ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಕಂದಾಯ ಇಲಾಖೆಯು ಸಹಾಯಕ ಕಂದಾಯ ಅಧಿಕಾರಿಗಳು (ARO), ಕಂದಾಯ ಅಧಿಕಾರಿಗಳು (RO), ಕಂದಾಯ ನಿರೀಕ್ಷಕರು (RI), ಮತ್ತು ತೆರಿಗೆ ನಿರೀಕ್ಷಕರು (TI) ಮುಂತಾದ ಅನೇಕ ಅಧಿಕಾರಿಗಳು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದವರಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಪಾಲಿಕೆಯ ಎಂಟು ವಲಯಗಳಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಇಲಾಖೆ ಪಟ್ಟಿ ಸಿದ್ಧಪಡಿಸುತ್ತಿದೆ.
ಈ ಬೆಳವಣಿಗೆ ಬಿಬಿಎಂಪಿ ಕೌನ್ಸಿಲ್ ಮತ್ತು ವಿಧಾನಸಭೆ ಚುನಾವಣೆಗೆ ಪಾಲಿಕೆ ಸಜ್ಜಾಗುತ್ತಿರುವ ಸೂಚನೆ ಎನ್ನಲಾಗಿದೆ. ಕಂದಾಯ ಇಲಾಖೆಯ ವಿಶೇಷ ಆಯುಕ್ತ ಆರ್.ಎಲ್.ದೀಪಕ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ(The New Indian Express) ಮಾತನಾಡಿ, ಪಾಲಿಕೆ ಕಂದಾಯ ಇಲಾಖೆಯಲ್ಲಿ ಸುಮಾರು 800 ಅಧಿಕಾರಿಗಳು ಎಆರ್‌ಒ, ಆರ್‌ಒ, ಆರ್‌ಐ ಮತ್ತು ಟಿಐಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ನಿರ್ದಿಷ್ಟ ವಲಯದ ವಾರ್ಡ್‌ನಲ್ಲಿ ವರ್ಷಗಳಿಂದ ಕೆಲಸ ಮಾಡುತ್ತಿರಬಹುದು. ಚುನಾವಣೆಯ ಸಮಯದಲ್ಲಿ ಅವರನ್ನು ವಿವಿಧ ವಲಯಗಳಿಗೆ ವರ್ಗಾಯಿಸಲಾಗುತ್ತದೆ
ಇದನ್ನೂ ಓದಿ: ಚುನಾವಣೆಯತ್ತ ಅಧಿಕಾರಿಗಳ ಚಿತ್ತ: ಒತ್ತುವರಿ ಕಾರ್ಯಾಚರಣೆ ಅಂತ್ಯ ಸಾಧ್ಯತೆ, ಮುಂದಿನ ಪ್ರವಾಹ ಪರಿಸ್ಥಿತಿವರೆಗೂ ಸ್ಥಳೀಯರು ನಿರಾ
ಚುನಾವಣಾ ಆಯೋಗದ ನಿರ್ದೇಶನಗಳನ್ನು ಅನುಸರಿಸಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಇದು ಪಾರದರ್ಶಕತೆಯನ್ನು ತರುವ ಉದ್ದೇಶವಾಗಿದೆ ಎಂದರು. ಪಾಲಿಕೆ ಆಡಳಿತ ಇಲಾಖೆ ಈ ಕುರಿತು ನಿರ್ಧಾರ ಕೈಗೊಂಡು ಶೀಘ್ರವೇ ವರ್ಗಾವಣೆಗೆ ಆದೇಶ ಹೊರಡಿಸಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿ
ಬಿಬಿಎಂಪಿ ಮತದಾರರ ದತ್ತಾಂಶವನ್ನು ತಿದ್ದಿದ ಆರೋಪದ ಮೇಲೆ ಕಳಂಕಿತ ಎನ್‌ಜಿಒ ಚಿಲುಮೆಯೊಂದಿಗೆ ಕೈಜೋಡಿಸಿದ್ದ ಆರೋಪದ ಮೇಲೆ ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರದ ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸಿ ನಂತರ ಈ ಬೆಳವಣಿಗೆ ನಡೆದಿದೆ. ಕಾನೂನಿಗೆ ವಿರುದ್ಧವಾದ ಎನ್‌ಜಿಒಗೆ ಕಂದಾಯ ಅಧಿಕಾರಿಗಳು ಬೂತ್ ಮಟ್ಟದ ಅಧಿಕಾರಿ ಕಾರ್ಡ್‌ಗಳನ್ನು ನೀಡಿದ್ದರು. ಈಗಾಗಲೇ ಕೆಂಗಣ್ಣಿಗೆ ಗುರಿಯಾಗಿರುವ ಬಿಬಿಎಂಪಿ ಹೆಚ್ಚಿನ ವಿವಾದವನ್ನು ತಪ್ಪಿಸಲು, ಈ ಬದಲಾವಣೆಯನ್ನು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ವೆ.ಳ!.ತ್ತಿದೆ.
.jpg)
Post a Comment