Belagavi: ಅಧಿವೇಶನಕ್ಕೆ ಬರುತ್ತಿದ್ದ ವಾಹನದ ಮೇಲೆ ಮರಾಠಿ ಪುಂಡರಿಂದ ಕಲ್ಲು ತೂರಾಟ; ಚಾಲಕನಿಗೆ ಜೀವ ಬೆದರಿಕೆ


  ಕಲ್ಲು ತೂರಾಟಕಳೆದ ಚಳಿಗಾಲ ಅಧಿವೇಶನ ವೇಳೆಯೂ ಎಂಇಎಸ್ ಪುಂಡರು ಗಲಾಟೆ ಮಾಡಿದ್ದರು. 50ಕ್ಕೂ ಅಧಿಕ ಸರ್ಕಾರಿ ವಾಹನ ಮೇಲೆ ಕಲ್ಲು ತೂರಿ ವಿಕೃತಿ ಮೆರದಿದ್ದರು

 Karnataka – Maharashtra Border Issue: ಬೆಳಗಾವಿ: ಗಡಿ ವಿವಾದ ತಾರಕ್ಕೇರುತ್ತಿರುವ ಮಧ್ಯೆಯೇ ರಾಜ್ಯ ಸರ್ಕಾರ ಬೆಳಗಾವಿ ಸುವರ್ಣಸೌಧದಲ್ಲಿ (Suvarna Soudha) ಅಧಿವೇಶನ ನಡೆಸುತ್ತಿದೆ. ಅಧಿವೇಶನ (Winter Session) ಯಶಸ್ವಿಗೆ ಇಡೀ ಜಿಲ್ಲಾಡಳಿತವೇ ಮೈಗೊಡವಿ ನಿಂತಿದೆ. ಚಳಿಗಾಲ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣಸೌಧವೂ ಸಜ್ಜುಗೊಳ್ಳುತ್ತಿದೆ. ಅಧಿವೇಶನ ಮುನ್ನವೇ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಪುಂಡಾಟ ಮೆರೆದಿದ್ದಾರೆ. ಅಧಿವೇಶನದ ಕರ್ತವ್ಯಕ್ಕೆ ಬರುತ್ತಿದ್ದ ವಾಹನ ಮೇಲೆ ಕಲ್ಲು ತೂರಿ (Stone Pelting) ಪುಂಡರು ವಿಕೃತಿ ಮೆರೆದಿದ್ದಾರೆ. ರಾತ್ರಿ ಬೆಳಗಾವಿ (Belagavi) ಹೊರವಲಯದ ಸುವರ್ಣಸೌಧದ ಎದುರೇ ಈ ದುರ್ಘಟ‌ನೆ ನಡೆದಿದೆ

ಬೆಂಗಳೂರಿನಿಂದ ಬೆಳಗಾವಿಗೆ ಚಳಿಗಾಲ ಅಧಿವೇಶನಕ್ಕೆ ಕರ್ನಾಟಕ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಸೇರಿದ ವಾಹನ ನಿಯೋಜಿಸಲಾಗಿತ್ತು. ಬೆಳಗಾವಿ ಪ್ರವೇಶಿಸುತ್ತಿದ್ದಂತೆ ವಾಹನ ಅಡ್ಡಗಟ್ಟಿದ ಪುಂಡರು ಕಲ್ಲು ತೋರಿದ್ದಾ

ಇದನ್ನೂ ಓದಿ: Karnataka Politics: ಅಧಿವೇಶನಕ್ಕೂ ಮುನ್ನ ರಮೇಶ್ ಜಾರಕಿಹೊಳಿ, ಈಶ್ವರಪ್ಪ ಕನಸು ನನಸಾಗುತ್ತಾ

ಚಾಲಕನಿಗೆ ಜೀವ ಬೆದರಿ

 ಘಟನೆಯಿಂದ ಬುಲೆರೋ ವಾಹನ ಮುಂಭಾಗದ ಗಾಜು ಪುಡಿ ಪುಡಿ ಆಗಿದೆ. ವಾಹನ ಚಾಲಕ ಚೇತನ್ ಎಂಬವರಿಗೂ ಜೀವ ಬೆದರಿಕೆ ಹಾಕಿದ್ದಾರೆ. ವಾಹನದ ಜೊತೆಗೆ ಚಾಲಕನ ಮೇಲೂ ಪುಂಡರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಪುಂಡರಿಂದ ತಪ್ಪಿಸಿಕೊಂಡು ಚಾಲಕ ಚೇತನ್ ಹೊರಬಂದಿದ್ದಾರೆ

ಅಮಿತ್ ಶಾ ಸಭೆ ಬೆನ್ನಲ್ಲೇ 

 ಅಧಿವೇಶನ ಮುನ್ನವೇ ವಿಕೃತಿ ಮರೆದ ಮರಾಠಿ ಪುಂಡರ ಕೃತ್ಯಕ್ಕೆ ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ನಿನ್ನೆಯಷ್ಟೇ ಉಭಯ ರಾಜ್ಯಗಳ ಸಿಎಂ ಸಭೆ ನಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಂತಿ ಕಾಪಾಡುವಂತೆ ಸಲಹೆ ನೀಡಿದ್ರು

ಸಭೆ ನಡೆದು ಕೆಲವೇ ಗಂಟೆಗಳಲ್ಲಿ ಪುಂಡರು ಕೃತ್ಯ ಎಸಗಿದ್ದಾರೆ. ಕರ್ನಾಟಕ ಸರ್ಕಾರಿ ವಾಹನವನ್ನೇ ಪುಂಡರು ಟಾರ್ಗೆಟ್ ಮಾಡಿದ್ದಾ

