಕೆಲಸ ಮಾಡಲ್ಲ ಎಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣಗೆ ಟಾಂಗ್ ನೀಡಿದರು. ಗ್ರಿ!ರು.ರು. ಶೋರು.ರು..ಹಾರ.ದರುಣರು...ಸಕ ಹೆಚ್.ಸಿ.ಬಾಲಕೃಷ್ಣಗೆ ಟಾಂಗ್ ನೀಡಿದರು.

Post a Comment