ಕಿಡಿಗೇಡಿಗಳ ಬಂಧನಕ್ಕೆ ಆಗ್ರ

ಈ ಬಗ್ಗೆ ಪ್ರತಿಕ್ರಿಯಿಸಿದ ಕರವೇ ರಾಜ್ಯ ಸಂಚಾಲಕ ಮಹಾದೇವ್ ತಳವಾರ, ಅಧಿವೇಶನ ವೇಳೆ ಎಂಇಎಸ್ ಪದೇ ಪದೇ ಕ್ಯಾತೆ ತೆಗೆಯುತ್ತದೆ. ಅಮಿತ್ ಶಾ ಸೂಚನೆ ಬಳಿಕವೂ ಮರಾಠಿ ಭಾಷಿಕರು ವಿಕೃತಿ ‌ಮೆರೆದಿರುವುದು ಖಂಡನೀಯ. ತಕ್ಷಣವೇ ಕಿಡಿಗೇಡಿಗಳನ್ನು ಬಂಧಿಸಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ

ಕಳೆದ ಚಳಿಗಾಲ ಅಧಿವೇಶನ ವೇಳೆಯೂ ಎಂಇಎಸ್ ಪುಂಡರು ಗಲಾಟೆ ಮಾಡಿದ್ದರು. 50ಕ್ಕೂ ಅಧಿಕ ಸರ್ಕಾರಿ ವಾಹನ ಮೇಲೆ ಕಲ್ಲು ತೂರಿ ವಿಕೃತಿ ಮೆರದಿದ್ದರು. ಅಧಿವೇಶನ ಮುನ್ನವೇ ಪುಂಡರಿಗೆ ಜಿಲ್ಲಾಡಳಿತ ಮೂಗುದಾರ ಹಾಕಬೇಕಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿ

ಡಿಸಿಪಿ ಮಾಧ್ಯಮ ಪ್ರ

ಈ ಬಗ್ಗೆ ಬೆಳಗಾವಿ ನಗರ ಪೊಲೀಸ್‌ ಇಲಾಖೆಯ ಸುವ್ಯವಸ್ಥೆ ವಿಭಾಗದ ಡಿಸಿಪಿ ಮಾಧ್ಯಮ ಪ್ರಕಟಣೆ ನೀಡಿದ್ದು, ಹಲಗಾ ಬಳಿ ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟದ ವಿಚಾರವಾಗಿ ನಾವು ದೂರಿನ ಅಸಲಿತನವನ್ನು ಪರಿಶೀಲಿಸುತ್ತಿದ್ದೇವೆ.  ದಯವಿಟ್ಟು ಘಟನೆಯ ಬಗ್ಗೆ ಸ್ಪಷ್ಟಪಡಿಸಲು ಸ್ವಲ್ಪ ಸಮಯ ನೀಡಿ ಎಂದು ಹೇಳಿದ್ದಾ

ಸಿಎಂ ಬೊಮ್ಮಾಯಿಗೆ ಟೆನ್ಷನ್, ಟೆನ್ಷ

ಬೆಳಗಾವಿಯಲ್ಲಿ (Belagavi Session) ಡಿಸೆಂಬರ್ 19 ರಿಂದ 29 ರವರೆಗೆ ಚಳಿಗಾಲದ ಅಧಿವೇಶನ (Winter Session) ನಡೆಯಲಿದೆ. ಆದರೆ ಬೆಳಗಾವಿ ಅಧಿವೇಶನ ಸಿಎಂ ಬೊಮ್ಮಾಯಿ ಪಾಲಿಗೆ ಮಗ್ಗುಲ ಮುಳ್ಳಾಗೋ ಲಕ್ಷಣ ಕಾಣಿಸುತ್ತಿದೆ. ಇದಕ್ಕೆ ಕಾರಣ ರಮೇಶ್ ಜಾರಕಿಹೊಳಿ (Former Ministers), ಈಶ್ವರಪ್ಪ ಮತ್ತು ಮಂತ್ರಿಸ್ಥಾನ ಸಿಗದ ಅತೃಪ್ತ

ಬಿಜೆಪಿ ಬಿಡಲ್ಲ ಅಂತಿದ್ರೂ ಪಕ್ಷದ ಕಾರ್ಯಕ್ರಮಗಳಿಂದ ರಮೇಶ್ ಜಾರಕಿಹೊಳಿ ದೂರ ಉಳಿದುಕೊಂಡಿದ್ದಾರೆ. ಮಂತ್ರಿಸ್ಥಾನ ಕೊಟ್ಟರಷ್ಟೇ ಪಕ್ಷಕ್ಕೆ ನಾನು ಹತ್ತಿರ ಅನ್ನೋದು ಈಶ್ವರಪ್ಪ ಮಾತು. ಇದು ಸಹಜವಾಗಿಯೇ ವಿಪಕ್ಷಗಳಿಗೆ ಆಹಾರ ಆಗುತ್ತೆ ಅನ್ನೋದು ಸರ್ಕಾರಕ್ಕೆ ಚಿಂತೆಯಾಗಿದೆ. ರು.ನ್!ರೆ.ಕಟಣೆದೆ.ದರು.ಹರೆ..ದಾಳಿ.ಕೆ?ರೆ... ಆಗುತ್ತೆ ಅನ್ನೋದು ಸರ್ಕಾರಕ್ಕೆ ಚಿಂತೆಯಾಗಿದೆ.

Post a Comment

Previous Post Next Post